ಹುಬ್ಬಳ್ಳಿ - ಧಾರವಾಡ ಪಾಲಿಕೆಗೆ ಸರ್ಕಾರದಿಂದ ಬರಬೇಕಿದೆ 250 ಕೋಟಿಗೂ ಅಧಿಕ!
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಸುಮಾರು .254 ಕೋಟಿಗೂ ಅಧಿಕ ಅನುದಾನ ಬರಬೇಕಿದೆ. ಪಿಂಚಣಿ ಸೇರಿದಂತೆ ವಿವಿಧ ಅನುದಾನ ಸರ್ಕಾರದಿಂದ ಬಂದಿಲ್ಲ. ಹೀಗಾಗಿ, ಮಹಾನಗರದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಆಗುತ್ತಿಲ್ಲ. ಆದಕಾರಣ ಅನುದಾನ ಬಿಡುಗಡೆಗೊಳಿಸಿ ಎಂದು ಪಾಲಿಕೆಯ ರಾಜ್ಯ ಸರ್ಕಾರಕ್ಕೆ ಮೊರೆ ಇಟ್ಟಿದೆ. ಆದರೆ ಅಲ್ಲಿಂದ ಈವರೆಗೂ ಸ್ಪಂದನೆ ಸಿಕ್ಕಿಲ್ಲ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಫೆ.22) : ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಸುಮಾರು .254 ಕೋಟಿಗೂ ಅಧಿಕ ಅನುದಾನ ಬರಬೇಕಿದೆ. ಪಿಂಚಣಿ ಸೇರಿದಂತೆ ವಿವಿಧ ಅನುದಾನ ಸರ್ಕಾರದಿಂದ ಬಂದಿಲ್ಲ. ಹೀಗಾಗಿ, ಮಹಾನಗರದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಆಗುತ್ತಿಲ್ಲ. ಆದಕಾರಣ ಅನುದಾನ ಬಿಡುಗಡೆಗೊಳಿಸಿ ಎಂದು ಪಾಲಿಕೆಯ ರಾಜ್ಯ ಸರ್ಕಾರಕ್ಕೆ ಮೊರೆ ಇಟ್ಟಿದೆ. ಆದರೆ ಅಲ್ಲಿಂದ ಈವರೆಗೂ ಸ್ಪಂದನೆ ಸಿಕ್ಕಿಲ್ಲ.
ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ(Government of karnataka)ದಿಂದ ಬರೋಬ್ಬರಿ .254 ಕೋಟಿ ಅಧಿಕ ಅನುದಾನ ಬರಬೇಕಿದೆ. ಈ ಬಗ್ಗೆ ಇತ್ತೀಚಿಗೆ ಪಾಲಿಕೆಯ ಮೇಯರ್(mayor) ಈರೇಶ ಅಂಚಟಗೇರಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರೊಂದಿಗೆ ಕೌನ್ಸಿಲ್ ಭವನ ನಿರ್ಮಾಣಕ್ಕೆ ಪ್ರತ್ಯೇಕವಾಗಿ .30 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಎಂದು ಕೋರಿದ್ದಾರೆ. ಆದರೆ ಸರ್ಕಾರ ಮಾತ್ರ ಈವರೆಗೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ಅಯ್ಯೋ ! ಏನಿದು ರೋಡೇ, ಏನ್ ದರೋಡೆ? : ಮೂರೇ ದಿನಕ್ಕೆ ಕಿತ್ತು ಹೋದ ರಸ್ತೆ!
ಯಾವುದರಿಂದ ಎಷ್ಟೆಷ್ಟು?
