Asianet Suvarna News Asianet Suvarna News

ಕುಸ್ತಿ ಪಟುಗಳ ಮಾಸಾಶನ 500 ರಿಂದ 1000ಕ್ಕೆ ಹೆಚ್ಚಳ

ಕುಸ್ತಿ ಪಟುಗಳ ಮಾಸಾಶನವನ್ನು . 500 ರಿಂದ . 1000ಕ್ಕೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ನಗರದ ವಸ್ತು ಪ್ರದರ್ಶನ ಆವರಣದಲ್ಲಿನ ಡಿ. ದೇವರಾಜ ಅರಸು ಕುಸ್ತಿ ಅಖಾಡದಲ್ಲಿ ಭಾನುವಾರ ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕುಸ್ತಿ ಪಟುಗಳ ಮಾಸಾಶನವನ್ನು 500 ರಿಂದ 1000ಕ್ಕೆ ಹೆಚ್ಚಿಸಲಾಗುವುದು

Monthly pension increased for wrestlers in Mysore
Author
Bangalore, First Published Sep 30, 2019, 1:15 PM IST

ಮೈಸೂರು(ಸೆ.30): ಕುಸ್ತಿ ಪಟುಗಳ ಮಾಸಾಶನವನ್ನು 500 ರಿಂದ 1000ಕ್ಕೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ವಸ್ತು ಪ್ರದರ್ಶನ ಆವರಣದಲ್ಲಿನ ಡಿ. ದೇವರಾಜ ಅರಸು ಕುಸ್ತಿ ಅಖಾಡದಲ್ಲಿ ಭಾನುವಾರ ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕುಸ್ತಿ ಪಟುಗಳ ಮಾಸಾಶನವನ್ನು 500 ರಿಂದ 1000ಕ್ಕೆ ಹೆಚ್ಚಿಸಲಾಗುವುದು. ಅನೇಕ ಕುಸ್ತಿ ಪಟುಗಳು ತಮಗೆ ಬರಬೇಕಾದ ಮಾಸಾಶನ ಸರಿಯಾಗಿ ಬರುತ್ತಿಲ್ಲ ಎಂದು ತಿಳಿಸಿದ್ದಾರೆ. ಅವರ ಬಾಕಿ ಹಣವನ್ನು ಕೊಡಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮಹಾರಾಜರ ಕಾಲದಲ್ಲಿ ಕುಸ್ತಿ ಪಂದ್ಯಾವಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿತ್ತು. ಇದರಿಂದಾಗಿ ಮೈಸೂರಿಗೆ ಮತ್ತು ದಸರಾಕ್ಕೆ ಕುಸ್ತಿ ಪಂದ್ಯಾವಳಿಯು ವಿಶಿಷ್ಟಗುರುತು ತಂದುಕೊಟ್ಟಿದೆ. ಇಲ್ಲಿನ ಕುಸ್ತಿ ಮೂಲಕ ರಾಜ್ಯಕ್ಕೆ ಕೀರ್ತಿ ತರಬೇಕು. ಮೈಸೂರು ಅರಮನೆ ನಗರಿ ಎಂದು ಹೆಸರು ಮಾಡಿರುವಂತೆಯೇ ಗರಡಿ ಮನೆಯ ನಗರಿ ಎಂದು ಕೂಡ ಹೆಸರು ಮಾಡಿದೆ.

ದಸರೆಯಲ್ಲಿ ಮೋದಿ, ಬಿಎಸ್‌ವೈ ಗುಣಗಾನ ಮಾಡಿದ ಜಿಟಿಡಿ

ರಾಜಾಶ್ರಯದಲ್ಲಿ ಕುಸ್ತಿ ಜನಪ್ರಿಯ ಕ್ರೀಡೆಯಾಗಿ ಉತ್ತುಂಗಕ್ಕೇರಿತ್ತು ಎಂಬುದನ್ನು ನಾವು ಇತಿಹಾಸದಲ್ಲಿ ಗಮನಿಸಿದ್ದೇವೆ. ದೇಸಿ ಕ್ರೀಡೆಯು ಮೈ ಮನಸ್ಸನ್ನು ಚುರುಕುಗೊಳಿಸುತ್ತದೆ. ಉತ್ತಮ ಆಹಾರ ಮತ್ತು ವ್ಯಾಯಾಮವು ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಸ್ತಿಯು ಪ್ರೋತ್ಸಾಹ ಇಲ್ಲದೆ ಸೊರಗಿದೆ ಎಂದು ಅವರು ಹೇಳಿದ್ದಾರೆ. ಬಳಿಕ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕುಸ್ತಿ ಅಖಾಡದಲ್ಲಿನ ಪ್ರೇಕ್ಷಕರ ಕೂರುವ ಛಾವಣಿಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಕುಸ್ತಿ ಆರಂಭ:

ಕೆ.ಜಿ. ಕೊಪ್ಪಲಿನ ಪೈಲ್ವಾನ್‌ ಡಿ. ಕರಿಗೌಡ ಅವರು ಕುಸ್ತಿ ಪಂದ್ಯಾವಳಿಯ ಜ್ಯೋತಿನ್ನು ತಂದರು ಆ ಜ್ಯೋತಿಯನ್ನು ಮುಖ್ಯಮಂತ್ರಿಗಳು ಕುಸ್ತಿ ಪಂದ್ಯಾವಳಿಯ ಆಯೋಜಕರಿಗೆ ನೀಡಿದ್ದಾರೆ. ಮೊದಲನೆಯ ಕುಸ್ತಿಯು ಕನಕಪುರದ ಸ್ವರೂಪ್‌ ಗೌಡ ಮತ್ತು ನಜರ್‌ಬಾದ್‌ನ ಚೇತನ್‌ ಗೌಡ ನಡುವೆ ಹಾಗೂ ಕಿರಿಯ ವಯಸ್ಸಿನ ಪೈಲ್ವಾನ್‌ ಮುಖೇಸ್‌ ಗೌಡ ಮತ್ತು ಶ್ರೇಯಸ್‌ ನಡುವೆ ಸಮಬಲದ ಕುಸ್ತಿ ನಡೆಯಿತು.

ದಸರಾ ಆಹಾರ ಮೇಳದಲ್ಲಿ 90ಕ್ಕೂ ಹೆಚ್ಚು ಮಳಿಗೆ..! ಬಾಯಲ್ಲಿ ನೀರೂರಿಸುವಂತಿದೆ ಮೆನು

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಕುಸ್ತಿ ಉಪ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ಸದಸ್ಯರಾದ ಕಿರಣ್‌, ರಾಜು ಇದ್ದರು.

Follow Us:
Download App:
  • android
  • ios