ಬೆಂಗಳೂರು(ಜೂ.23): ಈವರೆಗೆ ಸುಮಾರು 73 ಜನ ಪೊಲೀಸ್ ಸಿಬ್ಬಂದಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಬೆಂಗಳೂರಲ್ಲಿ ಇನ್ನಷ್ಟು ಏರಿಯಾ ಸಂಪೂರ್ಣ ಸೀಲ್‌ಡೌನ್ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿಗಳು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರಾಣ ಕೊಟ್ಟು ಕೊರೋನಾವನ್ನು ಎದುರಿದ್ದಾರೆ ಎಂದು ಹೇಳಿದ್ದಾರೆ. ಸುಮಾರು ಪೊಲೀಸ್ ಠಾಣೆಯಲ್ಲಿ ಕರೋನಾ ಗಂಭೀರವಾಗಿ ಹರಡಿದೆ ಎಂದಿದ್ದಾರೆ.

ಗಡಿಯಲ್ಲಿ ಮತ್ತೆ ಪಾಕಿಸ್ತಾನ ದಾಳಿ: ಯೋಧ ಹುತಾತ್ಮ!

ಕಾಲಾಪಿಪಾಳ್ಯ, ಕೆ ಆರ್ ಮಾರುಕಟ್ಟೆ ಪೊಲೀಸ್ ಸ್ಟೇಷನ್, ವಿವಿ ಪುರುಂ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇದುವರೆಗೆ 74 ಪೊಲೀಸರಿಗೆ ಕರೋನಾ ಧೃಡ ಪಟ್ಟಿದೆ. ಮೂರು ಜನ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕರೋನಾ ಹರಡದಂತೆ ತೀವ್ರ ಸ್ವರೂಪದ ಎಚ್ಚರಿಕೆಯನ್ನು ತೆಗೆದುಕೊಂಡಿದ್ದೇವೆ. ವಿಶೇಷವಾಗಿ 55 ವರ್ಷ ಮೇಲ್ಪಟ್ಟ ಸಿಬ್ಬಂದಿ ವರ್ಕ್ ಫ್ರಮ್ ಹೋಮ್ ಕೊಟ್ಟಿದ್ದೇವೆ. ಇನ್ನೂ ರಜೆಗೆ ತೆರಳಿದ ಸಿಬ್ಬಂದಿಗಳ‌ನ್ನು 15  ದಿನ ಕ್ವಾರಟೈನ್ ಮಾಡಿದ ಬಳಿಕ ಪೊಲೀಸ್ ಸ್ಟೇಷನ್ ಗೆ ಸೇರಿಸುತ್ತಿದ್ದೇವೆ ಎಂದಿದ್ದಾರೆ.

ಪತಂಜಲಿಯಿಂದ ಕೊರೋನಿಲ್ ಔಷಧ ಬಿಡುಗಡೆ: 5 ದಿನದಲ್ಲಿ ಸೋಂಕಿತ ಗುಣಮುಖ..!

ಎಲ್ಲಾ ಪೊಲೀಸ್ ಠಾಣೆಯ ಹೊರಗಡೆ ಶಾಮೀನ ಹಾಕಿ ಕೇಸ್ ಅಟೆಂಡ್ ಮಾಡುವಂತೆ ಸೂಚನೆ ನೀಡಲಾಗಿದೆ. ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ಇನ್ನಷ್ಟು ಏರಿಯಾಗಳನ್ನು ಸೀಲ್ ಡೌನ್ ಮಾಡುವ ತಿರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೊದಲ ಅವದಿಯಲ್ಲಿ ಲಾಕ್ ಡೌನ್ ಹೇಗೇ‌ ಇತ್ತೋ ಅದೇ ನಿಯಮ ಪಾಲನೆ ಮಾಡಲಾಗುವುದು ಎಂದಿದ್ದಾರೆ.