Asianet Suvarna News Asianet Suvarna News

Government Land Encroachment: 'KGF ಬಾಬುವಿನಿಂದ 115 ಕೋಟಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ'

*  7.20 ಎಕರೆ ಜಾಗ ಕೇವಲ 6.20 ಕೋಟಿಗೆ ಅಕ್ರಮವಾಗಿ ಖರೀದಿ
*  ಜಿಲ್ಲಾಧಿಕಾರಿ, ತಹಸೀಲ್ದಾರ್‌ ನೆರವು: ಎನ್‌.ಆರ್‌.ರಮೇಶ್‌ ಆರೋಪ
*  ಎಸಿಬಿ ಮತ್ತು ಬಿಎಂಟಿಫ್‌ಗೆ ದಾಖಲೆ ಸಹಿತ ದೂರು 
 

KGF Babu Encroachment of 115 Crores Worth of Government Land in Bengaluru grg
Author
Bengaluru, First Published Dec 9, 2021, 9:26 AM IST

ಬೆಂಗಳೂರು(ಡಿ.09): ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಯೂಸೂಫ್‌ ಪರೀಫ್‌ ಅಲಿಯಾಸ್‌ ಕೆಜಿಎಫ್‌ ಬಾಬು ಮತ್ತಿತರ ಅಧಿಕಾರಿಗಳು 115 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌(NR Ramesh) ಗಂಭೀರ ಆರೋಪ ಮಾಡಿದ್ದಾರೆ.

ಒಟ್ಟು 11.01 ಎಕರೆ ಸರ್ಕಾರಿ ಜಾಗ ಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್‌ ಬಾಬು(KGF Babu) ಸೇರಿದಂತೆ ಅಂದಿನ ಜಿಲ್ಲಾಧಿಕಾರಿ ಸಾದಿಕ್‌, ತಹಸೀಲ್ದಾರ್‌ ಕೆ.ರಂಗನಾಥಯ್ಯ, 2012ರಿಂದ 2018ರ ಅವಧಿಯ ಜಿಲ್ಲಾಧಿಕಾರಿಗಳಾದ ಎಂ.ಕೆ.ಅಯ್ಯಪ್ಪ, ಡಾ. ಜಿ.ಸಿ.ಪ್ರಕಾಶ್‌, ವಿ.ಶಂಕರ್‌ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ರಮೇಶ್‌ ಅವರು ಎಸಿಬಿ(ACB) ಮತ್ತು ಬಿಎಂಟಿಫ್‌ಗೆ(BMTF) ದಾಖಲೆ ಸಹಿತ ದೂರು(Complaint) ನೀಡಿದ್ದಾರೆ.

Council Election Karnataka : ಕೆಜಿಎಫ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿ ಬಾಬು 3 ವರ್ಷ ಗಡಿಪಾರಾಗಿದ್ದೇಕೆ ?

ಬುಧವಾರ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಗರಣವನ್ನು(Scam) ಸಿಐಡಿ(CID) ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಆಗ್ರಹಿಸಿದರು.

ಬೆಂಗಳೂರು(Bengaluru) ಉತ್ತರ ತಾಲೂಕಿನ ಯಲಹಂಕ ಹೋಬಳಿ ಶ್ರೀನಿವಾಸಪುರ ಗ್ರಾಮದ ಸರ್ವೆ ನಂಬರ್‌ 15ರ ಸುಮಾರು 115 ಕೋಟಿ ಮೌಲ್ಯದ 11.01 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗದ ಪೈಕಿ 7.20 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ಹೆಸರಿನಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ. ಇನ್ನು 2.21 ಎಕರೆ ಜಾಗವನ್ನು ಜಿಲ್ಲಾಧಿಕಾರಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಉದ್ದೇಶಕ್ಕಾಗಿ 2014ರಲ್ಲಿ ಬಿಬಿಎಂಪಿಗೆ(BBMP) ಅಧಿಕೃತವಾಗಿ ಹಸ್ತಾಂತರ ಮಾಡಿದ್ದಾರೆ. ಉಳಿದ 1.01 ಎಕರೆ ಜಾಗವನ್ನು ಕೆಜಿಎಫ್‌ ಬಾಬು ಅಕ್ರಮ ಕಬಳಿಸಿ ಬೇಲಿ ಹಾಕಿದ್ದಾರೆ ಎಂದು ಆರೋಪಿಸಿದರು.

