Mysuru: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 135 ಮೊಬೈಲ್‌ಗಳ ಹಸ್ತಾಂತರ!

ನೀವು  ಕಡಿಮೆ ಮೊತ್ತಕ್ಕೆ ಅಪರಿಚಿತರ ಬಳಿ, ಕದ್ದ ದುಬಾರಿ ಮೊಬೈಲ್ ಸಿಗುತ್ತೆ ಅಂತಾ ಕೊಳ್ಳೊಕೆ ಹೋದ್ರೆ ಹುಷಾರು. ಯಾಕಂದ್ರೆ ನೀವೇನಾದ್ರೂ ಅಡ್ಡದಾರಿಯಲ್ಲಿ ಮೊಬೈಲ್ ಕೊಂಡ್ರೆ ಪೊಲೀಸ್ರು ನಿಮ್ಮ ಪೋನ್ ಜಪ್ತಿ ಮಾಡ್ತಾರೆ. 

mobile worth 30 lakh found distribution of mobiles to heirs led by mysuru commissioner gvd

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು

ಮೈಸೂರು (ಆ.04): ನೀವು  ಕಡಿಮೆ ಮೊತ್ತಕ್ಕೆ ಅಪರಿಚಿತರ ಬಳಿ, ಕದ್ದ ದುಬಾರಿ ಮೊಬೈಲ್ ಸಿಗುತ್ತೆ ಅಂತಾ ಕೊಳ್ಳೊಕೆ ಹೋದ್ರೆ ಹುಷಾರು. ಯಾಕಂದ್ರೆ ನೀವೇನಾದ್ರೂ ಅಡ್ಡದಾರಿಯಲ್ಲಿ ಮೊಬೈಲ್ ಕೊಂಡ್ರೆ ಪೊಲೀಸ್ರು ನಿಮ್ಮ ಪೋನ್ ಜಪ್ತಿ ಮಾಡ್ತಾರೆ. ಯಾರಿಗೂ ಗೊತ್ತಾಗಲ್ಲ ಅಂತಾ ನೀವು ಅಂದುಕೊಂಡ್ರೆ ಸಿಇಐಆರ್ ಪೋರ್ಟಲ್ ಮಾತ್ರ ನಿಮ್ಮ ಮೇಲೆ ಕಣ್ಣು ಇಟ್ಟಿರುತ್ತೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. 

ಮೈ ಮರೆತು  ಮೊಬೈಲ್ ಬಿಟ್ಟು ಹೋದ್ರೆ, ಕಳ್ಳ ನಿಮ್ಮ ಮೊಬೈಲ್ ಕದ್ದು ಹೋದ್ರೆ ಚಿಂತೆ ಬೇಡ ಯಾಕಂದ್ರೆ ಇನ್ಮುಂದೆ ಪತ್ತೆ ಹಚ್ಚೋದು ಸಲೀಸು, ಸಿಇಐಆರ್ ಪೋರ್ಟಲ್ ಕಳೆದು ಹೋದ ಮೊಬೈಲ್ ಗಳನ್ನ ಸಲೀಸಾಗಿ ಪತ್ತೆ ಹಚ್ಚಲಿದೆ.  ಹೀಗಾಗಿಯೇ ಮೈಸೂರು ಪೋಲಿಸರು ಸಿಇಐಆರ್ ಪೋರ್ಟಲ್ ಮೂಲಕ 135 ಮೊಬೈಲ್ ಗಳನ್ನ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ. 

ಸೈಕಲ್ ಟಯರ್‌ಗೆ 5 ರೂಪಾಯಿ ಲಗೇಜ್ ಶುಲ್ಕ ವಸೂಲಿ ಮಾಡಿದ ಕಂಡಕ್ಟರ್!

