ತ.ನಾಡಿನ ನಟೋರಿಯಸ್ ರೌಡಿ, ಡಿಎಂಕೆ ಮುಖಂಡ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್!
ಡಿಎಂಕೆ ಮುಖಂಡ ಎಂಕೆ ಅಳಗಿರಿ ಆಪ್ತ, ತಮಿಳುನಾಡಿನ ನಟೋರಿಯಸ್ ರೌಡಿ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಮಧುರೈನ ನಟೋರಿಯಸ್ ರೌಡಿಯಾಗಿರೊ ವಿಕೆ ಗುರುಸ್ವಾಮಿ ಮೂರ್ತಿ ಮೇಲೆ ಅಟ್ಯಾಕ್ ನಡೆಸಲಾಗಿದ್ದು, ಲಿಟಿಗೇಷನ್ ಇರೋ ಸೈಟ್ ವಿಚಾರವಾಗಿ ಬೆಂಗಳೂರಿಗೆ ಮಾತುಕತೆಗೆ ಬಂದಿದ್ದರು.
ಬೆಂಗಳೂರು (ಸೆ.04): ಡಿಎಂಕೆ ಮುಖಂಡ ಎಂಕೆ ಅಳಗಿರಿ ಆಪ್ತ, ತಮಿಳುನಾಡಿನ ನಟೋರಿಯಸ್ ರೌಡಿ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಮಧುರೈನ ನಟೋರಿಯಸ್ ರೌಡಿಯಾಗಿರೊ ವಿಕೆ ಗುರುಸ್ವಾಮಿ ಮೂರ್ತಿ ಮೇಲೆ ಅಟ್ಯಾಕ್ ನಡೆಸಲಾಗಿದ್ದು, ಲಿಟಿಗೇಷನ್ ಇರೋ ಸೈಟ್ ವಿಚಾರವಾಗಿ ಬೆಂಗಳೂರಿಗೆ ಮಾತುಕತೆಗೆ ಬಂದಿದ್ದರು. ನಿನ್ನೆ ಫ್ಲೈಟ್‌ನಲ್ಲಿ ಬಂದು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ ಗುರುಸ್ವಾಮಿ, ಇವತ್ತು ಮನೆಯೊಂದನ್ನು ಹುಡುಕಿ ಸಂಜೆ ಸೈಟ್ ಬಗ್ಗೆ ಮಾತುಕತೆ ಮಾಡಲು ಹೋಟೆಲ್‌ಗೆ ಹೋಗಿದ್ದರು.
ಬ್ರೋಕರ್ ಜೊತೆ ಗುರುಸ್ವಾಮಿ ಮಾತುಕತೆ ಮಾಡ್ತಾ ಇದ್ದರು. ಈ ವೇಳೆ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದ ನಾಲ್ಕೈದು ಜನರು ಏಕಾಏಕಿ ಅಟ್ಯಾಕ್ ಮಾಡಿದ್ದು, ಮಚ್ಚು ಲಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ. ಸುಮಾರು ಐದು ಮಂದಿ ಗುಂಪಿನಿಂದ ಲಾಂಗ್‌ನಿಂದ ಅಟ್ಯಾಕ್ ಮಾಡಿದ್ದು, ಗುರುಸ್ವಾಮಿ ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಹಲ್ಲೆಗೊಳಗಾದ ಗುರುಸ್ವಾಮಿ ಸ್ಥಿತಿ ಸದ್ಯ ಗಂಭೀರವಾಗಿದೆ. ಗುರುಸ್ವಾಮಿ 20 ನೇ ವರ್ಷದಲ್ಲೇ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದ.
ವಿಜಯಪುರದಲ್ಲಿ ಹೊಟೇಲ್ ಉದ್ಯಮಿಯನ್ನ ಯಾಮಾರಿಸಿದ ಸೈಬರ್ ಕಳ್ಳರು: 8 ಅಕೌಂಟ್‌ಗೆ ಕನ್ನ!
ಲೈಫ್ ಥ್ರೆಟ್ ಇದ್ದ ಹಿನ್ನೆಲೆ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ತಿರಲಿಲ್ಲ. ಮಧುರೈನಲ್ಲಿ ಸಾಕಷ್ಟು ದ್ವೇಷ ಕಟ್ಟಿಕೊಂಡಿದ್ದ ಗುರುಸ್ವಾಮಿ ಮೂರ್ತಿ, ಹತ್ಯೆಗೆ ಸ್ಕೆಚ್ ಹಾಕಿ ಇಂದು ಬೆಂಗಳೂರಿನ ಬಾಣಸವಾಡಿಯ ಸುಖ್ ಸಾಗರ್ ಹೋಟೆಲ್ ನಲ್ಲಿದ್ದಾಗ ಅಟ್ಯಾಕ್ ನಡೆಸಲಾಗಿದೆ. ಜೊತೆಯಲ್ಲಿದ್ದವರಿಂದಲೇ ಮಾಹಿತಿ ಲೀಕ್ ಮಾಡಿ ಅಟ್ಯಾಕ್ ಶಂಕೆ ವ್ಯಕ್ತಪಡಿಸಲಾಗಿದ್ದು, ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಗುರುಸ್ವಾಮಿ ಮೂರ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.