Asianet Suvarna News Asianet Suvarna News

ವಾಲ್ಮೀಕಿ ನಿಗಮ ಹಗರಣದ ಬೆನ್ನಲ್ಲೇ ಮೈಸೂರಿನಲ್ಲಿ ಮತ್ತೊಂದು ಹಗರಣ ಬೆಳಕಿಗೆ!

ವಾಲ್ಮೀಕಿ ಹಗರಣದ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಿಗೆ ಬಂದಿದ್ದು ಜನರ ಕಂದಾಯ ಹಣವನ್ನ ಸರ್ಕಾರಕ್ಕೆ ಕಟ್ಟದೇ ಸಿಬ್ಬಂದಿ ತಮ್ಮ ಖಾತೆಗೆ ಜಮೆ ಮಾಡಿಕೊಂಡ ಘಟನೆ ಮೈಸೂರು ತಾಲೂಕಿನ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ನಡೆದಿದೆ.

Misappropriation of revenue by three staff srirampur pattana panchayat mysuru rav
Author
First Published Jun 7, 2024, 3:21 PM IST | Last Updated Jun 7, 2024, 3:21 PM IST

ಮೈಸೂರು (ಜೂ.7): ವಾಲ್ಮೀಕಿ ಹಗರಣದ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಿಗೆ ಬಂದಿದ್ದು ಜನರ ಕಂದಾಯ ಹಣವನ್ನ ಸರ್ಕಾರಕ್ಕೆ ಕಟ್ಟದೇ ಸಿಬ್ಬಂದಿ ತಮ್ಮ ಖಾತೆಗೆ ಜಮೆ ಮಾಡಿಕೊಂಡ ಘಟನೆ ಮೈಸೂರು ತಾಲೂಕಿನ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ನಡೆದಿದೆ.

ಸರ್ಕಾರದ ಲಕ್ಷಾಂತರ ರೂಪಾಯಿ ಕಂದಾಯ ಹಣವನ್ನು ನೌಕರರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ತೆರಿಗೆದಾರರು ಪಾವತಿಸಿರುವ ಹಣಕ್ಕೆ ನಕಲಿ ರಸೀದಿ ನೀಡಿ, ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡಿರುವ ಸಿಬ್ಬಂದಿ. ಪಟ್ಟಣ ಪಂಚಾಯಿತಿ ಡೇಟಾ ಆಪರೇಟರ್ ನಮ್ರತಾ ಸೇರಿ ಮೂವರು ಸಿಬ್ಬಂದಿ ಕೃತ್ಯ ಆರೋಪ ಕೇಳಿಬಂದಿದೆ. ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿರುವ ಸಿಬ್ಬಂದಿ.

ತಾಯಿಗೆ ಎಳನೀರು ತರಲು ಹೋಗಿದ್ದ ಮಗ ತೆಂಗಿನಮರದಿಂದ ಬಿದ್ದು ಸಾವು!

ಕಳೆದ 15 ದಿನಗಳ ಹಿಂದೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಬಿ.ಶುಭಾ ತಪಾಸಣೆ ನಡೆಸಿದ್ದರು. ಈ ವೇಳೆ ಹಗರಣ ನಡೆದಿಉವುದು ಬೆಳಕಿಗೆ ಬಂದಿತ್ತು. ವರ್ಗಾವಣೆ ಹಾಗೂ ಇನ್ನಿತರ ಮೂಲಕಗಳಿಂದ ಹಣ ಹಣದ ದುರುಪಯೋಗವಾಗಿದೆ. ಹಗರಣ ಕುರಿತು ಸ್ಥಳದಲ್ಲೇ ತಂಡ ರಚಿಸಿ ತನಿಖೆಗೆ ಆದೇಶಿಸಿರುವ ಅಧಿಕಾರಿ. ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲು ಮುಂದಿನ ಕ್ರಮ ಜರುಗಿಸಲು ಸಿದ್ಧತೆ ನಡೆಸಿದ ಅಧಿಕಾರಿಗಳು. ವಾಲ್ಮೀಕಿ ನಿಗಮ ಅಕ್ರಮ ವರ್ಗಾವಣೆ ಪ್ರಕರಣ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿರುವ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದ್ದು  ವಿರೋಧ ಪಕ್ಷಗಳ ಆರೋಪಕ್ಕೆ ಇಂಬು ಕೊಟ್ಟಂತಾಗಿದೆ.

Latest Videos
Follow Us:
Download App:
  • android
  • ios