Covid Crisis: 236 ದಿನದ ಬಳಿಕ ಬೆಂಗ್ಳೂರಲ್ಲಿ 20 ಸಾವಿರ ಅಧಿಕ ಜನಕ್ಕೆ ವೈರಸ್‌

*  ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ 20ರ ಸನಿಹಕ್ಕೆ
*  ಮುಂದಿನ ವಾರ ವಾರಾಂತ್ಯದ ಕರ್ಫ್ಯೂ ಪಾಲಿಸಲ್ಲ
*  ಇಂದು, ನಾಳೆ ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಮಾತ್ರ

More Than 20000 Covid Cases on Jan 14th in Bengaluru After 236 Days grg

ಬೆಂಗಳೂರು(ಜ.15):  ನಗರದಲ್ಲಿ ಕೊರೋನಾ(Coronavirus) ಆರ್ಭಟ ಮುಂದುವರೆದಿದ್ದು, 236 ದಿನಗಳ ಬಳಿಕ 20 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1.09 ಲಕ್ಷಕ್ಕೆ ಏರಿಕೆಯಾಗಿದ್ದು, ಪಾಸಿಟಿವಿಟಿ ದರ(Positivity Rate) ಶೇ.19.62ಕ್ಕೆ ಹೆಚ್ಚಳವಾಗಿದೆ.

ಶುಕ್ರವಾರ ಒಂದೇ ದಿನ 20,121 ಜನರಲ್ಲಿ ಸೋಂಕು ದೃಢಪಟ್ಟಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಈ ಹಿಂದೆ ಮೇ 9ರಂದು 20,897 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ಹೊಸ ಪ್ರಕರಣಗಳ ಪತ್ತೆಯಿಂದ ನಗರದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 13.73 ಲಕ್ಷಕ್ಕೆ ಏರಿಕೆಯಾಗಿದೆ. 943 ಪುರುಷರು, 752 ಮಹಿಳೆಯರು ಸೇರಿದಂತೆ 1,695 ಮಂದಿ ಸೋಂಕಿನಿಂದ ಬಿಡುಗಡೆಯಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 12.47 ಲಕ್ಷಕ್ಕೆ ಹೆಚ್ಚಳವಾಗಿದೆ. 5 ಪುರುಷರು, 2 ಮಹಿಳೆಯರು ಸೇರಿ 7 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ನಗರದಲ್ಲಿ ಮೃತರಾದವರ ಸಂಖ್ಯೆ 16,444ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

Corona Crisis: ಶಾಲೆಗಳಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 850 ಕೇಸ್‌

ಪಾಲಿಕೆಯ ಬೆಳ್ಳಂದೂರು, ಬೇಗೂರು, ನ್ಯೂತಿಪ್ಪಸಂದ್ರ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ 10 ವಾರ್ಡ್‌ಗಳಲ್ಲಿ ಕಳೆದ ಏಳು ದಿನಗಳಿಂದ ಅತ್ಯಧಿಕ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಪೈಕಿ ಶುಕ್ರವಾರ ಬೆಳ್ಳಂದೂರು ವಾರ್ಡ್‌ನಲ್ಲಿ 348, ಬೇಗೂರು 235, ನ್ಯೂತಿಪ್ಪಸಂದ್ರ 184, ಎಚ್‌ಎಸ್‌ಆರ್‌ ಲೇಔಟ್‌ 178, ರಾಜರಾಜೇಶ್ವರಿ ನಗರ 175, ಹೊರಮಾವು 171, ದೊಡ್ಡನೆಕ್ಕುಂದಿ 162, ಕೋರಮಂಗಲ 153, ಶಾಂತಲಾ ನಗರ 150 ಮತ್ತು ವಸಂತಪುರ ವಾರ್ಡ್‌ನಲ್ಲಿ 141 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬಿಬಿಎಂಪಿಯ(BBMP) ಎಂಟು ವಲಯಗಳಲ್ಲಿ ಕಂಟೈನ್ಮೆಂಟ್‌ ವಲಯಗಳ(Containment Zones) ಸಂಖ್ಯೆಯೂ ಹೆಚ್ಚಳವಾಗಿದ್ದು ಬೊಮ್ಮನಹಳ್ಳಿ 127, ಯಲಹಂಕ 59, ದಕ್ಷಿಣ 58, ಪಶ್ಚಿಮ 54, ಪೂರ್ವ 43, ದಾಸರಹಳ್ಳಿ 6 ಮತ್ತು ರಾಜರಾಜೇಶ್ವರಿ ನಗರದಲ್ಲಿ 4 ಕಂಟೈನ್ಮೆಂಟ್‌ ಸೇರಿದಂತೆ 578 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಗುರುತಿಸಿದ್ದಾರೆ.