ಈ 7.20 ಎಕರೆ ಜಾಗವನ್ನು ಸಾರ್ವಜನಿಕ ಹರಾಜಿನಲ್ಲಿ(Auction) ಮಾರಾಟ ಮಾಡಲು 2007ರ ಮೇನಲ್ಲಿ ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಎ.ಸಾದಿಕ್‌ ಅಧಿಸೂಚನೆ ಹೊರಡಿಸಿದ್ದರು. ಈ ಜಾಗಕ್ಕೆ ಕನಿಷ್ಠ ಬೆಲೆ .7.50 ಕೋಟಿ ನಿಗದಿ ಪಡಿಸಲಾಗಿತ್ತು. ಈ ಹರಾಜಿನಲ್ಲಿ ನಾಲ್ವರು ಆಸಕ್ತರು ಪಾಲ್ಗೊಂಡಿದ್ದರು. ಈ ನಡುವೆ ಕೆಜಿಎಫ್‌ ಬಾಬು ಹಿಲ್‌ಲ್ಯಾಂಡ್‌ ಎಸ್ಟೇಟ್‌ ಹೆಸರಿನಲ್ಲಿ ತಾವು ಸಹ ಈ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ 2007ರ ಜೂನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಾನೂನು ಬಾಹಿರವಾಗಿ ಕೆಜಿಎಫ್‌ ಬಾಬು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಬಿಕ್ಕಿಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ, ಸಚಿವರೇ ನಿಮಗೆ ಅಕ್ಕ-ತಂಗಿಯರು ಇಲ್ವಾ ಎಂದ ಬಾಬು ಪತ್ನಿ

ಕನಿಷ್ಠ 7.50 ಕೋಟಿ ಬದಲಾಗಿ ಕೆಜಿಎಫ್‌ ಬಾಬುಗೆ 6.20 ಕೋಟಿಗೆ ಆ ಜಾಗ ಮಾರಾಟ ಮಾಡಲಾಗಿತ್ತು. ನಿಯಮಾನುಸಾರ ಹರಾಜಿನಲ್ಲಿ ಭಾಗವಹಿಸಿದ್ದ ನಾಲ್ವರು ವ್ಯಕ್ತಿಗಳಿಗೆ ಹರಾಜಿನಲ್ಲಿ ಅವಕಾಶವನ್ನೇ ನೀಡಿಲ್ಲ. ಅಂದಿನ ಜಿಲ್ಲಾಧಿಕಾರಿ ಎಂ.ಎ.ಸಾದಿಕ್‌ ಹಾಗೂ ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್‌ ರಂಗನಾಥಯ್ಯ ಅವರು ಕೆಜಿಎಫ್‌ ಬಾಬು ಜತೆಗೆ ಶಾಮೀಲಾಗಿ ಕಾನೂನೂ ಬಾಹಿರವಾಗಿ ಸರ್ಕಾರಿ ಸ್ವತ್ತು ಕಬಳಿಸಲು ನೆರವಾಗಿದ್ದಾರೆ ಎಂದು ರಮೇಶ್‌ ದೂರಿದರು.

ತಂದೆಯ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮಗಳು!

ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ವಿಧಾನ ಪರಿಷತ್ ಚುನಾವಣೆಯಲ್ಲಿ(MLC Election) ಕಾಂಗ್ರೆಸ್ ಟಿಕೆಟ್ (Congress Ticket) ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ (ST Somashekar) ಗಂಭೀರ ಆರೋಪ ಮಾಡಿದ್ದು,  ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೇ  ಮಗಳು ನೀಡಿದ ದೂರಿನಲ್ಲಿ ಏನಿದೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios