Asianet Suvarna News Asianet Suvarna News

ಸನಾತನ ಧರ್ಮ ವಿರೋಧಿಗಳಿಗೆ ಬುದ್ಧಿ ಕಲಿಸಬೇಕಿದೆ: ಶಾಸಕ ಸಿದ್ದು ಸವದಿ

ಯಾವುದೇ ತಾರತಮ್ಯವಿಲ್ಲದೇ ಸರ್ವರ ಬದುಕಿಗೆ ಆಸರೆಯಾಗಿರುವ ಭಾರತದ ಮಣ್ಣು ಸರ್ವರನ್ನೂ ಪೋಷಿಸುತ್ತಿದೆ. ಈ ಮಧ್ಯೆ ಕೆಲವು ಕುಹಕಿಗಳು ಸನಾತನ ಧರ್ಮವನ್ನೇ ನಾಶಗೊಳಿಸುವ ಮಾತುಗಳನ್ನಾಡುತ್ತ, ಈ ನೆಲದ ಧಾರ್ಮಿಕ ಬುನಾದಿ ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ. ಇಂತವರು ಭಾರತ ಬಿಟ್ಟು ತೊಲಗುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಬುದ್ಧಿ ಕಲಿಸಬೇಕಿದೆ: ಶಾಸಕ ಸಿದ್ದು ಸವದಿ 

MLA Siddu Savadi Talks Over Sanatana Dharma grg
Author
First Published Oct 28, 2023, 12:00 PM IST

ರಬಕವಿ-ಬನಹಟ್ಟಿ(ಅ.28):  ನಿಸ್ವಾರ್ಥ ಸೇವೆ, ಮಾನವೀಯತೆ, ಕ್ಷಾತ್ರಗುಣ, ತಮೋ,ರಜೋಗುಣಗಳ ಸಮ್ಮಿಳಿತವಾಗಿರುವ ಭಾರತ ದೇಶದ ಮಣ್ಣು ನಮಗೆ ಜೀವನವನ್ನೇ ಕೊಡುಗೆಯಾಗಿಸಿದೆ. ತ್ಯಾಗ,ವೈಭೋಗ,ಸಾಹಸ, ಸಾಂಸ್ಕೃತಿಕತೆ ಈ ನೆಲದ ಮೂಲ ಸೆಲೆಯಾಗಿದೆ. ಭಾರತದ ಮಣ್ಣು ದೇಶವಾಸಿಗಳೆಲ್ಲರ ಬದುಕಿನ ಸಮಗ್ರತೆಯ ಪ್ರತೀಕವಾಗಿದೆ ಎಂದು ಶಾಸಕ ಸಿದ್ದು ಸವದಿ ನುಡಿದರು.

ಬನಹಟ್ಟಿಯಲ್ಲಿ ನಡೆದ ನನ್ನ ಮಣ್ಣು ನನ್ನ ದೇಶ ಶೋಭಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ತಾರತಮ್ಯವಿಲ್ಲದೇ ಸರ್ವರ ಬದುಕಿಗೆ ಆಸರೆಯಾಗಿರುವ ಭಾರತದ ಮಣ್ಣು ಸರ್ವರನ್ನೂ ಪೋಷಿಸುತ್ತಿದೆ. ಈ ಮಧ್ಯೆ ಕೆಲವು ಕುಹಕಿಗಳು ಸನಾತನ ಧರ್ಮವನ್ನೇ ನಾಶಗೊಳಿಸುವ ಮಾತುಗಳನ್ನಾಡುತ್ತ, ಈ ನೆಲದ ಧಾರ್ಮಿಕ ಬುನಾದಿ ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ. ಇಂತವರು ಭಾರತ ಬಿಟ್ಟು ತೊಲಗುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಬುದ್ಧಿ ಕಲಿಸಬೇಕಿದೆ. ಪ್ರಪಂಚದಲ್ಲಿ ಬಟ್ಟೆ ಧರಿಸಬೇಕೆಂಬ ಅರಿವು ಇಲ್ಲದಿರುವಾಗ ಭಾರತದಲ್ಲಿ ವೇದಗಳು,ಉಪನಿಷತ್ತುಗಳು ಸೇರಿ ವಿಪುಲ ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಸಾಹಿತ್ಯ ರಚನೆಗೊಂಡು ಉನ್ನತ ಪರಿಕಲ್ಪನೆಯ ಗುರುಕುಲ ಶಿಕ್ಷಣ ಪದ್ಧತಿ ಜಾರಿಯಾಗಿತ್ತು. ಇಂಥ ಶ್ರೇಷ್ಠತೆಯ ಅರಿವಿಲ್ಲದ ತಿಳಿಗೇಡಿಗಳು ಈ ಮಣ್ಣಿನ ಮೂಲ ಆಶಯಕ್ಕೆ ಧಕ್ಕೆ ತರಲು ಭಾರತೀಯರು ಅವಕಾಶ ನೀಡಬಾರದು ಎಂದರು.

