Asianet Suvarna News Asianet Suvarna News

ಅಜ್ಜನ ರಿವಾಲ್ವರ್ ಹಿಡಿದು ಮನೆಮೇಲೆ ಎರ್ರಾಬಿರ್ರಿ ಫೈರಿಂಗ್ ಮಾಡಿದ ಮೊಮ್ಮಗ!

ಅಜ್ಜನ ರಿವಾಲ್ವರ್ ತೆಗೆದುಕೊಂಡು ಮೊಮ್ಮಗ ಮಹಾಶಯನೊಬ್ಬ ಮನೆಮೇಲೆ ಹತ್ತಿ ಗಾಳಿಯಲ್ಲಿ ಎರ್ರಾಬಿರ್ರಿ ಫೈರಿಂಗ್ ನಡೆಸಿ ಹುಚ್ಚಾಟ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

Grandson firing from grandfathers revolver FIR agains accused at teradal town bagalkote rav
Author
First Published Oct 26, 2023, 1:46 PM IST

ಬಾಗಲಕೋಟೆ (ಅ.26): ಅಜ್ಜನ ರಿವಾಲ್ವರ್ ತೆಗೆದುಕೊಂಡು ಮೊಮ್ಮಗ ಮಹಾಶಯನೊಬ್ಬ ಮನೆಮೇಲೆ ಹತ್ತಿ ಗಾಳಿಯಲ್ಲಿ ಎರ್ರಾಬಿರ್ರಿ ಫೈರಿಂಗ್ ನಡೆಸಿ ಹುಚ್ಚಾಟ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

ಮೊಮ್ಮಗ ಭುವನ್ ಲೈಸೆನ್ಸ್ ಇಲ್ಲದೆ ಫೈರಿಂಗ್ ಮಾಡಿದ ಆರೋಪಿ.  ರಿವಾಲ್ವರ್ ಪರ್ಮಿಷನ್ ಪಡೆದಿದ್ದ ಅಜ್ಜ ಷಣ್ಮುಖ. ರಿವಾಲ್ವರ್ ಮನೆಯಲ್ಲಿಟ್ಟಿದ್ದು ಗಮನಿಸಿ ತೆಗೆದುಕೊಂಡು ಮನೆ ಮೇಲೆ ಹತ್ತಿ ದೀಪಾವಳಿ ಪೀಸ್ತೂಲ್‌ನಂತೆ ಎರ್ರಾಬಿರ್ರಿ ಗಾಳಿಯಲ್ಲಿ ಫೈರಿಂಗ್ ಮಾಡಿರುವ ಮೊಮ್ಮಗ ಭುವನ್. ಲೈಸೆನ್ಸ್ ಪಡೆಯದವರು ರಿವಾಲ್ವರ್ ಬಳಸುವಂತಿಲ್ಲ. ಆದರೆ ಅಜ್ಜನ ರಿವಾಲ್ವರ್‌ನಿಂದ ಮೊಮ್ಮಗ ಹುಚ್ಚಾಟ. ಈ ಘಟನೆಯಲ್ಲಿ ಯಾವುದೇ ಅನಾಹುತವಾಗಿಲ್ಲ.

ಟವೆಲ್‌ನಿಂದ ಬಿಗಿದು ವೃದ್ಧೆಯ ಕೊಲೆ; ಆಸ್ತಿಗಾಗಿ ನಡೆದ ಹತ್ಯೆ ಶಂಕೆ

ಲೈಸೆನ್ಸ್ ಪಡೆಯದೆ ರಿವಾಲ್ವರ್ ಫೈರಿಂಗ್ ಮಾಡಿದ್ದಕ್ಕೆ ಕೇಸ್ ದಾಖಲಿಸಲು ಮುಂದಾದ ಪೊಲೀಸ್ ಇಲಾಖೆ. ಅಲ್ಲದೇ ರಿವಾಲ್ವರ್ ಲೈಸನ್ಸ್ ಕ್ಯಾನ್ಸಲ್ ಮಾಡಲು ಡಿಸಿಗೆ ಪತ್ರ ಬರೆಯಲು ಮುಂದಾದ ಎಸ್ಪಿ ಅಮರನಾಥ್ ರೆಡ್ಡಿ. ಲೈಸೆನ್ಸ್ ಪಡೆದ ರಿವಾಲ್ವರ್ ಮಕ್ಕಳಿಗೂ ಸಿಗುವಂತೆ ಅಸುರಕ್ಷಿತ ಜಾಗದಲ್ಲಿ ಇಟ್ಟಿದ್ದ ಅಜ್ಜ. ಚಿಕ್ಕ ಮಕ್ಕಳ ಕೈಗೆ ರಿವಾಲ್ವಾರ್ ಸಿಕ್ಕರೆ ಏನು ಗತಿ? ಅಜ್ಜನ ಮೇಲೆಯೂ ಕೇಸ್ ಬೀಳುವ ಸಾಧ್ಯತೆ.

Follow Us:
Download App:
  • android
  • ios