Asianet Suvarna News Asianet Suvarna News

ದೊಡ್ಡಕೆರೆ, ಮಾರೇಹಳ್ಳಿ ಕೆರೆಗೆ ಶಾಸಕ ಡಾ.ಕೆ.ಅನ್ನದಾನಿ ಬಾಗಿನ

ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆ ತುಂಬಿದ್ದು, ಶಾಸಕ ಡಾ.ಕೆ.ಅನ್ನದಾನಿ ಬಾಗಿನ ಅರ್ಪಿಸಿದರು. ಮಳವಳ್ಳಿ ಕೆರೆಗೆ 10ನೇ ಮೈಲಿ ಬಳಿಯಿರುವ ನಾಲೆಯಿಂದ ಸಂಪರ್ಕ ಕಲ್ಪಿಸುವಂತೆ ಕುಮಾರಸ್ವಾಮಿ ಸಿಎಂ ಯಾಗಿದ್ದಾಗ ಮನವಿ ಮಾಡಿದ್ದೆ. ಆದರೆ ಸರ್ಕಾರ ಪತನಗೊಂಡಿದೆ. ಪ್ರಸ್ತುತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು.

 

MLA K Annadani offers Bagina to Doddakere and MareHalli Kere in Malavalli
Author
Bangalore, First Published Aug 27, 2019, 8:43 AM IST
  • Facebook
  • Twitter
  • Whatsapp

ಮಂಡ್ಯ(ಆ.27): ಮಳವಳ್ಳಿ ಪಟ್ಟಣದ ದೊಡ್ಡ ಕೆರೆ ಹಾಗೂ ಹೊರವಲಯದಲ್ಲಿರುವ ಮಾರೇಹಳ್ಳಿ ಕೆರೆಗಳಿಗೆ ನಾಲೆಯಿಂದ ನೇರ ತುಂಬಿಸಲು ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆ ತುಂಬಿದ್ದ ಹಿನ್ನಲೆಯಲ್ಲಿ ಬಾಗಿನ ಸಲ್ಲಿಸಿ ಮಾತನಾಡಿದರು. ಎರಡು ಕೆರೆಗಳು ಸುಮಾರು 800 ಎಕರೆಯಷ್ಟಿದ್ದು ಸಾವಿರಾರು ಎಕರೆ ಅಚ್ಚುಕಟ್ಟು ಪ್ರದೇಶ ಹಾಗೂ ಈ ಕೆರೆಗಳು ತುಂಬಿದ ನಂತರ ಹಲವು ಕೆರೆಗಳು ತುಂಬಲು ಸಹಕಾರಿಯಾಗಿವೆ ಎಂದರು.

ಮಂಡ್ಯ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಈ ಎರಡು ಕೆರೆಗಳಿಗೆ ನೀರು ತುಂಬಿಸಲು ಸಮರ್ಪಕವಾದ ನಾಲೆಯಿಲ್ಲ. ಆದ್ದರಿಂದ ಮಳವಳ್ಳಿ ಕೆರೆಗೆ 10ನೇ ಮೈಲಿ ಬಳಿಯಿರುವ ನಾಲೆಯಿಂದ ಸಂಪರ್ಕ ಕಲ್ಪಿಸುವಂತೆ ಕುಮಾರಸ್ವಾಮಿ ಸಿಎಂ ಯಾಗಿದ್ದಾಗ ಮನವಿ ಮಾಡಿದ್ದೆ. ಆದರೆ ಸರ್ಕಾರ ಪತನಗೊಂಡಿದೆ. ಪ್ರಸ್ತುತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು. ಕಳೆದ ಬಾರಿಯೂ ಕೆರೆಗಳು ತುಂಬಿದೆ.

ಈ ವರ್ಷವೂ ತಡವಾಗಿಯಾದರೂ ಕೆರೆಗಳು ತುಂಬಿವೆ. ಎಲ್ಲಾ ರೈತರು ಭತ್ತ ಬೆಳೆಯಬಹುದು. ಈಗಾಗಲೇ ಬಿತ್ತನೆ ಭತ್ತವನ್ನು ನೀಡಲಾಗುತ್ತಿದೆ. ಯಾವುದೇ ಆತಂಕವಿಲ್ಲದೆ ಭತ್ತ ಬೆಳೆಯಿರಿ ಎಂದರು.

ಮಂಡ್ಯ: ಒಂದೇ ರಾತ್ರಿ ಮೂರು ದೇಗುಲಗಳಿಗೆ ಕನ್ನ!

ಕ್ಷೇತ್ರದ ಅಭಿವೃದ್ಧಿಗಾಗಿ ಜನರು ಆಶಿರ್ವಾದ ಮಾಡಿದ್ದಾರೆ. ನಾನು ಯಾರ ಅವಧಿಯ ಅಭಿವೃದ್ಧಿ ಕೆಲಸಗಳ ಬಗ್ಗೆ ಟೀಕೆ ಮಾಡುವುದಿಲ್ಲ. ಅದರ ಅಗತ್ಯವೂ ಇಲ್ಲ ಕ್ಷೇತ್ರದ ಮತದಾರರಿಗೆ ಅಗತ್ಯ ಸೌಲಭ್ಯ ಒದಗಿಸವುದೆ ನನ್ನ ಆಧ್ಯ ಕರ್ತವ್ಯ ಎಂದು ತಿಳಿಸಿದರು. ಈ ವೇಳೆ ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್‌ ,ಜೆಡಿಎಸ್‌ ತಾಲೂಕು ಅಧ್ಯಕ್ಷ ಮಲ್ಲೇಗೌಡ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಹಾಲಿ ಸದಸ್ಯ ನಂದಕುಮಾರ್‌, ಸಿದ್ದರಾಜು, ಮುಖಂಡರಾದ ಶಿವಲಿಂಗಯ್ಯ, ಪ್ರಭು ಇದ್ದರು.

Follow Us:
Download App:
  • android
  • ios