ಮಂಡ್ಯ(ಆ.27): ಜಿಲ್ಲೆಯ ಮೇಲುಕೋಟೆಯಲ್ಲಿ ಭಾನುವಾರ ರಾತ್ರಿ ಮೂರು ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿದೆ. ರಾತ್ರಿವೇಳೆ ದೇವಾಲಯದ ಬಾಗಿಲುಗಳ ಚಿಲಕಗಳನ್ನು ಮುರಿದು ಒಳನುಗ್ಗಿರುವ ಕಳ್ಳರು ಚಿನ್ನ ಸೇರಿದಂತೆ ಇತರ ವಸ್ತುಗಳನ್ನು ದೋಚಿದ್ದಾರೆ. 

ರಾತ್ರಿವೇಳೆ ದೇವಾಲಯದ ಬಾಗಿಲುಗಳ ಚಿಲಕಗಳನ್ನು ಮುರಿದು ಒಳನುಗ್ಗಿರುವ ಕಳ್ಳರು ಕಾಳಮ್ಮ ದೇವಾಲಯದ ಮೂರು ಚಿನ್ನದ ತಾಳಿ ಶನೀಶ್ವರ ದೇಗುಲದ ಅರವತ್ತು ಸಾವಿರ ನಗದು ಹಾಗೂ ಎರಡೂ ದೇಗುಲಗಳ ಹುಂಡಿ ಹಣ ಕದ್ದೊಯ್ದಿದ್ದಾರೆ. ಇದೇ ವೇಳೆ ಮನೆಯ ಮುಂದೆ ಇದ್ದ ಬೈಕೊಂದನ್ನೂ ಕಳವು ಮಾಡಿದ್ದಾರೆ.

ಮಂಡ್ಯ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯ ರಸ್ತೆಯ ಪೊಲೀಸ್‌ ವಸತಿಗೃಹ ಪಕ್ಕದಲ್ಲೇ ಇರುವ ಕಾಳಮ್ಮ ದೇವಾಲಯ, ಮುಕ್ತಿನಾಥದೇಗುಲ ಹಾಗೂ ಶನೀಶ್ವರ ದೇವಾಲಯಗಳ ಬೀಗ ಒಡೆದಿರುವ ಕಳ್ಳರು ಹುಂಡಿ ಹಣ ಹಾಗೂ ಸಣ್ಣಪುಟ್ಟಒಡವೆ ದೋಚಿದ್ದಾರೆ.

ಹುಂಡಿ ದೋಚಿದ ಕಳ್ಳರು:

ಕಡೆಯ ಶ್ರಾವಣ ಶನಿವಾರದಂದು ದೇವಾಲಯಗಳಿಗೆ ಹೆಚ್ಚಿನ ಭಕ್ತರು ಹುಂಡಿಗೆ ಹಣ ಹಾಕಿರುವುದನ್ನು ಅರಿತು ಮೂರು ದೇಗುಲಗಳ ಹುಂಡಿ ದೋಚಿದ್ದಾರೆ. ಹುಂಡಿಯಲ್ಲಿ ನೋಟುಗಳನ್ನು ಮಾತ್ರ ಕದ್ದೊಯ್ದಿರುವ ಕಳ್ಳರು ಚಿಲ್ಲರೆಗಳನ್ನು ಪಕ್ಕದಲ್ಲೇ ಬಿಸಾಡಿದ್ದಾರೆ. ಕಾಳಮ್ಮನ ದೇಗುಲದ ಬಾಗಿಲು ಮುರಿದು ಒಳಹೋಗಿರುವ ಕಳ್ಳರು ಹುಂಡಿಯಲ್ಲಿರುವ ಐದುಸಾವಿರದಷ್ಟಿದ್ದ ಹಣದೋಚಿ ಗಾಡ್ರೇಜ್‌ ಬೀರು ಮುರಿದು ತಾಳಿಗಳನ್ನು ಸಾಗಿಸಿದ್ದಾರೆ.

ಮಂಡ್ಯ: ಮಳೆ ಅಬ್ಬರ, ಸಂತೆ ಮೈದಾನ ಜಲಾವೃತ

ಮುಕ್ತಿನಾಥನ ದೇಗುಲದಲ್ಲಿ ಹುಂಡಿಯನ್ನು ದೋಚಿ ಅದರಲ್ಲಿದ್ದ ಅಂದಾಜು ಐದುಸಾವಿರ ಹಣ ಅಪಹರಿಸಿದ್ದಾರೆ. ಪಾರ್ವಟೆ ಮಂಟಪದ ಬಳಿ ಇರುವ ಶನೇಶ್ವರಸ್ವಾಮಿ ದೇವಾಲಯದಲ್ಲಿ ಅಂದಾಜು 60 ಸಾವಿರ ರೂ ಕಳ್ಳತನಮಾಡಿದ್ದಾರೆ ಎಂದು ದೇವಾಲಯದ ಅರ್ಚಕರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಬೈಕ್ ಕಳ್ಳತನ:

ಪೊಲೀಸ್‌ ವಸತಿಗೃಹಕ್ಕೆ ಸಮೀಪವಿರುವ ರಾಜ್ಯರಸ್ತೆಸಾರಿಗೆ ನಿಗಮದ ಚಾಲಕ ರಂಗನಾಥ್‌ ಅವರ ಮನೆಯ ಮುಂದೆ ನಿಲ್ಲಿಸಿದ್ದ 85 ಸಾವಿರ ರೂ ಮೌಲ್ಯದ ಹಿರೋ ಹೋಂಡಾ ಶೈನ್‌ ಬೈಕ್‌ ಸಹ ಕಳ್ಳತನವಾಗಿದೆ.

ಮನೆಯ ದೇಗುಲಗಳ ಕಳ್ಳತನ ಮಾಡಿದ ವೇಳೆ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ ಅನ್ನು ಸಹ ಕಳ್ಳರು ಭಾನುವಾರ ಕದ್ದೊಯ್ದಿದ್ದಾರೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲುಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.