ಮೈಸೂರು(ಜ.09): ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್‌ ಸೇಠ್‌ ಧ್ವನಿ ಈಗ ಸಂಪೂರ್ಣ ಬದಲಾಗಿದೆ. ಬೇಸ್ ವಾಯ್ಸ್‌ನಲ್ಲಿ ಅಬ್ಬರಿಸುತ್ತಿದ್ದ ಹಿರಿಯ ರಾಜಕಾರಣಿ ಚಿಕಿತ್ಸೆ ನಂತರ ಗುರುವಾರ ಮೊದಲ ಬಾರಿ ಸಾರ್ವಜನಿಕರವಾಗಿ ಮಾತನಾಡಿದ್ದಾರೆ. ಶಾಸಕರ ಧ್ವನಿ೯ ಕೇಳಿದ ಬೆಂಬಲಿಗರು ಮರುಗಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ವಿದೇಶಕ್ಕೆ ಹೋಗಿದ್ದ ತನ್ವೀರ್‌ಸೇಠ್ ಮೈಸೂರಿಗೆ ಬಂದಿದ್ದಾರೆ. ಈ ಸಂದರ್ಭ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಶಾಸಕ ತನ್ವೀರ್ ಸೇಠ್ ಧ್ವನಿ ಪೆಟ್ಟಿಗೆಗೆ ಹಾನಿಯಾಗಿದ್ದು, ಅವರ ಸ್ವರ ಸಂಪೂರ್ಣ ಬದಲಾಗಿದೆ.

ವಿದೇಶದಿಂದ ಮರಳಿದ ಶಾಸಕ ತನ್ವೀರ್ ಸೇಠ್‌, ಈಗ ಹೇಗಿದ್ದಾರೆ..?

ಬೇಸ್ ವಾಯ್ಸ್‌ನಲ್ಲಿ ಅಬ್ಬರಿಸುತ್ತಿದ್ದ ಹಿರಿಯ ರಾಜಕಾರಣಿ ಈಗ ಕೀರಲು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಕೊಲೆ ಯತ್ನ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಶಾಸಕ ತನ್ವೀರ್ ಧ್ವನಿ ಕೇಳಿಸಿಕೊಂಡ ಬೆಂಬಲಿಗರಿಗೆ ಅಚ್ಚರಿಯಾಗಿದೆ. ನೆಚ್ಚಿನ ನಾಯಕನ ವಾಯ್ಸ್ ಕೇಳಿ ಬೆಂಬಲಿಗರು ಮರುಗಿದ್ದಾರೆ. ಮೈಸೂರಿನ ರಾಜನಿಗೆ ಜೈ ಎಂದು ಉರ್ದು ಭಾಷೆಯಲ್ಲಿ ಘೋಷಣೆ ಕೂಗಿದ್ದಾರೆ.

ತನ್ವೀರ್‌ಸೇಠ್ ಕೊಲೆಯತ್ನ, ಆರೋಪಿ ಸ್ಥಳದಲ್ಲೇ ಸಿಕ್ಕರೂ ಅಂತ್ಯ ಕಾಣದ ಪ್ರಕರಣ

ಆರೋಪಿ ಗುರುತಿಸಲು ಮೈಸೂರು ಸೆಂಟ್ರಲ್‌ ಜೈಲಿಗೆ ತನ್ವೀರ್ ಸೇಠ್ ಭೇಟಿ:

"