ಚಿತ್ರದುರ್ಗ(ಏ.18): ಲಾಕ್‌ ಡೌನ್‌ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ನಗದು ಪಡೆದುಕೊಳ್ಳಲು ಅನುಕೂಲ ಮಾಡಿಕೊಂಡುವ ಸಂಬಂಧ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಗ್ರಾಹಕರ ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ನೀಡಲು ಮುಂದಾಗಿದೆ.

ಮೊಬೈಲ್‌ ಎಟಿಎಂ ವಾಹನ ಚಿತ್ರದುರ್ಗ ನಗರದ ಎಲ್ಲಾ ವಾರ್ಡ್‌ ಹಾಗೂ ಬಡಾವಣೆಗಳಲ್ಲಿ ಸಂಚರಿಸಲಿದೆ. ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್‌ ಬಳಸಿ ತಮ್ಮ ಖಾತೆಯಲ್ಲಿನ ಹಣವನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದಾಗಿದೆ. ಎಟಿಎಂ ವಾಹನವು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಸಂಚಾರ ನಡೆಸಲಿದೆ.

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಬೆಳಗ್ಗೆ 7ರಿಂದ 8ರವರೆಗೆ ಸರ್ಕಾರಿ ವಿಜ್ಞಾನ ಕಾಲೇಜು ಆವರಣ. ಬೆಳಗ್ಗೆ 8 ರಿಂದ 9 ರವರಗೆ ಹಳೇ ಮಾಧ್ಯಮಿಕ ಶಾಲಾ ಆವರಣ. 9 ರಿಂದ 10.30 ರವರೆಗೆ ಹೊಳಲ್ಕೆರೆ ರಸ್ತೆಯ ಮೋರ್‌ ಶಾಪ್‌ ಹತ್ತಿರ. 10.30 ರಿಂದ 12 ರವರೆಗೆ ಸಂತೆ ಹೊಂಡದ ವೃತ್ತ. ಪ್ರಸನ್ನ ಚಿತ್ರಮಂದಿರ. ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಎಪಿಎಂಸಿ ಮಾರುಕಟ್ಟೆಆವರಣ.

ಕೊರೋನಾ ವೈರಸ್: ಎಟಿಎಂಗಳಿಗೆ ಔಷಧಿ ಸಿಂಪಡಣೆ

1.30 ರಿಂದ 3 ರವರೆಗೆ ಜೆಸಿಆರ್‌ ಹಾಗೂ ವಿ.ಪಿ. ಬಡಾವಣೆ. ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ ಮೈಸೂರು ಬ್ಯಾಂಕ್‌ ವೃತ್ತ. 4 ರಿಂದ 5 ರವರೆಗೆ ಒನಕೆ ಓಬವ್ವ ಕ್ರೀಡಾಂಗಣ ಹತ್ತಿರ. 5 ರಿಂದ 6 ರವರೆಗೆ ಐಯುಡಿಪಿ ಬಡಾವಣೆಯಲ್ಲಿ ಸಂಚಾರಿ ಎಟಿಎಂ ಸಂಚರಿಸಲಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ ತಿಳಿಸಿದ್ದಾರೆ.