Asianet Suvarna News Asianet Suvarna News

MLC Election Result : ಆಡಿ ಕಾರಲ್ಲಿ ಬಂದು, ಆಟೋ ಏರಿ ಹೊರಟು ಹೋದ ಬಾಬು

  •  ಆಡಿ ಕಾರಲ್ಲಿ ಬಂದು, ಆಟೋ ಏರಿ ಹೊರಟು ಹೋದ ಬಾಬು
  •  ಬಿಜೆಪಿ ಅಭ್ಯರ್ಥಿ ಮುನ್ನಡೆ ವಿಷಯ ಅರಿತು ಮನೆಗೆ
     
MLC Elections congress Candidate  KGF Babu Lost Bangalore Urban Constituency snr
Author
Bengaluru, First Published Dec 15, 2021, 10:31 AM IST

 ಬೆಂಗಳೂರು (ಡಿ.15):  ಬೆಂಗಳೂರು ನಗರ (Bengaluru Urban ) ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಕಾಂಗ್ರೆಸ್‌ (Congress) ಅಭ್ಯರ್ಥಿ, ಸಾವಿರಾರು ಕೋಟಿಯ ಒಡೆಯ ಯೂಸೂಫ್‌ ಷರೀಫ್‌ (ಕೆಜಿಎಫ್‌ ಬಾಬು) ಅವರು ತಮ್ಮ ಸೋಲು ಸಮೀಪಿಸುತ್ತಿದ್ದಂತೆ ಆಟೋ (Auto) ಹತ್ತಿ ಮನೆ ಕಡೆಗೆ ಹೊರಟರು. ಕೆಜಿಎಫ್‌ ಬಾಬು ಎಂದೇ ಪ್ರಸಿದ್ಧರಾಗಿರುವ ಯೂಸೂಫ್‌ ಷರೀಫ್‌ 1,743 ಕೊಟಿ ರು. ಆಸ್ತಿಯ ಒಡೆಯ. ಬೆಂಗಳೂರು ನಗರ ಜಿಲ್ಲೆ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರಿಗೆ ಶ್ರೀಮಂತಿಕೆ ಕೈ ಹಿಡಿಯಲಿಲ್ಲ. ಬಿಜೆಪಿಯ ಹೊಸಕೋಟೆಯ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಅವರು ಈ ಹಿಂದೆ 1200 ಕೋಟಿ ರು. ಆಸ್ತಿಯನ್ನು ಘೋಷಿಸಿಕೊಂಡಿದ್ದರು.

ಯೂಸೂಫ್‌ ಷರಿಫ್‌ ಅವರು ಮತ ಎಣಿಕೆ ನಡೆಯುತ್ತಿದ್ದ ಸರ್ಕಾರಿ ಮಹಾರಾಣಿ ವಿಜ್ಞಾನ ಕಾಲೇಜಿಗೆ (college) ಐಷರಾಮಿ ಆಡಿ ಕಾರಿನಲ್ಲಿ ಆಗಮಿಸಿದ್ದರು. ಕೆಲ ಹೊತ್ತಿನಲ್ಲೇ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಅವರು ಮತ ಗಳಿಕೆಯಲ್ಲಿ ತಮಗಿಂತ ಮುನ್ನಡೆಯಲ್ಲಿ ಇರುವುದು ಅವರ ಅರಿವಿಗೆ ಬಂದಿತು. 

ತಮ್ಮ ಸೋಲು ಖಚಿತ ಎಂಬುದು ತಿಳಿಯುತ್ತಿದ್ದಂತೆ ಮಹಾರಾಣಿ ಕಾಲೇಜಿನ ಎಣಿಕೆ ಕೇಂದ್ರದಿಂದ ಹೊರ ಬಂದ ಯೂಸೂಫ್‌ ಷರಿಫ್‌ ಅವರು ಆಟೋ ಹತ್ತಿ ಹೊರಟು ಹೋದರು. ಇದೇ ವೇಳೆ ಆಡಿ ಕಾರನ್ನು ಬೇರೆ ಕಡೆ ಬಿಟ್ಟಿದ್ದ ಕಾರಣ ಆಟೋ ಹತ್ತಿ ಹೋಗಿದ್ದಾರೆ ಎಂದು ಅವರ ಬೆಂಬಲಿಗರು ತಿಳಿಸಿದರು.

ಭಿಜೆಪಿ ಅಭ್ಯರ್ಥಿ ಗೆಲುವು :  ಬೆಂಗಳೂರು ನಗರ ಕ್ಷೇತ್ರದಿಂದ ಬಿಜೆಪಿ (BJP) ಅಭ್ಯರ್ಥಿಯಾಗಿ  ಕಣಕ್ಕೆ ಇಳಿದಿದ್ದ ಎಚ್‌.ಎಸ್‌.ಗೋಪಿನಾಥ್‌  ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.  ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸಾವಿರಾರು ಕೋಟಿ ಒಡೆಯ ಯೂಸುಫ್‌ ಷರೀಫ್‌ (Yusuf Sharif - KGF babu ) ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ(Shinappa) ಅವರನ್ನು ಪರಾಭವಗೊಳಿಸುವ ಮೂಲಕ ವಿಜಯ ಮಾಲೆ ಧರಿಸಿದ್ದಾರೆ. 

ತೀವ್ರ ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲಿ ಇದೀಗ ಟಪ್ ಫೈಟ್ ನಡುವೆ ಬಿಜೆಪಿ ಅಭ್ಯರ್ಥಿ  ಗೋಪಿನಾಥ ರೆಡ್ಡಿ (Go[pinath Reddy) ಗೆಲುವು ಪಡೆದಿದ್ದಾರೆ. ಈ ಮೂಲಕ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದಂತಾಗಿದೆ. ಗೆಲ್ಲುವ ಅತೀವ ನಿರೀಕ್ಷೆಯಲ್ಲಿದ್ದ ಕೆಜಿಎಫ್ ಬಾಬು (KGF Babu) ಪರಾಭವಗೊಂಡಿದ್ದಾರೆ. ಬಿಜೆಪಿ (BJP) ಅಭ್ಯರ್ಥಿ ಗೋಪಿನಾಥ ರೆಡ್ಡಿ ಅವರ 1227ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕೋಟಿ ಒಡೆಯ ಯೂಸುಫ್ ಷರೀಫ್ ( ಕೆಜಿಎಫ್ ಬಾಬು) 830 ಮತಗಳನ್ನು ಪಡೆದುಕೊಂಡಿದ್ದಾರೆ. 

ಪ್ರತಿಪಕ್ಷ ಕಾಂಗ್ರೆಸ್‌ನ (Congress) ಹಿಡಿತದಲ್ಲಿರುವ ಬೆಂಗಳೂರು ನಗರ(Bengaluru City) ಸ್ಥಳೀಯ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದ್ದ ಆಡಳಿತಾರೂಢ ಬಿಜೆಪಿ(BJP) ಅಭಿವೃದ್ಧಿ, ಸಂಘಟನೆಯ ಅಸ್ತ್ರವನ್ನಿಟ್ಟುಕೊಂಡು ರಾಜಕೀಯ (Politics) ತಂತ್ರಗಾರಿಕೆ ಮಾಡಿದೆ. ಕ್ಷೇತ್ರದಲ್ಲಿ ಜೆಡಿಎಸ್‌ (JDS) ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ (Congress) ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿತ್ತು. 

ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಇದು ಕಾಂಗ್ರೆಸ್‌ನ (Congress) ಭದ್ರಕೋಟೆ. ಒಂದೆರಡು ಬಾರಿ ಬಿಜೆಪಿ (BJP) ಪೈಪೋಟಿ ನೀಡಿದರೂ ಕ್ಷೇತ್ರವನ್ನು ‘ಕೈ’ ಮುಷ್ಟಿಯಿಂದ ವಶಕ್ಕೆ ಪಡೆದುಕೊಳ್ಳುವಲ್ಲಿ ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ನ ಹಿಡಿತದಲ್ಲಿರುವ ಬೆಂಗಳೂರು (Bengaluru) ನಗರ ಸ್ಥಳೀಯ ಸಂಸ್ಥೆಗೆ ಲಗ್ಗೆ ಇಡಲು ಇನ್ನಿಲ್ಲದ ಕಸರತ್ತು ನಡೆಸಿತ್ತು. ಈ ಬಾರಿಯ ಚುನಾವಣೆಯು (Election) ಸಂಘಟನೆ, ಅಭಿವೃದ್ಧಿ, ಆರ್ಥಿಕ ಬಲದ ಮೇಲೆ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿತ್ತು. ಆಡಳಿತದಲ್ಲಿರುವ ಕಾರಣ ಬಿಜೆಪಿ(BJP), ಅಭಿವೃದ್ಧಿ ಮತ್ತು ಸಂಘಟನೆಯ ಮೇಲೆ ವಿಶ್ವಾಸವಿಟ್ಟುಕೊಂಡರೆ, ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಯ ಆರ್ಥಿಕ ಬಲ ಮತ್ತು ಮೂಲ ಮತಗಳ ಮೇಲೆ ನಂಬಿಕೆ ಇಟ್ಟಿಕೊಂಡು ಪ್ರಚಾರ ಮಾಡಿತ್ತು. ಆದರೆ ಸಾವಿರ ಕೋಟಿ ಒಡೆಯ ಬಾಬು ಸೋಲಾಗಿದೆ.  

Follow Us:
Download App:
  • android
  • ios