Asianet Suvarna News Asianet Suvarna News

ಅರಸು ಜಿಲ್ಲೆ ಮಾಡಲು ಸರ್ಕಾರಕ್ಕೆ ಶಾಸಕ ಜಿ.ಡಿ.ಹರೀಶ್ಗೌಡ ಮನವಿ

ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ, ಮಾಜಿ ಮುಖ್ಯಮಂತ್ರಿಯಾಗಿದ್ದ ದಿ. ಡಿ. ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ವೆಂದು ನಾಮಕರಣ ಮಾಡಿ 50 ವರ್ಷ ತುಂಬುವ ಮೂಲಕ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಹುಣಸೂರು ಉಪ ವಿಭಾಗದ ವ್ಯಾಪ್ತಿಗೆ ಬರುವ ಆರು ತಾಲೂಕುಗಳನ್ನು ಸೇರಿಸಿಕೊಂಡು ಅರಸು ಜಿಲ್ಲೆ ಮಾಡಲು ನೇತೃತ್ವ ವಹಿಸುವುದಾಗಿ ಶಾಸಕ ಜಿ.ಡಿ. ಹರೀಶ್ಗೌಡ ಹೇಳಿದರು.

MLA G.D. Harish Gowda requested the government to make Arasu district snr
Author
First Published Jan 24, 2024, 11:05 AM IST | Last Updated Jan 24, 2024, 11:05 AM IST

  ಹುಣಸೂರು :  ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ, ಮಾಜಿ ಮುಖ್ಯಮಂತ್ರಿಯಾಗಿದ್ದ ದಿ. ಡಿ. ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ವೆಂದು ನಾಮಕರಣ ಮಾಡಿ 50 ವರ್ಷ ತುಂಬುವ ಮೂಲಕ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಹುಣಸೂರು ಉಪ ವಿಭಾಗದ ವ್ಯಾಪ್ತಿಗೆ ಬರುವ ಆರು ತಾಲೂಕುಗಳನ್ನು ಸೇರಿಸಿಕೊಂಡು ಅರಸು ಜಿಲ್ಲೆ ಮಾಡಲು ನೇತೃತ್ವ ವಹಿಸುವುದಾಗಿ ಶಾಸಕ ಜಿ.ಡಿ. ಹರೀಶ್ಗೌಡ ಹೇಳಿದರು.

ಪಟ್ಟಣದ ಅಂಬೇಡ್ಕರ್ಭವನದಲ್ಲಿ ನಡೆದ ಅರಸು ಜಿಲ್ಲೆ ಮಾಡುವ ಸಂಬಂಧವಾಗಿ ನಡೆದ ಫೂರ್ವಭಾವಿ ಸಭೆಗೆ ಮಾಹಿತಿ ಕಳುಹಿಸಿದ ಅವರು ಹುಣಸೂರು ಉಪ ವಿಭಾಗದ ವ್ಯಾಪ್ತಿಗೆ ಬರುವ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಸಾಲಿಗ್ರಾಮ ಹಾಗೂ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕುಗಳನ್ನು ಸೇರಿಸಿಕೊಂಡು ಜಿಲ್ಲೆ ಮಾಡುವ ಸಂಬಂಧವಾಗಿ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರನ್ನು ಸ್ಮರಿಸುವ ಜತೆಗೆ ಅವರ ಹೆಸರಿನಲ್ಲೆ ಅರಸು ಜಿಲ್ಲೆ ಮಾಡುವ ಬಗ್ಗೆ ನಮ್ಮ ಚಿಂತಕರು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರು ನಡೆಸುತ್ತಿರುವ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಹಾಗೂ ಹುಣಸೂರು ಕ್ಷೇತ್ರದ ಶಾಸಕನಾಗಿ ಹುಣಸೂರು ಜಿಲ್ಲೆಯನ್ನು ಸ್ಥಾಪಿಸಲು ಯಾವುದೇ ಸಂದರ್ಭದಲ್ಲೂ ಹೋರಾಟವನ್ನು ರೂಪಿಸಲು ನೇತೃತ್ವ ವಹಿಸುತ್ತೇನೆ. ಜಿಲ್ಲೆಯಾಗುವ ತನಕ ನಿರಂತರವಾಗಿ ಹೋರಾಟ ನಡೆಯಲಿ. ಜಿಲ್ಲೆಗಾಗಿ ನಡೆಯುವ ಹೋರಾಟದ ನೇತೃತ್ವವನ್ನು ವಹಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಅರಸು ಕರ್ಮಭೂಮಿಯಲ್ಲಿ ರಾಜಕೀಯ ಜೀವನ ಆರಂಭ

  ಹುಣಸೂರು :  ಅರಸರ ಕರ್ಮಭೂಮಿಯಲ್ಲಿ ರಾಜಕೀಯ ಜೀವನ ಆರಂಭಗೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯವೆಂದು ಜೆಡಿಎಸ್‌ ಅಭ್ಯರ್ಥಿ ಜಿ.ಡಿ. ಹರೀಶ್‌ಗೌಡ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ತಿ ದಿವಂಗತ ದೇವರಾಜ ಅರಸರ ಹುಟ್ಟೂರು ಕಲ್ಲಹಳ್ಳಿಯಲ್ಲಿ  ಮಾತನಾಡಿದರು.  ದನಿ ಇಲ್ಲದವರಿಗೆ ದನಿಯಾಗಿ ದೇಶಾದ್ಯಂತ ತಮ್ಮ ಆಡಳಿತ ವೈಶಿಷ್ಟ್ಯತೆಗೆ ಪ್ರಸಿದ್ಧಿ ಪಡೆದ ಅರಸರ ನೆಲದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೇನೆ. ಜನತೆ ಪ್ರೀತಿಯಿಂದ ಆದರಿಸುತ್ತಿದ್ದಾರೆ. ತಾಲೂಕಿನಾದ್ಯಂತ ಜನರ ಪ್ರೀತಿ ವಿಶ್ವಾಸ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಜಾತಿ, ಮತ, ಧರ್ಮಗಳನ್ನು ನೋಡದೇ ಕೇವಲ ಅಭಿವೃದ್ಧಿಯನ್ನೇ ಮಂತ್ರವನ್ನಾಗಿಸಿಕೊಂಡು ದುಡಿದ ನನ್ನ ತಂದೆಯವರ ಕಾರ್ಯವೈಖರಿಯಿಂದಾಗಿಯೇ ಜನರು ಇಂದಿಗೂ ನಮ್ಮ ಕುಟುಂಬವನ್ನು ಪ್ರೀತಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಮತದಾರರ ಮನೆಮನೆಗೆ ತೆರಳಿ ಪಕ್ಷದ ಬೆಂಬಲಕ್ಕೆ ಕೋರಬೇಕು. ಗ್ರಾಮಗಳಲ್ಲಿ ಒಡೆದ ಮನಸುಗಳನ್ನು ಒಂದಾಗಿಸಿ ಅಭಿವೃದ್ಧಿಯತ್ತ ಚಿತ್ರ ಹರಿಸುವಂತೆ ಮಾಢುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ ಎಂದು ಕಿವಿಮಾತು ಹೇಳಿದರು.

Latest Videos
Follow Us:
Download App:
  • android
  • ios