ಪಾಲಿಕೆಯಿಂದ ಹೆಸ್ಕಾಂಗೆ .64.76 ಕೋಟಿ ವಿದ್ಯುತ್ ಬಿಲ್ ಪಾವತಿಸಬೇಕಿದೆ. ಇನ್ನು ನಿವೃತ್ತಿದಾರರ ವೇತನವನ್ನು ಸಣ್ಣ ಉಳಿತಾಯ ಹಾಗೂ ಆಸ್ತಿ ಋುಣ ಇಲಾಖೆಯಿಂದ ಪಾವತಿಸಲು ಆದೇಶಿಸಲಾಗಿದೆ. ಪಾಲಿಕೆಯಿಂದ 2014- 15ರಿಂದ 2017ರ ವರೆಗೆ .121.04 ಕೋಟಿ ಪಿಂಚಣಿಯನ್ನು ಪಾಲಿಕೆಯ ಸಾಮಾನ್ಯ ನಿಧಿಯಿಂದ ಪಾವತಿಸಲಾಗಿದೆ. ಇದರಲ್ಲಿ ಸರ್ಕಾರ ಈವರೆಗೆ .68.09 ಕೋಟಿ ಈಗಾಗಲೇ ಬಿಡುಗಡೆ ಮಾಡಿದೆ. ಇನ್ನೂ .52.95 ಕೋಟಿ ಸರ್ಕಾರ ಪಾಲಿಕೆಗೆ ನೀಡಬೇಕಿದೆ.
ಇನ್ನೂ 3ನೇ ಹಂತದ .100 ಕೋಟಿ ಅನುದಾನದಲ್ಲಿ .97.14 ಕೋಟಿಯನ್ನು ಬಿಡುಗಡೆ ಮಾಡಿದೆ. ಆದರೆ ಇನ್ನೂ .2.85 ಕೋಟಿಗೂ ಅಧಿಕ ಅನುದಾನ ಬಾಕಿಯುಳಿಸಿಕೊಂಡಿದೆ. .100 ಕೋಟಿ ವಿಶೇಷ ಅನುದಾನದಲ್ಲಿ .74.31 ಕೋಟಿ ನೀಡಿದೆ. ಇನ್ನೂ .26 ಕೋಟಿ ಸರ್ಕಾರದಿಂದ ಬರುವುದು ಬಾಕಿಯಿದೆ. ಇನ್ನೂ ಎಫ್‌ಎಸ್‌ಸಿ ವಿಶೇಷ ಅನುದಾನವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ .107.83 ಕೋಟಿ ಆರ್ಥಿಕ ಇಲಾಖೆ ಅನುಮೋದಿಸಿದೆ. ಆದರೆ, ಈ ವರೆಗೂ ಮಹಾನಗರ ಪಾಲಿಕೆಗೆ ಮಾತ್ರ ಅನುದಾನ ಬಂದಿಲ್ಲ. ಇದೆಲ್ಲವೂ ಸೇರಿ ಬರೋಬ್ಬರಿ .254.07 ಕೋಟಿ ಅನುದಾನ ಸರ್ಕಾರದಿಂದ ಬರುವುದು ಬಾಕಿಯಿದೆ.
