ಸರಿ ಸಮಾನರು ಅಲ್ಲದವರ ಹೇಳಿಕೆಗೆ ಉತ್ತರ ನೀಡಲ್ಲ : ಶಾಸಕ

ವಿಷಯಕ್ಕೆ ಸಂಬಂಧ ಪಡದವರು, ಸರಿ ಸಮಾನರು ಅಲ್ಲದವರ ಹೇಳಿಕೆಗೆ ಉತ್ತರ ನೀಡಲ್ಲ ಎಂದು ಶಾಸಕ ಎಂ. ಅಶ್ವಿನ್‌ಕುಮಾರ್‌ ತಿರುಗೇಟು ನೀಡಿದರು.

MLA Ashwin kumar Slams Congress Leaders snr

 ನರಸೀಪುರ (ಅ.14): ವಿಷಯಕ್ಕೆ ಸಂಬಂಧ ಪಡದವರು, ಸರಿ ಸಮಾನರು ಅಲ್ಲದವರ ಹೇಳಿಕೆಗೆ ಉತ್ತರ ನೀಡಲ್ಲ ಎಂದು ಶಾಸಕ ಎಂ. ಅಶ್ವಿನ್‌ಕುಮಾರ್‌ ತಿರುಗೇಟು ನೀಡಿದರು.

ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಎಪಿಎಂಸಿ (APMC) ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌(Congress)  ಮುಖಂಡ ಉಕ್ಕಲಗೆರೆ ಬಸವಣ್ಣ ಗ್ರಾಪಂ ಅಧ್ಯಕ್ಷರ ಮುಖಾಂತರ ಕನಕ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಕನಕ ಭವನದ ಅನುದಾನ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಬಿಡುಗಡೆ ಮಾಡಿದ್ದು, ಹಾಲಿ ಶಾಸಕ ಅಶ್ವಿನ್‌ಕುಮಾರ್‌ ಅವರ ಕೊಡುಗೆ ನಮ್ಮ ಗ್ರಾಮಕ್ಕೆ ಶೂನ್ಯ ಅವರ ಅನುದಾನವೇ ಇಲ್ಲ, ಮಹದೇವಪ್ಪ ಅವರ ಅಧಿಕಾರವಧಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಗುದ್ದಲಿ ಪೂಜೆ ಮಾಡಿಕೊಂಡು ತಿರುಗಾಡುತಿದ್ದಾರೆ ಎಂದು ಆರೋಪ ಮಾಡಿದ್ದ ಹಿನ್ನೆಲೆ ಉಕ್ಕಲಗೇರಿ ಗ್ರಾಮದಲ್ಲಿ ನಿಯಮಾನುಸಾರ ಕನಕ ಭವನಕ್ಕೆ ಗುದ್ದಲಿ ಪೂಜೆ ಮಾಡಿ ಕಾಂಗ್ರೆಸ್‌ ಮುಖಂಡ ಬಸವಣ್ಣ ಅವರಿಗೆ ತಿರುಗೇಟು ನೀಡಿದರು.

ನನ್ನ ಮೇಲೆ ಆರೋಪ ಮಾಡಿರುವವರಿಗೆ ಅವರ ಸರಿಸಮಾನರೇ ಉತ್ತರ ನೀಡಬೇಕೆಂದು ನಾನು ಮಾತನಾಡಿರಲಿಲ್ಲ, ಒಬ್ಬ ವ್ಯಕ್ತಿಯ ಮೇಲೆ ಪದೇ, ಪದೇ ಆರೋಪಗಳು ಕೇಳಿ ಬಂದಾಗ ಅವರನ್ನು ಪ್ರೀತಿಸುವವರು ಪ್ರತಿ ಉತ್ತರ ಕೂಡಬೇಕೆಂಬ ಒತ್ತಾಯ ಬರುವುದು ಸಹಜ, ಹಾಗಾಗಿ ಈ ದಿನ ಮೌನ ಮುರಿದು ಮಾತನಾಡುವ ಅನಿವಾರ್ಯ ಸೃಷ್ಟಿಯಾಗಿದೆ ಎಂದರು.

ನಾನು ಜಿಪಂ ಸದಸ್ಯನಾಗಿದ್ದಾಗ ನನ್ನ ಜಿಪಂ ವ್ಯಾಪ್ತಿಗೆ ಉಕ್ಕಲಗೆರೆ ಗ್ರಾಮ ಸೇರಿತ್ತು, ಆ ಸಂದರ್ಭದಲ್ಲಿ ಎಚ್‌.ಸಿ. ಮಹದೇವಪ್ಪ ಈ ಕ್ಷೇತ್ರದ ಶಾಸಕರು, ಆಗಲೇ ಜಿಪಂ ಅನುದಾನವನ್ನು ಉಕ್ಕಲಗೇರಿ ಗ್ರಾಮದ ಅಭಿವೃದ್ಧಿಗೆ ಹಾಕಿದ್ದೆ, ಈಗ ಶಾಸಕನಾಗಿ ಹಾಕಿಲ್ಲವ ಎಂದು ಗುಡುಗಿದ ಅವರು, ಒಬ್ಬರ ಮೇಲೆ ಆರೋಪ ಮಾಡುವಾಗ ಸತ್ಯ ಸತ್ಯಾತೆ ತಿಳಿದು ಮಾತನಾಡಬೇಕು ಎಂದು ಹೇಳಿದರು.