ಅಜ್ಜನ ರಿವಾಲ್ವರ್ ಹಿಡಿದು ಮನೆಮೇಲೆ ಎರ್ರಾಬಿರ್ರಿ ಫೈರಿಂಗ್ ಮಾಡಿದ ಮೊಮ್ಮಗ!

ಬನಹಟ್ಟಿಯ ಹಿರೇಮಠದ ಶರಣಬಸವ ಶಿಚಾರ್ಯರು ಮಾತನಾಡಿ, ಈಚೆಗೆ ಯುವ ಜನತೆ ಮಣ್ಣನ್ನು ನಿರ್ಲಕ್ಷಿಸುವ ಹಂತಕ್ಕೆ ತಲುಪಿರುವುದು ನಮ್ಮತನದ ಅವಸಾನಕ್ಕೆ ನಾವೇ ಮುನ್ನುಡಿ ಬರೆದಂತಾಗುತ್ತಿದೆ. ಮಣ್ಣನ್ನು ನಿರ್ಲಕ್ಷಿಸಿದರೆ ನಮ್ಮತನವನ್ನೇ ನಿರ್ಲಕ್ಷಿಸಿದಂತೆ ಎಂಬ ವಾಸ್ತವಿಕ ಪ್ರಜ್ಞೆ ಏಲ್ಲರೂ ಅರಿತುಕೊಳ್ಳಬೇಕಿದೆ ಎಂದರು.

ಶೋಭಾಯಾತ್ರೆ ಮೆರವಣಿಗೆಯಲ್ಲಿ ತೆರೆದ ಜೀಪಿನಲ್ಲಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಶಾಸಕ ಸವದಿ ಸಂಚರಿಸಿದರು. ನೂರಾರು ಸಂಖ್ಯೆಯ ಸುಮಂಗಲೆಯರು ಕುಂಭ ಹೊತ್ತು ಶ್ರೀಕಾಡಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಪೇಟೆ, ಮಂಗಳವಾರ ಪೇಟೆ, ಸೋಮವಾರಪೇಟೆ, ವೈಭವ ಚಿತ್ರಮಂದಿರ ವರ್ತುಲ, ಗಾಂಧಿ ವೃತ್ತ ಮೂಲಕ ರಾಜ್ಯ ಹೆದ್ದಾರಿ ಮೂಲಕ ಸಕಲ ಮಂಗಲವಾದ್ಯಗಳೊಡನೆ ಸಂಚರಿಸಿ ಈಶ್ವರಲಿಂಗ ಮೈದಾನದಲ್ಲಿ ಸೇರ್ಪಡೆಗೊಂಡರು. ಮಾರ್ಗಮಧ್ಯೆ ಮಹಿಳೆಯರು, ಮಕ್ಕಳು, ಹಿರಿಯರು ಪುಷ್ಪವೃಷ್ಠಿ ಮಾಡುವ ಮೂಲಕ ಶೋಭಾಯಾತ್ರೆಗೆ ಗೌರವ ಸಲ್ಲಿಸಿದರು.

ನಗರ ಬಿಜೆಪಿ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಸಿದ್ಧನಗೌಡ ಪಾಟೀಲ, ಆನಂದ ಕಂಪು, ತೇರದಾಳ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಶ್ರೀಶೈಲ ಬೀಳಗಿ, ಜಯಪ್ರಕಾಶ ಸೊಲ್ಲಾಪುರ, ಶಿವಾನಂದ ಬುದ್ನಿ, ಶ್ರೀಶೈಲ ಯಾದವಾಡ, ಮಹಾದೇವ ಕೋಟ್ಯಾಳ, ಚಂದ್ರಶೇಖರ ಮಿರ್ಜಿ, ಮಹಿಳಾ ಘಟಕದ ಮೀನಾಕ್ಷಿ ಸವದಿ, ಸವಿತಾ ಹೊಸೂರ, ಅನುರಾಧ ಹೊರಟ್ಟಿ, ವಿದ್ಯಾ ದಬಾಡಿ, ಪವಿತ್ರಾ ತುಕ್ಕಣ್ಣವರ, ದುರ್ಗವ್ವ ಹರಿಜನ, ವೈಷ್ಣವಿ ಬಾಗೇವಾಡಿ, ನಂದಾ ಕೊಕಟನೂರ, ಮಂಜುಳಾ ಬೀಳಗಿ, ಭಾರತಿ ಸೋಳಂಕಿ ಸೇರಿದಂತೆ ಇತರರು ಇದ್ದರು.

Follow Us:
Download App:
  • android
  • ios