Council Election Karnataka: ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಯಲ್ಲಿ ಭಿನ್ನಮತ : ಸಂಸದರ ವಿರುದ್ಧ ಶಕ್ತಿ ಪ್ರದರ್ಶನ

  • ಬಿಜೆಪಿಯಲ್ಲಿ ಸಂಸದರ ವಿರುದ್ಧವೇ ಶಕ್ತಿ ಪ್ರದರ್ಶನ
  • ಮಾಜಿ ಶಾಸಕ ಮಂಜುನಾಥ್‌ಗೌಡ ಮಣೆ ಹಾಕುತ್ತಿರುವ ಮುನಿಸ್ವಾಮಿ ಹೊರಗಿಟ್ಟು ಸಭೆ ನಡೆಸಿದ ಬಿಜೆಪಿ ಮುಖಂಡರು
  • ಸಂಸದರ ವಿರುದ್ಧ ಶಕ್ತಿ ಸ್ವಪಕ್ಷೀಯರೇ ಶಕ್ತಿ ಪ್ರದರ್ಶನ
MLC election Kolar bjp Leaders Unhappy Over MP Muniswamy snr

ಮಾಲೂರು (ಡಿ.08):  ಇಲ್ಲಿನ ವಿಶ್ವನಾಥ್‌  ಕನ್ವೆನ್ಷನ್‌ ಹಾಲ್‌ನಲ್ಲಿ ಸಂಸದ ಮುನಿಸ್ವಾಮಿ (BJP MP Muniswamy ) ಗೈರು ಹಾಜರಾತಿಯಲ್ಲಿ ತಾಲೂಕು ಬಿಜೆಪಿ (BJP) ಅಧ್ಯಕ್ಷ ಪುರ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಧಾನ ಪರಿಷತ್‌ ಚುನಾವಣೆಯ (MLC Election)  ಪ್ರಚಾರ ಸಭೆ ಆಯೋಜಿಸಲಾಗಿದ್ದು, ಇದು ಸ್ಥಳೀಯ ಬಿಜೆಪಿ ಮುಖಂಡರನ್ನು ಕಡೆಗಣಿಸಿ ಮಾಜಿ ಶಾಸಕ ಮಂಜುನಾಥ್‌ಗೌಡ ಅವರಿಗೆ ಹೆಚ್ಚು ಮನ್ನಣೆ ಹಾಕುತ್ತಿರುವ ಸಂಸದ ಮುನಿಸ್ವಾಮಿ ವಿರುದ್ಧ ಭಿನ್ನಮತ ಭುಗಿಲೆದ್ದಿದೆ.  ಬಿಜೆಪಿ (BJP) ರಾಜ್ಯ ಕಾರ‍್ಯದರ್ಶಿ ಕೇಶವ ಪ್ರಸಾದ್‌, ಜಿಲ್ಲಾ ಪ್ರಭಾರಿ ಜಯಚಂದ್ರ ರೆಡ್ಡಿ, ಚಿಕ್ಕಬಳ್ಳಾಪುರ ಉಸ್ತುವಾರಿ ಎಸ್‌.ಕೃಷ್ಣಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಗೆ ಹಾಜರಾಗಬೇಕಾಗಿದ್ದ ಸಂಸದ ಮುನಿಸ್ವಾಮಿ ಅವರು ಈ ಸಭೆಗೆ ಜೆಡಿಎಸ್‌ನಿಂದ (JDS) ಬಿಜೆಪಿ ಕಡೆ ಮುಖ ಮಾಡಿರುವ ಮಾಜಿ ಶಾಸಕ ಮಂಜುನಾಥ್‌ ಗೌಡ ಅವರಿಗೆ ಆಹ್ವಾನ ಇಲ್ಲ ಎಂಬ ಕಾರಣಕ್ಕಾಗಿ ಅಭ್ಯರ್ಥಿ ವೇಣು ಗೋಪಾಲ್‌ ಸಮೇತ ಗೈರು ಹಾಜರಾಗಿದ್ದು, ತಾಲೂಕು ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುಂದನ್ನು ತೋರಿಸಿಕೊಟ್ಟಿದೆ.

ಇಲ್ಲಿಯವರೆಗೆ ದೂರವಾಗಿದ್ದು, ಪಕ್ಷ ಸಂಘಟನೆ ಮಾಡುತ್ತಿದ್ದ ಬಿಜೆಪಿಯಲ್ಲಿ ಕೃಷ್ಣಯ್ಯ ಶೆಟ್ಟಿ ಬೆಂಬಲಿಗ ಹೂಡಿ ವಿಜಯ ಕುಮಾರ್‌ ಹಾಗೂ ಬಿಜೆಪಿ ಅಧ್ಯಕ್ಷ ಪುರ ನಾರಾಯಣ ಸ್ವಾಮಿ (Narayana Swamy) ಕಳೆದ ಮೂರು ದಿನಗಳ ಹಿಂದೆ ಒಂದಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು ಸಂಸದರ (MP) ಕಣ್ಣನ್ನು ಕೆಂಪಾಗಿಸಿದೆ ಎನ್ನಲಾಗಿದೆ.