ನಾನು ಕಾಂಗ್ರೆಸ್ ಸೇರಿಲ್ಲ : 

ನಾನು ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡಿಲ್ಲ. ಎರಡು ಬಾರಿ ಶಾಸಕರಾಗಿದ್ದ ತಂದೆ ಡಿ.ಹಲಗೇಗೌಡರು ಹಾಗೂ ಇಡೀ ನಮ್ಮ ಕುಟುಂಬವೇ ಕಾಂಗ್ರೆಸ್‌ ಆಗಿರುವ ಕಾರಣ ಭಾರತ್‌ ಜೋಡೋ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಭಿಮಾನದಿಂದ ನಮಗೆ ಹಾರ ಹಾಕಿದ್ದಾರೆ ಅಷ್ಟೇ ಎಂದು ಜಿಪಂ ಮಾಜಿ ಸದಸ್ಯ ಎಚ್‌.ಮಂಜುನಾಥ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ನಾನು ಸಕ್ರಿಯ ರಾಜಕಾರಣದಿಂದ (Politics)  ದೂರವಿದ್ದೆ. ಈ ಹಿಂದೆ ನಾನು ಬಿಜೆಪಿ(BJP) ಪಕ್ಷ ಸೇರಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಮನೆಗೆ ಭೇಟಿ ನೀಡಿ 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡುವ ಭರವಸೆ ನೀಡಿದ್ದರು. ಆದರೆ, ನಾನು ಬಿಜೆಪಿಗೆ ಸೇರಿರಲಿಲ್ಲ ಎಂದರು.

ಭಾರತ್‌ ಜೋಡೋ ಯಾತ್ರೆ (Bharat Jodo Yatra ) ಪ್ರಯುಕ್ತ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಜಕ್ಕನಹಳ್ಳಿಗೆ ಬರುವ ಹಿನ್ನೆಲೆ ಡಿ.ಕೆ.ಶಿವಕುಮಾರ್‌ ಸಿದ್ಧತೆ ಪರಿಶೀಲಿಸಲು ಆಗಮಿಸಿದ್ದರು. ಜತೆಗೆ ಅದು ಪಕ್ಷಾತೀತ ಕಾರ್ಯಕ್ರಮವಾಗಿದ್ದರಿಂದ ಅಲ್ಲಿಗೆ ಭೇಟಿ ಮಾಡಿದ್ದ ನನಗೆ ಅಭಿಮಾನದಿಂದ ಹಾರ ಹಾಕಿದರು.

ಮೇಲುಕೋಟೆ ಕ್ಷೇತ್ರ ಕಾಂಗ್ರೆಸ್‌ನಲ್ಲಿ ಗೊಂದಲಮಯ ವಾತಾವರಣ ಇದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದರು. ಪಕ್ಷೇತರ ಅಭ್ಯರ್ಥಿಗೆ ಮತ ಚಲಾಯಿಸಲಾಯಿತು. ಅಲ್ಲದೇ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ಚುನಾವಣೆಗಳಲ್ಲಿಯೂ ರೈತಸಂಘದ ಕೆ.ಎಸ್‌.ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಮತ ಚಲಾಯಿಸುವ ಮೂಲಕ ಪಕ್ಷದಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ ಬೆಂಬಲಿಗರು ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ ಕಾಂಗ್ರೆಸ್‌ ಸೇರುವ ಬಗ್ಗೆ ಚಿಂತಿಸುವೆ ಎಂದರು.

ನನ್ನ ಸಹೋದರ ಕಾಂಗ್ರೆಸ್ನಲ್ಲಿದ್ದಾರೆ. ಜತೆಗೆ ನಮ್ಮ ತಂದೆ, ಮಾಜಿ ಶಾಸಕ ಡಿ.ಹಲಗೇಗೌಡರ ಕುಟುಂಬ ಕಾಂಗ್ರೆಸ್‌ ಆಗಿದೆ. ಹೀಗಾಗಿ ಕಾಂಗ್ರೆಸ್‌ ಜೋಡೋ ಯಾತ್ರೆ ಪ್ಲೆಕ್‌ಗಳಲ್ಲಿ ನನ್ನ ಫೋಟೋ ಅಳವಡಿಸಲಾಗಿದೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಳೇನಹಳ್ಳಿ ಪುಟ್ಟಸ್ವಾಮಿಗೌಡ, ಶಿವರಾಜು, ಎಸ….ಕೆ.ಪ್ರಕಾಶ್‌, ಶಿವಣ್ಣ ಇತರರಿದ್ದರು.

ನಾನು ಅವಿದ್ಯಾವಂತನು ಅಲ್ಲ, ಹೆಬ್ಬೆಟ್ಟು ಅಲ್ಲ, ನಾನೊಬ್ಬ ಡಬಲ್ ಡಿಗ್ರಿ ಎಂ.ಟೆಕ್‌ ಓದಿದ್ದೇನೆ ಎಂಬುದರ ಬಗ್ಗೆ ಅರಿವಿರಲಿ, ನನ್ನ ಬಗ್ಗೆ ಮಾತನಾಡುವಾಗ ಕೆಲವು ಸುಳ್ಳು ಆರೋಪಗಳನ್ನು ಮಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷರಾದ ಕುಮಾರ್‌, ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್‌.ಎನ್‌. ಸಿದ್ದಾರ್ಥ, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಜಿಪಂ ಮಾಜಿ ಸದಸ್ಯ ಜೈಪಾಲ… ಭರಣಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಗ್ರಾಪಂ ಸದಸ್ಯರಾದ ಪುಟ್ಟಮ್ಮ, ಶಿವಕುಮಾರ್‌, ಮುಖಂಡರಾದ ರಾಜು, ನಟರಾಜು, ಎಸ್‌.ಪಿ. ಕುಮಾರ್‌, ರಾಜಶೇಖರ್‌, ಕೆ. ಶಿವಣ್ಣ ಇದ್ದರು.

Latest Videos
Follow Us:
Download App:
  • android
  • ios