ರೈತ ಮೌಲಪ್ಪ ನಾಯಕರ 37 ಕ್ವಿಂಟಲ್‌ಗೂ ಅಧಿಕ ಮೆಣಸಿನಕಾಯಿ ರಾಶಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದಾಗಿ ರೈತರಿಗೆ ಅಂದಾಜು ಏಳು ಲಕ್ಷ ರೂಪಾಯಿ ನಷ್ಟವಾಗಿದೆ.

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದ ಸರ್ವೆ ನಂ.20ರಲ್ಲಿನ ರೈತ ಮೌಲಪ್ಪ ನಾಯಕ ಇವರ ಹೂಲದಲ್ಲಿ ಅಂದಾಜು 37 ಕ್ವಿಂಟಲ್‌ಗೂ ಅಧಿಕ ಮೆಣಸಿನ ಕಾಯಿ ಬೆಳೆಯ ರಾಶಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಭಾನುವಾರ ನಡೆದಿದೆ.

Add Asianetnews Kannada as a Preferred SourcegooglePreferred

ಏಳು ಲಕ್ಷ ಮೌಲ್ಯದ ಬೆಳೆ

ರಾತ್ರಿ 8 ಗಂಟೆ ಸುಮಾರಿಗೆ ಹೊಲದಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಿಡಿಗೇಡಿಗಳು ಈ ಕೃತ್ಯ ಮಾಡಿರುವುದಾಗಿ ನಷ್ಟ ಅನುಭವಿಸಿದ ರೈತ ಮೌಲಪ್ಪ ಮೆಣಸಿಕಾಯಿ ಬೆಳೆದಿದ್ದು ಇನ್ನೇನು ಮಾರುಕಟ್ಟೆ ಹಾಕೋಣ ಎನ್ನುವಷ್ಟರಲ್ಲಿ ಈ ರೀತಿ ಘಟನೆ ನಡೆಸಿದ್ದಾರೆಂದು ಕಣ್ಣೀರು ಹಾಕಿದ್ದಾರೆ. ಇವರ ಎರಡುವರೆ ಎಕರೆ ಸ್ವಂತ ಜಮೀನಲ್ಲಿ ಬಾಡಿಗೆ ನೀರು ಪಡೆದು ಅಂದಾಜು ಮೂರು ಲಕ್ಷ ರು. ಖರ್ಚು ಮಾಡಿದ್ದರು. ಮೆಣಸಿನ ಕಾಯಿ ಬೆಳೆಯನ್ನ ಮಾರುಕಟ್ಟೆಗೆ ಹಾಕಿದರೆ ಅಂದಾಜು ಏಳು ಲಕ್ಷ ಮೌಲ್ಯ ಬೆಲೆ ಬಾಳುತಿತ್ತು ಎಂದು ಹೇಳುತಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ 112 ಪೋಲಿಸರು ಭೇಟಿ ನೀಡಿದ್ದಾರೆ. ಹಾಗೆಯೆ ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಭೇಟಿ ನೀಡಿದರು ಪ್ರಯೋಜನ ಆಗಿಲ್ಲ, ಒಟ್ಟಾರೆಯಾಗಿ ಕೈಗೆ ಬಂದಂತಹ ತುತ್ತು ಬಾಯಿಗೆ ಬಂದಿಲ್ಲದಂತಾಗಿದೆ ರೈತನ ಪಾಡು. 

ಹೊಲಕ್ಕೆ ಶಾಸಕರ ಭೇಟಿ

ಈ ರೈತನಿಗೆ ಸ್ಥಳೀಯ ಶಾಸಕರು ಹಂಪಯ್ಯ ನಾಯಕ ಮತ್ತು ತಾಲೂಕಿನ ಆಡಳಿತವು ರೈತನ ಹೊಲಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಸೂಕ್ತ ಪರಿಹಾರಕ್ಕೆ ಮುಂದಾಗಬೇಕು. ತಾಲೂಕಿನ ಸುತ್ತಮುತ್ತಲು ಇಂತಹ ಘಟನೆಗಳು ನಡೆಯದಂತೆ ತಪಿತಸ್ಥರಿಗೆ ಶಿಸ್ತು ಕಾನೂನು ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌: ತಾನೇ ಬೆಳೆದ ನಾಲ್ಕು ಎಕರೆ ಹೂಕೋಸು ನಾಶಪಡಿಸಿದ ರೈತ!

ಈ ಹಿಂದೆ ಇದೇ ರೀತಿ ದುಷ್ಕರ್ಮಿಗಳು ಜಾಗೀರಪನ್ನೂರು ಗ್ರಾಮದಲ್ಲಿ ಕೂಡಾ ಪೆಟ್ರೋಲ್ ಸುರಿದು ಜೋಳದ ರಾಶಿಗೂ ಬೆಂಕಿ ಹಚ್ಚಿರುವ ಪ್ರಕರಣ ನಡೆದಿತ್ತು. ದೂರು ದಾಖಲಿಸಿಕೊಂಡ ಮಾನ್ವಿ ಪೋಲಿಸರು ಈ ಪ್ರಕರಣ ಭೇಧಿಸುವ ಮುನ್ನವೇ ಇನ್ನೊಂದು ಪ್ರಕರಣ ನಡೆದಿರುವುದು ಕಂಡರೆ ಇಂತಹ ಕಿಡಿಗೇಡಿಗಳಿಗೆ ಕಾನೂನು ಭಯವಿಲ್ಲ ಎಂಬಂತೆ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತಿದ್ದಾರೆ ಗ್ರಾಮಸ್ಥರು.

ಇದನ್ನೂ ಓದಿ: Raichur : ಬಾಣಂತಿಯ ನಿಗೂಢ ಸಾವಿಗೆ ದೆವ್ವ ಕಾರಣ? CCTV ದೃಶ್ಯ ನೋಡಿ ಬೆಚ್ಚಿದ ಸ್ಥಳೀಯರು

----------