ಮೈಸೂರು : ಕಾಂಗ್ರೆಸ್ಗೆ ಶಾಸಕ ಸಾರಾ ಮಹೇಶ್ ಸಲಹೆ
ಕಿಡ್ನಿ ಡಯಾಲಿಸಿಸ್ ಮಾಡಿಸುವ ವ್ಯಕ್ತಿಗಳ ನಂಬರಿಗೆ ನಾನು ಫೋನ್ ಪೇ ಮಾಡಿಸ್ತೀನಿ, ಆದರೆ ಇನ್ನು ಕೆಲವರು ತಾಲೂಕಿನ ಸ್ವಾಸ್ಥ ಹಾಳು ಮಾಡಲು ಕೆಲ ಯುವಕರಿಗೆ ಕುಡಿಸಲು ಫೋನ್ ಪೇ ಮಾಡುತ್ತಾರೆ ಎಂದು ಶಾಸಕ ಸಾ.ರಾ. ಮಹೇಶ್ ಅವರು ಪರೋಕ್ಷವಾಗಿ ಟೀಕಿಸಿದರು.
ಕೆ.ಆರ್. ನಗರ (ಅ.14): ಕಿಡ್ನಿ ಡಯಾಲಿಸಿಸ್ ಮಾಡಿಸುವ ವ್ಯಕ್ತಿಗಳ ನಂಬರಿಗೆ ನಾನು ಫೋನ್ ಪೇ ಮಾಡಿಸ್ತೀನಿ, ಆದರೆ ಇನ್ನು ಕೆಲವರು ತಾಲೂಕಿನ ಸ್ವಾಸ್ಥ ಹಾಳು ಮಾಡಲು ಕೆಲ ಯುವಕರಿಗೆ ಕುಡಿಸಲು ಫೋನ್ ಪೇ ಮಾಡುತ್ತಾರೆ ಎಂದು ಶಾಸಕ ಸಾ.ರಾ. ಮಹೇಶ್ ಅವರು ಪರೋಕ್ಷವಾಗಿ ಟೀಕಿಸಿದರು.
ಸಾಲಿಗ್ರಾಮ ತಾಲೂಕಿನ ಸಾಲೇ ಕೊಪ್ಪಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 1.50 ಕೋಟಿ ರು. ವೆಚ್ಚದಲ್ಲಿ ಗ್ರಾಮ (Village) ಪರಿಮಿತಿಯಲ್ಲಿ ಕೈಗೊಂಡಿರುವ ರಸ್ತೆ
ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಈ ರೀತಿ ಯುವ (Youths) ಸಮುದಾಯವನ್ನು ಹಾಳು ಮಾಡಿ ರಾಜಕಾರಣವನ್ನು ಮಾಡುವ ಬದಲು ಮನೆಯಲ್ಲಿ ಇರುವುದು ಒಳ್ಳೆಯದು ಎಂದರು.
ರಾಜಕೀಯ ಬಿಡಲು ಯೋಚಿಸಿದ್ದೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದ ಮೇಲೆ ಅಭಿವೃದ್ಧಿ ಪರ ಕೆಲಸ ಮಾಡಿದವರಿಗೆ ಇಲ್ಲಿ ಮನ್ನಣೆ ಸಿಗುವುದಿಲ್ಲ ಎಂದು ರಾಜಕೀಯ ಬಿಡುವ ನಿರ್ಧಾರ ಮಾಡಿದ್ದೆ, ಆದರೆ ನನ್ನ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು ರಾಜಕೀಯ ಕ್ಷೇತ್ರದಲ್ಲಿ ಇದ್ದೇನೆ ಎಂದರು.
ಅಪ್ಪು ನಮನ ಮತ್ತು ಜಲಪಾತೋತ್ಸವ
ಈ ತಿಂಗಳ 29 ರಂದು ಕೆ.ಆರ್. ನಗರದಲ್ಲಿ ತಾಲೂಕಿನ ಮೊಮ್ಮಗ ಪುನೀತ್ ರಾಜ…ಕುಮಾರ್ ಅವರ ನೆನಪಿಗಾಗಿ ಅಪ್ಪು ನಮನ ಮತ್ತು 30 ರಂದು ಚುಂಚನಕಟ್ಟೆಯಲ್ಲಿ ಜಲಪಾತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇವೆರಡು ಕಾರ್ಯಕ್ರಮಗಳಿಗೆ ಎರಡು ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು
ಜೆಡಿಎಎಸ್ ಸೇರ್ಪಡೆ: ಹಳಿಯೂರು ಗ್ರಾಪಂ ಸದಸ್ಯೆ ರೇಣುಕಾ ಪ್ರಭಾಕರ್, ಯುವ ಕಾಂಗ್ರೆಸ್ ಮುಖಂಡ ಎಸ್.ಕೆ. ಚೇತನ್, ಸಾಗರ್, ಕಿರಣ…, ಅರುಣ, ಅನಿಲ…, ಸೇರಿದಂತೆ ಮತ್ತಿತರರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.