ಸೋಮವಾರ ಕೋಲಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಮುನಿರತ್ನ (Muniratna) ಅವರು ಮಾಲೂರು ಮಂಜುನಾಥ್‌ ಗೌಡರ ಪ್ರಯತ್ನದಿಂದ ಮಾಲೂರಿನ ಶೇ.80 ಮತದಾರರನ್ನು ಬಿಜೆಪಿಗೆ (BJP) ಜೈ ಎನ್ನುತ್ತಿದ್ದು, ಕಾಂಗ್ರೆಸ್‌, ಜೆಡಿಎಸ್‌ (JDS) ಉಳಿದ ಶೇ.20ರಷ್ಟು ಪಡೆಯಲಿದೆ ಎಂಬ ಹೇಳಿಕೆಯು ಸ್ಥಳೀಯ ಬಿಜೆಪಿ ಕಾರ‍್ಯಕರ್ತರಿಗೆ ಬೇಸರ ತರಿಸಿದೆ. ಈ ನಿಟ್ಟಿನಲ್ಲಿ ಮಂಗಳವಾರ ಪತ್ರ ಕರ್ತರನ್ನು ಹೊರಗಿಟ್ಟು ಮಾಡಿದ ಸಭೆಯು ಸಂಸದ ಮುನಿಸ್ವಾಮಿ ವಿರುದ್ಧ ಶಕ್ತಿ ಪ್ರದರ್ಶನ ಎಂದು ಅರ್ಥೈಸಲಾಗುತ್ತಿದೆ.

ಕೋಲಾರದಲ್ಲಿ ತೇಪೆ ಹಚ್ಚುವ ಕಾರ‍್ಯ

ಮಂಗಳವಾರ ನಡೆದ ಸಭೆಯಲ್ಲಿ (Meeting) ಸಂಸದ ( MP) ಹಾಗೂ ಅಭ್ಯರ್ಥಿ ವೇಣು ಗೋಪಾಲ್‌ ರೆಡ್ಡಿ ಗೈರು ಹಾಗೂ ಅಳವಡಿಸಲಾಗಿದ್ದ ಪ್ಲೆಕ್ಸ್‌ ಗಳಲ್ಲಿ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿಅವರ ಭಾವಚಿತ್ರ ಇಲ್ಲದ ಬಗ್ಗೆ ಕಾರ‍್ಯಕರ್ತರ ತಕರಾರನ್ನು ಗಮನಿಸಿದ ರಾಜ್ಯ ಘಟಕದಿಂದ ಬಂದಿದ್ದ ಮುಖಂಡರು ಸಭೆಯಲ್ಲಿದ್ದ ಪತ್ರಕರ್ತರನ್ನು ಉದ್ಘಾಟನೆ ನಂತರ ಹೊರ ಕಳುಹಿಸಿದರು. ಸಭೆಯಲ್ಲಿ ಯಾವ ವಿಚಾರವನ್ನು ಪ್ರಸ್ತಾಪಿಸದೆ ಚುನಾವಣೆಯಲ್ಲಿ (Election) ಹೇಗೆ ಮತದಾನ ಮಾಡಬೇಕೆಂಬುದನ್ನು ಮಾತ್ರ ತಿಳಿಸಿ ಸಭೆಯನ್ನು ಮುಗಿಸಿದರಲ್ಲದೇ, ಸಂಜೆ ಕೋಲಾರಕ್ಕೆ (Kolar) ತಾಲೂಕು ಬಿಜೆಪಿ ಪ್ರಮುಖರನ್ನು ಕರೆಸಿ ಉಸ್ತುವಾರಿ ಸಚಿವ ಮುನಿರತ್ನಂ (Muniratna) ಅರೂಡನೆ ವಿಡಿಯೋ ಕಾನ್ಪೆರೆನ್ಸ್‌ ಮೂಲಕ ಮಾತನಾಡಿಸಿದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ಮುಖಂಡರೊಬ್ಬರು ನಮ್ಮ ಗೊಂದಲಗಳು ಚುನಾವಣೆ ಮೇಲೆ ಎಫೆಕ್ಟ್ ಆಗುವುದರಿಂದ ಸದ್ಯ ಶಾಂತವಾಗಿರುವಂತೆ ಉಸ್ತುವಾರಿ ಸಚಿವರು ತಿಳಿಸಿದ್ದು, ತಾಲೂಕಿನಲ್ಲಿ ಆಗುತ್ತಿರುವ ಗೊಂದಲವನ್ನು ಚುನಾವಣೆ ನಂತರ ಸರಿಪಡಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ಬಿಜೆಪಿಯಲ್ಲಿ ಸಂಸದರ ವಿರುದ್ಧವೇ ಶಕ್ತಿ ಪ್ರದರ್ಶನ
  • ಮಾಜಿ ಶಾಸಕ ಮಂಜುನಾಥ್‌ಗೌಡ ಮಣೆ ಹಾಕುತ್ತಿರುವ ಮುನಿಸ್ವಾಮಿ ಹೊರಗಿಟ್ಟು ಸಭೆ ನಡೆಸಿದ ಬಿಜೆಪಿ ಮುಖಂಡರು
  • ಸಂಸದರ ವಿರುದ್ಧ ಶಕ್ತಿ ಸ್ವಪಕ್ಷೀಯರೇ ಶಕ್ತಿ ಪ್ರದರ್ಶನ
  • ಸಂಸದ ಮುನಿಸ್ವಾಮಿ ವಿರುದ್ಧ ಭಿನ್ನಮತ ಭುಗಿಲೆದ್ದಿದೆ
  • ಅಸಮಾದಾನಗೊಂಡಿರುವ ಮುಖಂಡರು
     
Latest Videos
Follow Us:
Download App:
  • android
  • ios