ದಾವಣಗೆರೆ(ಏ.30): ಹೊನ್ನಾಳಿ ಪಟ್ಟಣದ ಸಂತೃಪ್ತಿ ಅಂಧರ ಸೇವಾಸಂಸ್ಥೆ ಕೊರೋನಾದಂತಹ ಕ್ಲಿಷ್ಟಪರಿಸ್ಥಿತಿಯಲ್ಲಿಯೂ ದೃಷ್ಟಿದೋಷ ಇರುವವರಿಗೆ ಮಾನವೀಯ ನೆಲಗಟ್ಟಿನಲ್ಲಿ ದಿನಂಪ್ರತಿ ಮಧ್ಯಾಹ್ನದ ಊಟವನ್ನು ಉಚಿತವಾಗಿ ನೀಡುತ್ತಿದ್ದು, ಅವರ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿದ್ದೇನೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಇಲ್ಲಿನ ತುಮ್ಮಿನಕಟ್ಟೆರಸ್ತೆಯ ಸಂತೃಪ್ತಿ ಅಂಧರ ಸಂಸ್ಥೆಗೆ ಭೇಟಿ ನೀಡಿ ರಾಜ್ಯದಲ್ಲಿ ಕೊರೋನಾ ವೈರಸ್‌ ಹರಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೀವನ ನಡೆಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಅಂಧರಿಗೆ ಮಧಾಹ್ನದ ಊಟ ಮತ್ತು 2 ತಿಂಗಳ ಮನೆ ಬಾಡಿಗೆ 6000 ರು.ಗಳನ್ನು ಶಾಸಕರು ವೈಯುಕ್ತಿವಾಗಿ ನೀಡಿ ಅವರು ಮಾತನಾಡಿದರು.

ಗಣಿ, ಕಲ್ಲು, ಮರಳುಗಾರಿಕೆ, ಸಾಗಾಣಿಕೆಗೆ ಅನುಮತಿ

ಸಂತೃಪ್ತಿ ಅಂಧರ ಸೇವಾ ಸಂಸ್ಥೆಯ ಅಂಧರು ಮಾತನಾಡಿ, ತಾಲೂಕಿನ ಸುತ್ತಮುತ್ತ ನಡೆಯುವ ಹಲವಾರು ಸಭೆ, ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಸಾರ್ವಜನಿಕರು ನೀಡಿದ ಅಲ್ಪ ಸ್ವಲ್ಪ ಧನ ಸಹಾಯದಲ್ಲಿ ಜೀವನ ನಡೆಸುತ್ತಿದ್ದೇವೆ.

ಲಾಕ್‌ಡೌನ್ ಉಲ್ಲಂಘಿಸಿದ್ರೆ ಹೊಡಿಯಲ್ಲ, ಬಡಿಯಲ್ಲ..! ಪೊಲೀಸರ ಹೊಸ ಐಡಿಯಾ

ಸರ್ಕಾರದಿಂದ ಪ್ರತಿ ತಿಂಗಳು ನೀಡುವ ಅಂಗವಿಕಲರ ವೇತನದಿಂದ ಬರುವ ಹಣದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇವೆ. ಇದನ್ನು ಬಿಟ್ಟರೆ ಇನ್ನೂ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಶಾಸಕ ರೇಣುಕಾಚಾರ್ಯ ತಮ್ಮ ಕೈಲಾದಷ್ಟುನೆರವು ನೀಡಿ ನಮ್ಮ ಬಗ್ಗೆ ಪ್ರೀತಿ ತೋರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶಾಸಕರ ಪತ್ನಿ ಸುಮಾ ರೇಣುಕಾಚಾರ್ಯ ಮತ್ತಿತರರಿದ್ದರು.