ಗೃಹಲಕ್ಷ್ಮಿ ಎಫೆಕ್ಟ್: ಬ್ಯಾಂಕ್ ಮುಂದೆ ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು, ಸೆಕ್ಯೂರಿಟಿ ಗಾರ್ಡ್ ಹರಸಾಹಸ
ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ನಗದು ಖಾತೆಗೆ ಜಮೆಯಾಗಿರುವ ಬಗ್ಗೆ ಪರಿಶೀಲಿಸಲು ನೂರಾರು ಮಹಿಳೆಯರು ಚಿಕ್ಕಮಗಳೂರು ನಗರದ ಎಡಿಬಿಐ ಬ್ಯಾಂಕ್ಗೆ ಏಕಾ ಏಕಿ ಮುಗಿಬಿದ್ದ ಪ್ರಸಂಗ ಇಂದು ನಡೆಯಿತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.04): ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ನಗದು ಖಾತೆಗೆ ಜಮೆಯಾಗಿರುವ ಬಗ್ಗೆ ಪರಿಶೀಲಿಸಲು ನೂರಾರು ಮಹಿಳೆಯರು ಚಿಕ್ಕಮಗಳೂರು ನಗರದ ಎಡಿಬಿಐ ಬ್ಯಾಂಕ್ಗೆ ಏಕಾ ಏಕಿ ಮುಗಿಬಿದ್ದ ಪ್ರಸಂಗ ಇಂದು ನಡೆಯಿತು. ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿರುವ ಬ್ಯಾಂಕ್ ಶಾಖೆ ಬಳಿ ಬೆಳಗ್ಗೆ 8 ಗಂಟೆಯಿಂದಲೇ ಮಹಿಳೆಯರು ಜಮಾಯಿಸಲಾರಂಭಿಸಿದರು. 11 ಗಂಟೆ ವೇಳೆಗೆ ಉದ್ದನೆ ಸರತಿ ಸಾಲಿನ ಜೊತೆಗೆ ರಸ್ತೆ ತುಂಬೆಲ್ಲಾ ಮಹಿಳೆಯರೇ ಕಾಣಿಸಿಕೊಳ್ಳಲಾರಂಭಿಸಿದರು.
ಪೊಲೀಸರು ಹಾಗೂ ಸೆಕ್ಯೂರಿಟಿ ಗಾರ್ಡ್ ನಿಂದ ಹರಸಾಹಸ: ಬ್ಯಾಂಕಿನ ಮುಂದೆ ಇದ್ದಕ್ಕಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಮುಗಿಬಿದ್ದಿದ್ದನ್ನು ಕಂಡು ಬ್ಯಾಂಕ್ ಸಿಬ್ಬಂದಿಗಳು ಅವಾಕ್ಕಾದರು. ಎಂಜಿ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಇದರಿಂದ ಅಡಚಣೆಯುಂಟಾದ ಪರಿಣಾಮ ಪೊಲೀಸರೂ ಬರಬೇಕಾಯಿತು. ಎಲ್ಲರನ್ನೂ ಸರತಿಯಲ್ಲಿ ನಿಲ್ಲಿಸುವಲ್ಲಿ ಅವರೂ ಸಹ ಹರಸಾಹಸ ಪಡಬೇಕಾಯಿತು.ಚಿಕ್ಕಮಗಳೂರು ಸೇರಿದಂತೆ ಮೂಡಿಗೆರೆ, ಕಡೂರು ಇನ್ನಿತರೆ ತಾಲ್ಲೂಕುಗಳಿಂದಲೂ ಮಹಿಳೆಯರು ಆಗಮಿಸಿದ್ದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್ ಹುಸೇನ್
ಪ್ರತಿಯೊಬ್ಬರು ತಮ್ಮ ಮೊಬೈಲ್ ಪರಿಶೀಲಿಸಿಕೊಳ್ಳುತ್ತಿದ್ದುದು ಕಂಡುಬಂತು. ಜಿಲ್ಲಾ ಕೇಂದ್ರ ಹೊರತುಪಡಿಸಿ ಬೇರೆ ಯಾವ ತಾಲ್ಲೂಕುಗಳಲ್ಲೂ ಐಡಿಬಿಐ ಬ್ಯಾಂಕ್ನ ಶಾಖೆಗಳಿಲ್ಲದಿರುವ ಕಾರಣ ಎಲ್ಲರೂ ನಗರಕ್ಕೆ ಬರಬೇಕಾಯಿತು. ಹಲವು ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಖಾತೆ ಐಡಿಬಿಐ ಬ್ಯಾಂಕ್ನಲ್ಲಿ ತೆರೆಯಲಾಗಿದೆ. ಅಂತಹ ಬಹುತೇಕ ಖಾತೆದಾರರಿಗೆ ಗೃಹಲಕ್ಷ್ಮಿಗೆ ನೊಂದಣಿಯಾದ ಬಗ್ಗೆ ಇನ್ನೂ ಯಾವುದೇ ಮೆಸೇಜ್ ಸಹ ಬಂದಿಲ್ಲ. ಇಂತಹ ಗೊಂದಲಗಳ ಬಗ್ಗೆ ಬ್ಯಾಂಕ್ನಿಂದ ಸ್ಪಷ್ಟನೆ ಪಡೆದುಕೊಳ್ಳಲು ಆಗಮಿಸಿದ್ದರು.
ಬೊಂಬೆನಾಡಲ್ಲಿ ಹೆಚ್ಚಿದ ಕಳ್ಳರ ಹಾವಳಿ: ಖದೀಮರ ಹಾಟ್‌ಸ್ಪಾಟ್ ಆದ ಚನ್ನಪಟ್ಟಣ
ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇರುವ ಶಾಖೆ: ಗೃಹಲಕ್ಷ್ಮಿ ಯೋಜನೆಯ ನೊಂದಣಿಗೆ ಐಡಿಬಿಐ ಬ್ಯಾಂಕ್ನಲ್ಲಿ ಇಕೆವೈಸಿ ಮಾಡಿಸಬೇಕೆಂದು ಮಾಹಿತಿ ಕಳಿಸಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇವೆ. ನಮ್ಮದು ಸ್ತ್ರೀಶಕ್ತಿ ಕೇಂದ್ರದ ಮೂಲಕ ತೆರೆಯಲಾಗಿರುವ ಖಾತೆಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ಮಾತ್ರ ಬ್ಯಾಂಕ್ ಶಾಖೆ ಇರುವುದರಿಂದ ಎಲ್ಲರೂ ಇಲ್ಲಿಗೆ ಬರಬೇಕಾಗಿರುವುದು ಅನಿವಾರ್ಯವಾಗಿದೆ. ಕನಿಷ್ಟ ತಾಲ್ಲೂಕಿಗೆ ಒಂದಾದರೂ ಶಾಖೆಯನ್ನು ತೆರೆಯಬೇಕೆನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಕೆ.ಆರ್.ಪೇಟೆಯ ರಚಿತ ಎಂಬ ಮಹಿಳೆ ಹೇಳಿದರು.