Asianet Suvarna News Asianet Suvarna News

ಅಯ್ಯೋ ! ಏನಿದು ರೋಡೇ, ಏನ್‌ ದರೋಡೆ? : ಮೂರೇ ದಿನಕ್ಕೆ ಕಿತ್ತು ಹೋದ ರಸ್ತೆ!

ಚಿತ್ರದುರ್ಗ ತಾಲೂಕಿನ ಗೊಡಬನಹಾಳು-ಸೊಂಡೇಕೊಳ ಗ್ರಾಮಗಳ ನಡುವೆ ನಡೆಯುತ್ತಿರುವ ಡಾಂಬರ್‌ ರಸ್ತೆ ಕಳಪೆ ಕಾಮಗಾರಿ ಸಾಮಾಜಿಕ ಜಾಲ ತಾಣಗಳಲ್ಲಿ ವಿಪರೀತ ಸದ್ದು ಮಾಡುತ್ತಿದೆ. ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ದಿದೆ. ರಸ್ತೆ ಹೀಗೂ ಮಾಡಬಹುದಾ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Poor road asphalting of Sondekola village at chitradurga rav
Author
First Published Feb 22, 2023, 9:10 AM IST

ಚಿತ್ರದುರ್ಗ (ಫೆ.22) : ಚುನಾವಣೆಗಳು ಹತ್ತಿರ ಬಂದಂತೆಲ್ಲ ಕೋಟೆ ನಾಡು ಚಿತ್ರದುರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಬಿರುಸಿನಿಂದ ಸಾಗಿದ್ದು, ಗುಣಮಟ್ಟದ ಬಗ್ಗೆ ಯಾವುದೇ ಖಾತರಿಗಳು ಕಂಡು ಬರುತ್ತಿಲ್ಲ. ಚಿತ್ರದುರ್ಗ ತಾಲೂಕಿನ ಗೊಡಬನಹಾಳು-ಸೊಂಡೇಕೊಳ ಗ್ರಾಮಗಳ ನಡುವೆ ನಡೆಯುತ್ತಿರುವ ಡಾಂಬರ್‌ ರಸ್ತೆ ಕಳಪೆ ಕಾಮಗಾರಿ ಸಾಮಾಜಿಕ ಜಾಲ ತಾಣಗಳಲ್ಲಿ ವಿಪರೀತ ಸದ್ದು ಮಾಡುತ್ತಿದೆ. ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ದಿದೆ. ರಸ್ತೆ ಹೀಗೂ ಮಾಡಬಹುದಾ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಗೊಡಬನಹಾಳು(Godabanahalu) ಗ್ರಾಮದಿಂದ ಸೊಂಡೇಕೊಳ, ನಂದೀಪುರ, ಓಬಣ್ಣನಹಳ್ಳಿ ಮಾರ್ಗವಾಗಿ ಉಪ್ಪನಾಯಕನಹಳ್ಳಿ ವರೆಗೆ ಸುಮಾರು 8 ಕಿಮೀ ರಸ್ತೆಯನ್ನು 3.17 ಕೋಟಿ ರುಪಾಯಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ(Asphalting work) ಕೈಗೆತ್ತಿಕೊಳ್ಳಲಾಗಿದೆ. ಈ ಮೊದಲು ಇದ್ದ ರಸ್ತೆಯನ್ನು ಅಗೆದು ಕಿತ್ತು ಹಾಕಿ, ಅದರ ಮೇಲೆ ಹೊಸದಾಗಿ ರಸ್ತೆ ಮಾಡಲಾಗುತ್ತಿದೆ. ನಾಯಿ ನಾಲಗೆಯಷ್ಟುದಪ್ಪವಿರುವ ಈ ರಸ್ತೆ ಹೇಗೆ ಅಳೆದು ತೂಗಿದರೂ ಶೇಕಡವಾರು ಪ್ರಮಾಣದಲ್ಲಿ ಗುಣಮಟ್ಟವನ್ನು ದಾಖಲಿಸುತ್ತಿಲ್ಲ. ಇಂತಹ ರಸ್ತೆ ನಿರ್ಮಿಸಲು ಗುತ್ತಿಗೆದಾರನಿಗೆ ಹೇಗೆ ಮನಸ್ಸು ಬಂತೋ ಅರ್ಥವಾಗದಂತಾಗಿದೆ.

ದಾವಣಗೆರೆ ಪಾಲಿಕೆ ಬಜೆಟ್‌: ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಬಂದ ಕಾಂಗ್ರೆಸ್‌ ಸದಸ್ಯರು!

ಸಾಮಾನ್ಯವಾಗಿ ಡಾಂಬರ್‌ ರಸ್ತೆ ಮಾಡುವಾಗ 12 ಎಂಎಂ ಜಲ್ಲಿ ( ಕಾಂಕ್ರಿಟ್‌ ರಸ್ತೆಗಾದರೆ 20 ಎಂಎಂ ಜಲ್ಲಿ ) ಹಾಕಿ ಮೆಟಲಿಂಗ್‌ ಹಾಕಿ, ಗ್ರಿಪ್‌ ಹಿಡಿಯುವಂತೆ ಮಾಡಿ ಅದರ ಮೇಲೆ ಡಾಬರ್‌ ಹಾಕುತ್ತಾರೆ. ಆದರೆ ಇಲ್ಲಿ ಅಂತಹ ಚಹರೆಗಳು ಕಾಣಿಸುತ್ತಿಲ್ಲ. ಹಳೇ ರಸ್ತೆ ಮೇಲೆ ಮಣ್ಣು ಹಾಕಿ ಡಾಂಬರ್‌ ಎಳೆದಂತೆ ಕಾಣಿಸುತ್ತಿದೆ. ಗ್ರಾಮದ ಯುವಕರು ಈ ರಸ್ತೆ ಕಂಡು ಹೌಹಾರಿದ್ದಾರೆ. ನಿಧಾನವಾಗಿ ಕಾಲಲ್ಲ ಒದ್ದರೆ ರಸ್ತೆ ಕಿತ್ತು ಹೋಗುತ್ತಿದೆ.

ಡಾಂಬರ್‌ ರಸ್ತೆ ಮೇಲೆ ದನಗಳು ಏನಾದರೂ ಸಗಣಿ ಹಾಕಿದರೆ ಮಡಿಕೆಯ ಬೋಕಿ ಬಿಲ್ಲೆಯಿಂದ ಕೆರೆದು ತೆಗೆಯುತ್ತಾರೆ. ಇಲ್ಲವೇ ಬೋಕಿಯಿಂದ ಎಬ್ಬುತ್ತಾರೆ. ನಾಯಿ ನಾಲಗೆಯಷ್ಟುದಪ್ಪವಿರುವ ಈ ರಸ್ತೆಯನ್ನು ಗ್ರಾಮಸ್ಥರು ಎಬ್ಬಲು ಶುರು ಮಾಡಿದ್ದು, ರೊಟ್ಟಿಯ ರೀತಿ ಮುರಿದು ಹೋಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ರಸ್ತೆ ವಿಡಿಯೋ ಹರಿದಾಡುತ್ತಿದ್ದಂತೆ ವೀಕ್ಷಣೆಗೆಂದು ಜನರ ತಂಡೋಪ ತಂಡವಾಗಿ ಧಾವಿಸಿ ಬರುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಾಮಗಾರಿ ಅಚ್ಚರಿ ತರಿಸಿದೆ.

ಕಳಪೆ ಗುಣಮಟ್ಟದ ಕಾಮಗಾರಿ(Poor work) ಕಂಡು ಮುಂದುವರಿಸದಂತೆ ಗ್ರಾಮಸ್ಥರು ತಡೆ ಹಿಡಿದಿದ್ದಾರೆ. ಇಂತಹ ಕಳಪೆ ಕೆಲಸ ನಾವು ಒಪ್ಪಲು ತಯಾರಿಲ್ಲವೆಂದಿದ್ದಾರೆ. ಸೊಂಡೇಕೊಳ ಗ್ರಾಮ(sondekola road)ದ ಯುವಕರ ತಂಡ ಮಂಗಳವಾರ ಗುತ್ತಿಗೆದಾರನಿಗೆ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ. ಸದ್ಯ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

Davanagere News: ಮಾ.4ಕ್ಕೆ ಮೇಯರ್‌,ಉಪ ಮೇಯರ್‌ ಚುನಾವಣೆ

ನಮ್ಮ ಜೀವ ಮಾನದಲ್ಲಿಯೇ ಇಂತಹ ಕಳಪೆ ಕಾಮಗಾರಿ ನೋಡಿಲ್ಲ. ಇಡೀ ರಸ್ತೆಯನ್ನು ಕೈಯಲ್ಲಿ ಕಿತ್ತು ಹಾಕಬಹುದು. ಕಳಪೆ ಕಾಮಗಾರಿ ಬಗ್ಗೆ ಶಾಸಕರಾದ ತಿಪ್ಪಾರೆಡ್ಡಿ ಅವರ ಗಮನಕ್ಕೆ ತರಲಾಗಿದೆ. ಗುತ್ತಿಗೆದಾರನ ಕರೆಯಿಸಿ ಗುಣಮಟ್ಟದ ರಸ್ತೆ ಮಾಡಲು ಸೂಚಿಸುವುದಾಗಿ ತಿಳಿಸಿದ್ದಾರೆ.

--ನಾಗರಾಜ ಎನ್‌.ಶಿವಜ್ಜೆರ, ರೈತ, ಸೊಂಡೇಕೊಳ ಗ್ರಾಮ

Follow Us:
Download App:
  • android
  • ios