ಜಿಲ್ಲಾ ಯುವ ಜೆಡಿಎಸ್ ಮುಖಂಡ ಮಧುಚಂದ್ರ, ಹಳಿಯೂರು ಗ್ರಾಪಂ ಅಧ್ಯಕ್ಷ ಎಚ್.ಆರ್. ದಿನೇಶ್, ಉಪಾಧ್ಯಕ್ಷೆ ಹೇಮಲತಾ, ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಶಿವಸ್ವಾಮಿ, ನಿರ್ದೇಶಕರಾದ ಹುಚ್ಚೇಗೌಡ, ವಿವೇಕ್, ಮುಖಂಡರಾದ ಭದ್ರೇಗೌಡ, ಗೋಪಾಲ…, ಕುಮಾರ್, ಪತ್ರಾಪ್, ರಾಜೇಂದ್ರ, ದೇವೆಂದ್ರ, ಮೂರ್ತಿ, ಕೀರ್ತಿ, ಜಯಕೀರ್ತಿ, ಸತೀಶ, ಶಿವಣ್ಣ, ನಿಂಗಣ್ಣ, ರಾಘವೇಂದ್ರ, ಎಚ್.ಕೆ. ಕೀರ್ತಿ,
ಎಇಇ ವಿಜಯಕುಮಾರ್, ಎಇ ಶಿವಪ್ಪ, ಆರ್‌ಐ ಚಿದಾನಂದ್, ಪಿಡಿಓ ಚಿದಾನಂದ್ ಇದ್ದರು.
ಯುವಕರನ್ನು ಹಾಳು ಮಾಡುವ ರಾಜಕಾರಣ ಮಾಡದಿರಿ
- ಶಾಸಕ ಸಾ.ರಾ. ಮಹೇಶ್ ಸಲಹೆ
- ಕಿಡ್ನಿ ಡಯಾಲಿಸಿಸ್ ಮಾಡಿಸುವ ವ್ಯಕ್ತಿಗಳ ನಂಬರಿಗೆ ನಾನು ಫೋನ್ ಪೇ ಮಾಡಿಸ್ತೀನಿ
ಆಡಳಿತದ ಹಿತಕ್ಕೆ ಹೋಟೆಲ್ ವಾಸ
ನಮ್ಮವರು ಹೋಟೆಲ್‌ನಲ್ಲಿ ಇರುತ್ತಿದ್ದರು. ಹಾಗಾದರೇ ನಿಮ್ಮವರು ಗುಡಿಸಿಲಿನಲ್ಲಿ ಇದ್ದರಾ ಎಂದು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರನ್ನು ಪ್ರಶ್ನಿಸಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೋಟೆಲ್‌ನಲ್ಲಿ ಇದ್ದುಕೊಂಡು ಆಡಳಿತ ನಡೆಸುತ್ತಿದ್ದರು ಎಂಬ ಡಾ. ಅಶ್ವತ್ಥನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಾಂಬೆಯಲ್ಲಿ ಇದ್ದವರು ಗುಡಿಸಿಲಿನಲ್ಲಿ ಇದ್ದರಾ? ಅವರನ್ನೆಲ್ಲ ಬಾಂಬೆಯಲ್ಲಿ ಗುಡಿಸಿಲಿನಲ್ಲಿ ಇರಿಸಿದ್ರಾ? ಎಂದು ಕಿಡಿಕಾರಿದದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿಎಂ ಅಧಿಕೃತ ನಿವಾಸ ಖಾಲಿ ಇರಲಿಲ್ಲ. ಹೀಗಾಗಿ ಕುಮಾರಸ್ವಾಮಿ ಮಧ್ಯಾಹ್ನದ ವೇಳೆ ವಿಧಾನಸೌಧಕ್ಕೆ ಸನಿಹದಲ್ಲಿದ್ದ ಖಾಸಗಿ ಹೋಟೆಲ್‌ನಲ್ಲಿ ಊಟಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಆಡಳಿತದ ಹಿತದೃಷ್ಟಿಯಿಂದ ಕುಮಾರಸ್ವಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಸಚಿವರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಮಿಸ್ಟರ್ ಬ್ಲಾಕ್‌ಮೇಲರ್, ಅದೇನೋ ಬಿಚ್ಚಿಡ್ತಿಯೋ ಬಿಚ್ಚಿಡಪ್ಪ: ಎಚ್‌ಡಿಕೆಗೆ ಅಶ್ವತ್ಥನಾರಾಯಣ ಸವಾಲ್
ಅಶ್ವತ್ಥನಾರಾಯಣ ಒಳ್ಳೆಯ ಸ್ನೇಹಿತ. ನಾನೂ ಬಿಜೆಪಿಯಲ್ಲಿ ಇದ್ದವನು. ರಾಜ್ಯ, ರಾಷ್ಟ್ರೀಯ ನಾಯಕರು ಬಂದರೂ ಕಾರ್ಯಕರ್ತನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ನಮ್ಮದು ಸಮ್ಮಿಶ್ರ ಸರ್ಕಾರ ಇತ್ತು. ಆಗಿನ ಮಾಜಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿರಲಿಲ್ಲ. ಕುಮಾರಸ್ವಾಮಿ ಅವರ ಮನೆ ಜೆ.ಪಿ. ನಗರದಲ್ಲಿದೆ. ಹೀಗಾಗಿ, ಅವರು ಹೋಟೆಲ್‌ನಲ್ಲಿದ್ದರು. ನಮ್ಮಲ್ಲೂ ಮಾತನಾಡುವವರು ಇದ್ದಾರೆ. ದೇವೇಗೌಡರು ಇತಿಮಿತಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ ಎಂದರು.