ರಾಮನಗರ [ಮಾ. 07] : ಮುಖ್ಯಮಂತ್ರಿ ಯಡಿಯೂರಪ್ಪ ರೈತಪರ ಎಂದು ಹೇಳಿಕೊಳ್ಳುತ್ತಾರೆ, ಆದರೆ ರೈತರಿಗಾಗಿ ಇದ್ದ ಯೋಜನೆಗಳಿಗೆ ಬ್ರೇಕ್ ಹಾಕಿದ್ದಾರೆ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ರಾಮನಗರದಲ್ಲಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು,  ಮೈತ್ರಿ ಸರ್ಕಾರದ ಹಲವು ಯೋಜನೆಗಳನ್ನು ಕೈ ಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕುಮಾರಸ್ವಾಮಿಯವರಿಗಾಗಿ ಅಲ್ಲದಿದ್ದರೂ ರೈತರಿಗಾಗಿ ಮುಂದುವರಿಸಬಹುದಿತ್ತು. ಪ್ರಮುಖವಾಗಿ ರೈತರ ಸಾಲಮನ್ನಾ ಯೋಜನೆಯನ್ನೇ ಕೈ ಬಿಟ್ಟಿದ್ದಾರೆ ಎಂದರು. 

ನಿಖಿಲ್‌ - ರೇವತಿ ಮದುವೆ ಸಂಭ್ರಮ; ರಾಮನಗರ- ಚನ್ನಪಟ್ಟಣ ಜನತೆಗೆ ಗಿಫ್ಟ್‌!.

ಬಜೆಟ್ ಮಂಡಿಸುವಾಗ ಹಸಿರು ಶಾಲು ಹಾಕಿಕೊಂಡಿದ್ದರು. ಆದರೆ ಬಜೆಟ್ ಮಾತ್ರ ರೈತ ಪರವಾಗಿ ಇಲ್ಲ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೂ ಕೈ ಬಿಟ್ಟಿರುವ ಯೋಜನೆಗಳನ್ನು ಮುಂದುವರಿಸಲಿ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. 

8 ಲಕ್ಷ ಲಗ್ನ ಪತ್ರಿಕೆ, ಮನೆ-ಮನೆಗೂ ಸೀರೆ, ಶರ್ಟ್, ಪಂಚೆ; ನಿಖಿಲ್‌ ಮದುವೆ ಸಂಭ್ರಮ!..

ಪುತ್ರ ವಿವಾಹ ವಿಚಾರ ಪ್ರಸ್ತಾಪ : ಇನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅನಿತಾ ಕುಮಾರಸ್ವಾಮಿ ನಾವೇನು ಸಾವಿರಾರು ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಿಲ್ಲ. ನಮ್ಮ ಜನಗಳ ಮಧ್ಯೆಯೇ ಮದುವೆ ಮಾಡಬೇಕೆಂದು ಆಸೆ ಪಟ್ಟಿದ್ದು ಅಷ್ಟೇ. ಅದ್ದೂರಿಯಾಗಿ ಮದುವೆ ಮಾಡುತ್ತಿಲ್ಲ, ನಮ್ಮ ಕಡೆಯಿಂದ ಯಾರಿಗೂ ಗಿಫ್ಟ್ ನೀಡುತ್ತಿಲ್ಲ. ಅದೆಲ್ಲವೂ ಸುಳ್ಳು. ಸಿಂಪ್ ಮದುವೆ ಮಾಡುತ್ತೇವೆ ಎಂದರು.