ಬಂಟ್ವಾಳ (ನ.16): ಇಲ್ಲಿನ ಕ್ಷೇತ್ರ ಬಿಜೆಪಿ ವತಿಯಿಂದ ನರಿಕೊಂಬು ಗ್ರಾಮದ ನಾಟಿ ಸಜಂಕಪಲಿಕೆಯ ಯೋಧ ನಾಗೇಶ ಅವರ ಮನೆಯಲ್ಲಿ ದೀಪಾವಳಿಯನ್ನು ಭಾನುವಾರ ಆಚರಿಸಲಾಯಿತು.

ಶಾಸಕ ರಾಜೇಶ್‌ ನಾಯ್ಕ ಅವರು ದೀಪ ಬೆಳಗಿಸಿ ಶುಭ ಹಾರೈಸಿ, ಕರ್ತವ್ಯದಲ್ಲಿದ್ದ ಯೋಧ ನಾಗೇಶ್‌ ಅವರೊಂದಿಗೆ ವೀಡಿಯೋ ಕರೆಯ ಮೂಲಕ ಮಾತನಾಡಿ ದೀಪಾವಳಿಯ ಶುಭಾಶಯ ತಿಳಿಸಿದರು.

ಬಳಿಕ ಮನೆಯವರೊಂದಿಗೆ ಮಾತನಾಡಿ, ದೇಶ ಸೇವೆಗೈಯ್ಯುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ನಮ್ಮೆಲ್ಲರಿಗೆ ನೀಡಿದ ಪ್ರೇರಣೆಯ ಈ ಕಾರ್ಯಕ್ರಮ ಸಂತೋಷ ತಂದಿದೆ ಎಂದರು.

ಬಿಜೆಪಿ ಶಾಸಕಗೆ ಎದುರಾಯ್ತು ಅಕ್ರಮ ದಂಧೆ ಆರೋಪ ...

ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿವಾಮದಪದವು ಮತ್ತಿತರರಿದ್ದರು.