164 ಪೊಲೀಸರಿಗೆ ಸೋಂಕು ದೃಢ

ಬೆಂಗಳೂರು(Bengaluru) ನಗರ ಪೊಲೀಸ್‌(Police) ವಿಭಾಗದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಶುಕ್ರವಾರ ಒಂದೇ ದಿನ 164 ಪೊಲೀಸರಿಗೆ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. ಈ ಮೂಲಕ ಕಳೆದ ನವೆಂಬರ್‌ನಿಂದ ಈವರೆಗೆ (ಒಟ್ಟು 75 ದಿನಗಳಲ್ಲಿ) ಕೊರೋನಾ ಸೋಂಕಿಗೆ ತುತ್ತಾದ ಪೊಲೀಸರ ಒಟ್ಟು ಸಂಖ್ಯೆ 504ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಕಳೆದೊಂದು ವಾರದಿಂದ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ನಡುವೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಒಂದೇ ದಿನ ಪಶ್ಚಿಮ ವಿಭಾಗದಲ್ಲಿ 36 ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅದರಲ್ಲಿಯೂ ಎರಡು ಡೋಸ್‌ ಲಸಿಕೆ(Vaccine) ಪಡೆದಿರುವ ಪೊಲೀಸರಲ್ಲೇ ಸೋಂಕು ಕಾಣಿಸಿಕೊಂಡಿದೆ.

ಕಡಿಮೆ ಲಕ್ಷಣ ಇರುವ ಸೋಂಕಿತ ಪೊಲೀಸರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಗಂಭೀರ ಲಕ್ಷಣವಿದ್ದವರು ಪೊಲೀ​ಸ​ರಿ​ಗಾ​ಗಿಯೇ ನಿರ್ಮಿ​ಸಿ​ರುವ ಕೊರೋನಾ ಆರೈಕೆ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೊರೋನಾ ಮುಂಚೂಣಿ ಕಾರ್ಯ​ಕ​ರ್ತ​ರಾಗಿ ಕರ್ತವ್ಯ ನಿರ್ವ​ಹಿ​ಸು​ತ್ತಿ​ರುವ ಪೊಲೀ​ಸ​ರಿಗೆ ಮುನ್ನೆ​ಚ್ಚ​ರಿಕಾ ಡೋಸ್‌(ಬೂಸ್ಟರ್‌ ಡೋಸ್‌) ನೀಡ​ಲಾಗುತ್ತಿದೆ. ಇದರ ನಡುವೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಪೊಲೀಸರಲ್ಲಿ ಆತಂಕ ಹೆಚ್ಚಿಸಿದೆ.

ಇಂದು, ನಾಳೆ ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಮಾತ್ರ

ವಾರಾಂತ್ಯದ ಕರ್ಫ್ಯೂ(Weekend Curfew) ನಿಯಮ ಪಾಲಿಸುವುದಿಲ್ಲ. ಬದಲಿಗೆ ವಾರಾಂತ್ಯದ ಕರ್ಫ್ಯೂ ದಿನಗಳಲ್ಲೂ ಹೋಟೆಲ್‌ಗಳನ್ನು ಮುಕ್ತವಾಗಿ ತೆರೆಯುತ್ತೇವೆ ಎಂದು ಎಚ್ಚರಿಸಿದ್ದ ಹೋಟೆಲ್‌ ಮಾಲೀಕರು ಇದೀಗ ಈ ಶನಿವಾರ ಮತ್ತು ಭಾನುವಾರಕ್ಕೆ ಸೀಮಿತವಾಗಿ ವಾರಾಂತ್ಯದ ಕರ್ಫ್ಯೂ ನಿಯಮ ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

