ಉತ್ತರ ಕನ್ನಡ(ಏ.05): ಭಟ್ಕಳ ಪಟ್ಟಣದ ಬ್ಯಾಂಕುಗಳ ಆವರಣ, ಎಟಿಎಂಗಳಿಗೆ ಸೋಡಿಯಂ ಹೈಫೋ ಕ್ಲೋರೈಡ್‌ ರಾಸಾಯನಿಕವನ್ನು ಸಿಂಪಡಣೆ ಮಾಡಲಾಗಿದೆ. ಈ ಮೂಲಕ ಎಟಿಎಂಗಳನ್ನು ಸ್ವಚ್ಛ ಮಾಡಲಾಗಿದೆ.

ಭಟ್ಕಳದಲ್ಲಿ 9 ಜನರಿಗೆ ಕೋವಿಡ್‌-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಪಟ್ಟಣದ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳ ಆವರಣ, ಬಾಗಿಲು, ಎಟಿಂ ಕೊಠಡಿಗಳಿಗೆ ರೋಗ ನಿರೋಧಕ ರಾಸಾಯನಿಕವನ್ನು ಪುರಸಭೆಯ ಕಾರ್ಮಿಕರು ಸಿಂಪಡಿಸಿದರು.

ಕೊರೋನಾ ಭೀತಿ: ಮಲೆನಾಡು ಪ್ರವೇಶಿಸ್ಬೇಕಾದ್ರೆ ವಾಹನಗಳೂ ಸ್ನಾನ ಮಾಡ್ಬೇಕು..!

ಕಳೆದ ಒಂದು ವಾರದಿಂದ ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್‌ ಪೌರಕಾರ್ಮಿಕರು ಕೊರೋನಾ ವೈರಸ್‌ ತಡೆಗಾಗಿ ಪ್ರಮುಖ ಜನಜಂಗುಳಿ ಪ್ರದೇಶಗಳಲ್ಲಿ ಮತ್ತು ಕಚೇರಿಗಳ ಆವರಣದಲ್ಲಿಗೆ ಸೋಡಿಯಂ ಹೈಫೋ ಕ್ಲೋರೈಡ್‌ ರಾಸಾಯನಿಕವನ್ನು ಸಿಂಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.