ಕೌನ್ಸಿಲ್ ಭವನ:
ಇದರೊಂದಿಗೆ ಹುಬ್ಬಳ್ಳಿಯಲ್ಲಿ ಪಾಲಿಕೆಯ ಕೇಂದ್ರ ಕಚೇರಿಯಿದೆ. ಆದರೆ ಪಾಲಿಕೆಯ ಸಭಾಭವನ ಚಿಕ್ಕದಿದೆ. ಮೊದಲು 45 ಜನ ಸದಸ್ಯರಿದ್ದಾಗ ಈ ಸಭಾಭವನ ನಿರ್ಮಿಸಲಾಗಿತ್ತು. ಬಳಿಕ ವಾರ್ಡ್‌ಗಳ ಸಂಖ್ಯೆ 67ಕ್ಕೇರಿತ್ತು. ಇದೀಗ 67ರಿಂದ 82ಕ್ಕೇರಿದೆ. 82 ಜನ ಸದಸ್ಯರೊಂದಿಗೆ ಸಾಮಾನ್ಯಸಭೆ ನಡೆಸಲು ಈಗಿರುವ ಸಭಾಭವನ ಸಾಕಾಗುತ್ತಿಲ್ಲ. ಆದಕಾರಣ ಸಭಾಭವನವನ್ನು ಹೊಸದಾಗಿ ನಿರ್ಮಿಸಬೇಕಿದೆ. ಇದಕ್ಕಾಗಿ .30 ಕೋಟಿ ವೆಚ್ಚದ ಅಂದಾಜು ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಸಂಬಂಧ ಈಗಾಗಲೇ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಠರಾವು ಕೂಡ ಪಾಸ್ ಮಾಡಲಾಗಿದೆ. ಪಾಲಿಕೆಯಿಂದ ವಸೂಲಾಗುವ ತೆರಿಗೆ ಸೇರಿದಂತೆ ವಿವಿಧ ಸಂಪನ್ಮೂಲಗಳಿಂದ ಜನರಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಸರ್ಕಾರದಿಂದ ಬರಬೇಕಾದ ಅನುದಾನವೂ ವಿಳಂಬವಾಗಿರುವುದರಿಂದ ಪಾಲಿಕೆ ತುಂಬಾ ಆರ್ಥಿಕ ಹೊರೆಯನ್ನು ಅನುಭವಿಸಬೇಕಾಗಿದೆ. ಆದಕಾರಣ ಕೌನ್ಸಿಲ್ ಕಟ್ಟಡ ನಿರ್ಮಿಸಲು ಸರ್ಕಾರದಿಂದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಪಾಲಿಕೆಯೂ ಕೋರಿದೆ. ಇದಕ್ಕೂ ಇನ್ನೂ ಸರ್ಕಾರದಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ.
ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಪಾಲಿಕೆಗೆ ಬರಬೇಕಾದ ಅನುದಾನಕ್ಕಾಗಿ ಸಾಕಷ್ಟುಪ್ರತಿಭಟನೆಗಳು ನಡೆದಿದ್ದವು. ಇದೀಗ .254.07 ಕೋಟಿ ಪಾಲಿಕೆಗೆ ಬರಬೇಕಿದ್ದರೂ ಈ ವರೆಗೂ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಇದು ಸಾರ್ವಜನಿಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಇನ್ನಾದರೂ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಪಾಲಿಕೆಯನ್ನು ಸದೃಢಗೊಳಿಸಲು ಸರ್ಕಾರದಿಂದ ಬರಬೇಕಾದ ಅನುದಾನ ಹಾಗೂ ಕೌನ್ಸಿಲ್ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.
ದಾವಣಗೆರೆ ಪಾಲಿಕೆ ಬಜೆಟ್: ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಬಂದ ಕಾಂಗ್ರೆಸ್ ಸದಸ್ಯರು!
ರಾಜ್ಯ ಸರ್ಕಾರದಿಂದ ಮಹಾನಗರ ಪಾಲಿಕೆ(Hubli - Dharwad Metropolitan Corporationಗೆ .254 ಕೋಟಿಗೂ ಅಧಿಕ ಅನುದಾನ ಬರುವುದು ಬಾಕಿಯಿದೆ. ಈ ಅನುದಾನ ಬಾರದಿರುವುದರಿಂದ ಪಾಲಿಕೆಗೆ ಆರ್ಥಿಕ ಹೊರೆಯಾಗಿದೆ. ಶೀಘ್ರದಲ್ಲೇ ಬಿಡುಗಡೆ ಮಾಡಬೇಕು. ಜತೆಗೆ ಕೌನ್ಸಿಲ್ ಕಟ್ಟಡ ನಿರ್ಮಾಣಕ್ಕೆ .30 ಕೋಟಿ ವಿಶೇಷ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಈರೇಶ ಅಂಚಟಗೇರಿ, ಮೇಯರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