ಪರಿಣಾಮ, ಶನಿವಾರ ಮತ್ತು ಭಾನುವಾರ (ಜ.15, ಜ.16) ಹೋಟೆಲ್‌ಗಳಲ್ಲಿ(Hotel) ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲು ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ನಿರ್ಧರಿಸಿದೆ.

Karnataka Lockdown ಕರ್ನಾಟಕ ಲಾಕ್‌ಡೌನ್ ಆಗುತ್ತಾ? ಮೋದಿ ಸಭೆ ಬಳಿಕ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ

ವಾರಾಂತ್ಯದ ಕರ್ಫ್ಯೂ, ರಾತ್ರಿ ಕರ್ಫ್ಯೂ(Night Curfew) ವಿಧಿಸಿರುವುದರಿಂದ ಹೋಟೆಲ್‌ ಮಾಲಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರವಿಲ್ಲದ ಪರಿಣಾಮ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಾರಾಂತ್ಯದ ಕರ್ಫ್ಯೂ ವೇಳೆ ಕೇವಲ ಪಾರ್ಸೆಲ್‌ ಮಾತ್ರ ನೀಡಬೇಕು ಎಂಬ ಸರ್ಕಾರದ ನಿಯಮವನ್ನು ಪಾಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಬಳಿಕ ಅಂತಿಮವಾಗಿ, ಜ.15 ಮತ್ತು 16ರಂದು ಎರಡು ದಿನದ ಮಟ್ಟಿಗೆ ಮಾತ್ರ ವಾರಾಂತ್ಯದ ಕಫä್ರ್ಯ ನಿಯಮಗಳನ್ನು ಅಳವಡಿಸಿಕೊಳ್ಳಲಾಗುವುದು. ಮುಂದಿನ ವಾರದಿಂದ ಯಾವುದೇ ಕಾರಣಕ್ಕೂ ಪಾಲಿಸುವುದಿಲ್ಲ ಎಂದು ಸಂಘದ ಉಪಾಧ್ಯಕ್ಷ ಎಚ್‌.ಎಸ್‌.ಸುಬ್ರಹ್ಮಣ್ಯ ಹೊಳ್ಳ ಕನ್ನಡಪ್ರಭಗೆ ಮಾಹಿತಿ ನೀಡಿದರು.

ಮುಂದಿನ ವಾರ ಕರ್ಫ್ಯೂ ಪಾಲಿಸಲ್ಲ: 

ಕೊರೋನಾ ಹರಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಸರ್ಕಾರ ಸಣ್ಣಪುಟ್ಟವ್ಯಪಾರಿಗಳಿಗೆ ತೊಂದರೆ ನೀಡುತ್ತಿದೆ. ಆದ್ದರಿಂದ ಮುಂದಿನ ವಾರದ ಶನಿವಾರ ಹಾಗೂ ಭಾನುವಾರ (ಜ.22 ಮತ್ತು 23) ವಿಧಿಸಿರುವ ವಾರಾಂತ್ಯದ ಕರ್ಫ್ಯೂವನ್ನು ನಾವು ಪಾಲಿಸುವುದಿಲ್ಲ. ಹೋಟೆಲ್‌ಗಳ ಸೇವೆಯನ್ನು ಒದಗಿಸುತ್ತೇವೆ. ಸಾಮಾನ್ಯ ದಿನಗಳಲ್ಲಿ ಕೊರೋನಾ ನಿಯಮಗಳ ಪ್ರಕಾರ ಶೇ.50ರ ಆಸನಗಳಂತೆ ಗ್ರಾಹಕರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios