Political Retirement : ಜೆಡಿಎಸ್‌ಗೆ ಗುಡ್ ಬೈ : ರಾಜಕೀಯ ನಿವೃತ್ತಿ ಘೋಷಿಸಿದ ಹಿರಿಯ ಮುಖಂಡ
- ಜಾತ್ಯಾತೀತ ಜನತಾ ದಳಕ್ಕೆ ಗುಡ್‌ಬೈ ಹೇಳುವ ಮೂಲಕ ರಾಜಕೀಯ ನಿವೃತ್ತಿ
- ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಪಾವಗಡ ತಾಲೂಕು ಜೆಡಿಎಸ್ ಹಿರಿಯ ಮುಖಂಡ ಎಸ್.ಕೆ.ರೆಡ್ಡಿ ಘೋಷಣೆ
ಪಾವಗಡ (ಡಿ.12): ತತ್ವ ಸಿದ್ಧಾಂತ ಹಾಗೂ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ. ಇನ್ನೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಲೂಕು ಜಾತ್ಯಾತೀತ ಜನತಾ ದಳಕ್ಕೆ (JDS) ಗುಡ್ ಬೈ ಹೇಳುವ ಮೂಲಕ ರಾಜಕೀಯ ನಿವೃತ್ತಿ (Political Retirement ) ಪಡೆಯುತ್ತಿರುವುದಾಗಿ ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ತಾಲೂಕು ಜೆಡಿಎಸ್ ಹಿರಿಯ ಮುಖಂಡ ಎಸ್.ಕೆ.ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 38 ವರ್ಷಗಳಿಂದ ಜನತಾ ಪರಿವಾರದಲ್ಲಿ ಕೆಲಸ ಮಾಡಿದ್ದೇನೆ. ನನ್ನಗೀಗ 71 ವರ್ಷ ಇಲ್ಲಿಯವರೆಗೂ ಈ ಭಾಗದಲ್ಲಿ ಹೆಚ್ಚು ಒತ್ತು ಕೊಟ್ಟು ಸಂಘಟಿಸಲಾಗಿದೆ. ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಗೆ ಬೆಲೆ ಇಲ್ಲ. ಇನ್ನೂ ಮಂದಿ ರಾಜಕೀಯ (Politics) ಬೇಡವೆಂದು ತೀರ್ಮಾನಿಸಿದ್ದು, ಇಂದಿನಿಂದಲೇ ಪ್ರಾದೇಶಕ ಪಕ್ಷ ಜೆಡಿಎಸ್‌ಗೆ ಗುಡ್ ಬೈ ಹೇಳುತ್ತಿದ್ದೇನೆ. ರಾಜಕೀಯ ನಿವೃತ್ತಿ ಪಡೆಯುವ ಮೂಲಕ ವಿಶ್ರಾಂತಿ ಪಡೆಯುತ್ತಿದ್ದೇನೆ, ಇನ್ನೂ ಯಾವುದೇ ಕಾರಣಕ್ಕೂ ಜೆಡಿಎಸ್‌ನಲ್ಲಿ ಮುಂದುರಿಯುವುದಿಲ್ಲವೆಂದು ಹೇಳಿದರು.
15 ಮಂದಿ ನನ್ನ ಬೆಂಬಲಿತ ಸದಸ್ಯರಿಂದ ಕಾಂಗ್ರೆಸ್ ಮತದಾನ : ತಾಲೂಕಿನ ನಾಗಲ ಮಡಿಕೆ ಹೋಬಳಿ ವ್ಯಾಪ್ತಿ ಗಡಿಭಾಗದ ರಾಪ್ಟೆ ಗ್ರಾಪಂನ ಹುನೇನ್ ಪುರ ನನ್ನ ಸ್ವಗ್ರಾಮವಾಗಿದ್ದು, ತುಮಕೂರು (Tumakuru) ವಿಧಾನ ಫರಿಷತ್ ಚುನಾವಣೆ (MLC Election) ಹಿನ್ನೆಲೆಯಲ್ಲಿ ಆಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ (DCC Bank) ಅಧ್ಯಕ್ಷ ಕೆ.ಎನ್.ರಾಜಣ್ಣ (KN Rajanna) ಅವರ ಬಗ್ಗೆ ಅಪಾರ ಗೌರವವಿದೆ. ಅವರು ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಹಲವಾರು ರೀತಿಯ ಉಪಯುಕ್ತ ಕೆಲಸ ಮಾಡಿದ್ದಾರೆ.
ಒಬ್ಬ ರೈತ (Farmers) ಪರ ಚಿಂತಕರಾಗಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಡಿ.10ರಂದು ನಡೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ (Election) ನನ್ನ ಗ್ರಾಪಂ ವ್ಯಾಪ್ತಿಯ 18 ಮಂದಿ ಚುನಾಯಿತ ಸದಸ್ಯರ ಪೈಕಿ 15 ಮಂದಿ ಸದಸ್ಯರು ಪ್ರಥಮ ಪ್ರಾಶಸ್ಯ ನೀಡುವ ಮೂಲಕ ರಾಜೇಂದ್ರ ಪರ ಮತ ಚಲಾಯಿಸಿದ್ದಾರೆ. ನನ್ನ ಮಾತಿಗೆ ಬೆಲೆ ಕೊಟ್ಟು ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ ಪರ ಮತ ಚಲಾಯಿಸಿದ ರಾಪ್ಟೆ ಗ್ರಾಪಂನ ಎಲ್ಲಾ ಸದಸ್ಯರಿಗೆ ಅಭಾರಿಯಾಗಿರುವುದಾಗಿ ಅವರು ಹೇಳಿದರು.
ಕೈ ನತ್ತ ಜೆಡಿಎಸ್ ನಾಯಕ : ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ(NH Konareddy) ಚಿತ್ತ ಇದೀಗ ಕಾಂಗ್ರೆಸ್‌ನತ್ತ(Congress) ವಾಲಿದೆ. ಶೀಘ್ರದಲ್ಲೇ ತೆನೆಯ ಹೊರೆ ಇಳಿಸಿ ಕೈ ಹಿಡಿಯಲಿದ್ದಾರೆಯೇ? ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ಸಿಗರೊಂದಿಗೆ ಕೋನರಡ್ಡಿ ಒಡನಾಟ, ಅದರತ್ತ ತೋರುತ್ತಿರುವ ಒಲವು ಇಂತಹ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಉತ್ತರ ಕರ್ನಾಟಕದಲ್ಲಿ(North Karnataka) ಅಲ್ಪಸ್ವಲ್ಪ ಜೆಡಿಎಸ್(JDS) ಉಸಿರಾಡುತ್ತಿದೆ ಎಂದರೆ ಎನ್.ಎಚ್. ಕೋನರಡ್ಡಿ ಪಾತ್ರ ಅಲ್ಲಗೆಳೆಯುವಂತಿಲ್ಲ. ಆದರೆ ಇವರಿಗೆ ಸಾಥ್ ಕೊಡುವವರೇ ಯಾರೂ ಇಲ್ಲದಂತಾಗಿದೆ. ಅತ್ತ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಬರುತ್ತಿಲ್ಲ. ಇತ್ತ ಪಕ್ಷ ಸಂಘಟನೆಯೂ ಆಗುತ್ತಿಲ್ಲ. ಇಲ್ಲಿದ್ದ ನಾಯಕರೆಲ್ಲ ಬಿಜೆಪಿ(BJP), ಕಾಂಗ್ರೆಸ್‌ನತ್ತ ಹೋಗಿದ್ದಾರೆ. ಇಲ್ಲಿದ್ದರೆ ತಮಗೆ ಭವಿಷ್ಯವಿಲ್ಲ ಎಂದುಕೊಂಡು ಇದೀಗ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆ ಕೋನರಡ್ಡಿ.
ಕಳಸಾ-ಬಂಡೂರಿ(Kalasa Banduri) ಹೋರಾಟದ ಮೂಲಕ ರಾಜಕೀಯ(Politics) ಪ್ರವೇಶ ಮಾಡಿದವರು ಕೋನರಡ್ಡಿ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೊಂದಿಗೆ ನಿರಂತರವಾಗಿ ಮಹದಾಯಿಗಾಗಿ(Mahadayi) ಹೋರಾಟ ನಡೆಸಿದರೂ ಬೊಮ್ಮಾಯಿ ಅವರೊಂದಿಗೆ ಬಿಜೆಪಿಗೆ ಹೋದವರಲ್ಲ. ಅದೇ ರೀತಿ ಕಾಂಗ್ರೆಸ್‌ನೊಂದಿಗೆ ಅಂತರ ಕಾಯ್ದುಕೊಂಡವರು. ಜಾತ್ಯತೀತ ಜನತಾದಳದೊಂದಿಗೆ ಗುರುತಿಸಿಕೊಂಡು ಹಂತ-ಹಂತವಾಗಿ ಮೇಲೆ ಬಂದವರು. ಒಂದು ಬಾರಿ ಶಾಸಕರಾಗಿ(MLA), ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ(JDS-Congress Coalition Government) ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ(Political Secretary) ಕೆಲಸ ಮಾಡಿದವರು.