ನಾಪತ್ತೆಯಾಗಿರೋ ಮೊಬೈಲ್ ಪತ್ತೆಹಚ್ಚಲು ಈ ಪೋರ್ಟಲ್ ಆಶಾಕಿರಣವಾಗಿದ್ದು, 6363255135 ನಂಬರ್ ಗೆ  ಹಾಯ್ ಮಾಡಿದ್ರೆ ಸಾಕು ಕ್ಷಣ ಮಾತ್ರದಲ್ಲೇ  ಪೋರ್ಟಲ್ ನ ಲಿಂಕ್ ನಿಮ್ಮ ವಾಟ್ಸಪ್ ಗೆ ಬರಲಿದೆ. ಆಮೂಲಕ ನಿಮ್ಮ ಪ್ರಾಥಮಿಕ ಮಾಹಿತಿಯನ್ನ ಹಾಕಿ ಓಕೆ ಕೊಟ್ರೆ ಕಂಪ್ಲೈಂಟ್ ರಿಜಿಸ್ಟರ್ ಆಗತ್ತೆ ಆಮೇಲೆ ಮೊಬೈಲ್ ಬಳಸಿದ್ರೆ ಪೊಲೀಸರಿಗೆ ಮಾಹಿತಿ ರವಾನೆ ಆಗಲಿದೆ. 

ಇನ್ನೂ ಮೈಸೂರು ನಗರದಲ್ಲಿ ಸೆ.2022 ರಿಂದ ಈ ವರೆಗೂ ಸುಮಾರು 3075 ಮೊಬೈಲ್ ಕಳವು, ನಾಪತ್ತೆ ಪ್ರಕರಣಗಳು ದಾಖಲಾಗಿವೆಯಂತೆ. ಮೊದಲು ನಗರ ಪೊಲೀಸರು 270 ಮೊಬೈಲ್ ಗಳನ್ನ ಇದೇ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ರು, ಈಗ 135 ಮೊಬೈಲ್ ಗಳನ್ನ ರಿಕವರಿ ಮಾಡಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ ಕರ್ನಾಟಕದಲ್ಲಷ್ಟೇ ಅಲ್ಲದೆ, ಅಸ್ಸಾಂ, ಯುಪಿ, ಕೇರಳ ರಾಜ್ಯಗಳಿಂದಲೂ ರಿಕವರಿ ಮಾಡಿಕೊಂಡು ಮೊಬೈಲ್ ಗಳನ್ನು ತರಲಾಗಿದೆ. 

ಜೆಜೆಎಂ ಕಾಮಗಾರಿಯಲ್ಲಿ 80 ಲಕ್ಷ ಅಕ್ರಮ: ಹೋರಾಟಕ್ಕಿಳಿದ ಬಿಜೆಪಿ ಮುಖಂಡ ಮಲ್ಲಪ್ಪ‌ ಹಳಕಟ್ಟಿ!

ಇನ್ನುಳಿದ ಕೇಸ್ ಗಳ ಬಗ್ಗೆ ತನಿಖೆ ಮುಂದುವರೆಸಿರೋ ಪೊಲೀಸರು ಅದಷ್ಟು ಶೀಘ್ರವೇ ನಾಪತ್ತೆ, ಕಳುವಾಗಿರೋ ಮೊಬೈಲ್ ರಿಕವರಿಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ, ಕಾಸ್ಲ್ಟಿ ಮೊಬೈಲ್ ಕಡಿಮೆ ಕಾಸಿಗೆ ಸಿಗುತ್ತೆ ಅಂತಾ ಗೀಳಿಗೆ ಬಿದ್ದು ಮೊಬೈಲ್ ಖರೀದಿ ಮಾಡಿದ್ರೆ ಯಾವಾಗ ಪೊಲೀಸ್ರು ಪೋನ್ ಮಾಡ್ತಾರೇ ಗೊತ್ತಿಲ್ಲ. ಹೀಗಾಗಿ ಅಪರಿಚಿತರ ಬಳಿ ಮೊಬೈಲ್ ಕೊಳ್ಳೊ ಮಂದಿ ಎಚ್ಚರಿಕೆಯಿಂದ ಇರಬೇಕಷ್ಟೆ.

Latest Videos
Follow Us:
Download App:
  • android
  • ios