ಹಲಗೂರು(ಆ.27): ಹಲಗೂರಿನಲ್ಲಿ ನಿತ್ಯವೂ ಸಂಜೆ ವೇಳೆ ಮಳೆ ಬರುತ್ತಿರುವುದರಿಂದ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಸಾಕಷ್ಟುತೊಂದರೆಯಾಗಿದೆ.

ಒಮ್ಮೆ ಜೋರಾಗಿ ಮತ್ತೊಮ್ಮೆ ಜಿಟಿ ಜಿಟಿ ಸುರಿತ್ತಿರುವ ಮಳೆಯಿಂದಾಗಿ ಜನ ಮನೆ ಬಿಟ್ಟು ಹೊರಗೆ ಬರಲು ಹಿಂಜರಿಯುವಂತಾಗಿದೆ. ಭಾನುವಾರ ಸುರಿದ ಮಳೆಯಿಂದಾಗಿ ಪ್ರತಿ ಭಾನುವಾರ ನಡೆಯುವ ಸಂತೆಗೆ ತೀವ್ರ ಅಡಚಣೆ ಉಂಟಾಯಿತು. ಹಲಗೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಗ್ರಾಮಸ್ಥರು ವ್ಯಾಪಾರ ವಹಿವಾಟು ನಡೆಸಲು ಹಲಗೂರಿನ ಈ ಸಂತೆಗೆ ಬರಬೇಕು. ಆದರೆ ಮಳೆರಾಯನ ಆಗಮನದಿಂದ ಮಳೆಯಿಂದಾಗಿ ಭಾನುವಾರ ಸಂತೆ ಅದ್ವಾನವಾಯಿತು. ವ್ಯಾಪಾರಸ್ಥರ ಗೋಳು ಹೇಳತೀರದ್ದಾಗಿತ್ತು.

ಮಂಡ್ಯ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವ್ಯಾಪಾರ-ವಹಿವಾಟು ಕುಸಿತ:

ಹಳ್ಳಿಗಳಿಂದ ಸೊಪ್ಪು, ತರಕಾರಿ ಮತ್ತು ಇತರೆ ಪದಾರ್ಥಗಳನ್ನು ತೆಗೆದುಕೊಳ್ಳಲು ಜನ ಸಂತೆಗೆ ಬರುತ್ತಾರೆ. ಸುರಿಯುತ್ತಿರುವ ಈ ಮಳೆಯಿಂದ ಮನೆಯಿಂದ ಹೊರಬರಲು ಆಗದೇ ಸಂತೆಯಲ್ಲಿ ವ್ಯಾಪಾರ- ವಹಿವಾಟು ಕುಸಿದಿತ್ತು. ಚನ್ನಪಟ್ಟಣ ರಸ್ತೆಯಿಂದ ಹರಿದು ಬರುವ ಮಳೆ ನೀರು ಸಂತೆ ಮೈದಾನಕ್ಕೆ ನುಗ್ಗಿ ಅಲ್ಲಿರುವ ಪದಾರ್ಥಗಳು ಜಲಾವೃತಗೊಂಡಿದ್ದರಿಂದ ವ್ಯಾಪಾರಸ್ಥರು ತೊಂದರೆ ಅನುಭವಿಸಿದರು.

ಕೃಷಿ ಚಟುವಟಿಕೆಗೆ ಅಡ್ಡಿ:

ಸಕಾಲದಲ್ಲಿ ಮಳೆಯಾಗಿ, ಬಿತ್ತನೆ ಮಾಡಿದರೆ ಮಾತ್ರ ಉತ್ತಮ ಫಸಲನ್ನು ನಿರೀಕ್ಷೆ ಮಾಡಬಹುದು. ಆದರೆ, ಏಕಾಏಕಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಿತ್ತನೆ ಬೀಜ ನೀರಿನಲ್ಲಿ ಕೊಳೆತು ಹೋಗುತ್ತಿದೆ. ದಿನಗೂಲಿ ನೌಕರರಿಗೂ ಸಹ ತುಂಬಾ ತೊಂದರೆಯಾಗಿದೆ ಎನ್ನುತ್ತಾರೆ ರೈತ ಎನ್‌.ಯೋಗೇಶ್‌.

ಚೆಲುವರಾಯಸ್ವಾಮಿ BSY ಬೆನ್ನಿಗೆ ನಿಂತಿದ್ದಾರೋ, ಸಿದ್ದರಾಮಯ್ಯ ಬೆನ್ನಿಗೋ?

ಕೂಲಿ ಕೆಲಸ, ವ್ಯವಸಾಯ ಮಾಡಲು ಆಗದೇ ಇರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ರೈತಾಪಿ ವರ್ಗ, ವ್ಯಾಪಾರಸ್ಥರಿಗೂ ಸಹ ವ್ಯಾಪಾರ ಇಲ್ಲದೆ ತೊಂದರೆಯಾಗಿದೆ. ಎಲ್ಲೆಂದರಲ್ಲಿ ನೀರು ನಿಂತಿದ್ದ ದೃಶ್ಯ ಕಂಡು ಬಂದಿತು.