Asianet Suvarna News Asianet Suvarna News

ಟೆಕ್ಕಿ ಕಾಣೆ ಪ್ರಕರಣ : ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಅಭಿಜಿತ್ ತಂದೆ ಅಶೋಕ್ ಕುಮಾರ್ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಜನವರಿಯಲ್ಲಿಯೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಪ್ರಕರಣವನ್ನು ರಾಜ್ಯ ಎಸ್ ಐಟಿ ತನಿಖೆ ನಡೆಸುತ್ತಿದೆ. 

Missing techie case: HC orders transfer of investigation to CBI
Author
Bengaluru, First Published Oct 22, 2018, 5:05 PM IST
  • Facebook
  • Twitter
  • Whatsapp

ಬೆಂಗಳೂರು[ಅ.22]: ಕರ್ನಾಟಕ ಹೈಕೋರ್ಟ್ ಬೆಂಗಳೂರು ಟೆಕ್ಕಿ ಅಭಿಜಿತ್ ಕಾಣೆಯಾದ ಪ್ರಕರಣವನ್ನು ತಕ್ಷಣ ಸಿಬಿಐ'ಗೆ ವರ್ಗಾಯಿಸಬೇಕೆಂದು ಆದೇಶಿಸಿದೆ.

ನ್ಯಾಯಾಧೀಶರಾದ  ಅರವಿಂದ್ ಕುಮಾರ್ ತೀರ್ಪು ನೀಡಿ, ಈ ಪ್ರಕರಣವನ್ನು ದೇಶದ ಪ್ರತಿಷ್ಠಿತ ತನುಖಾ ಕೇಂದ್ರವಾದ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ತಿಳಿಸಿದ್ದಾರೆ.

ಅಭಿಜಿತ್ ತಂದೆ ಅಶೋಕ್ ಕುಮಾರ್ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಜನವರಿಯಲ್ಲಿಯೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಪ್ರಕರಣವನ್ನು ರಾಜ್ಯ ಎಸ್'ಐಟಿ ತನಿಖೆ ನಡೆಸುತ್ತಿದೆ.

ಅಭಿಜಿತ್ ಅವರು 2017ರ ಡಿಸೆಂಬರ್ 17ರಂದು ತಮ್ಮ ಕಾರನ್ನು ಮಾರಾಟ ಮಾಡಲು ಮಧ್ಯವರ್ತಿಯನ್ನು ಭೇಟಿ ಮಾಡಲು ಮನೆಯಿಂದ ತೆರಳಿದವರು ವಾಪಸ್ ಮರಳಿರಲಿಲ್ಲ.

Follow Us:
Download App:
  • android
  • ios