ಗುಬ್ಬಿ ಕೆಎಂಎಫ್ ಆಹಾರ ಘಟಕದಲ್ಲಿ ಅವ್ಯವಹಾರ : ಕಾರ್ಮಿಕರಿಂದ ಪ್ರತಿಭಟನೆ
ಹೊರ ಗುತ್ತಿಗೆ ಆಧಾರದ ಕಾರ್ಮಿಕರ ಪಿಎಫ್, ಇಎಸ್ಐ ಹಾಗೂ ಬೋನಸ್ ಹಣವನ್ನು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಲಪಟಾಯಿಸಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಹಾಲು ಒಕ್ಕೂಟದ ಪಶು ಆಹಾರ ಘಟಕದ ಕಾರ್ಮಿಕರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.
ತುಮಕೂರು (ನ.16) : ಹೊರ ಗುತ್ತಿಗೆ ಆಧಾರದ ಕಾರ್ಮಿಕರ ಪಿಎಫ್, ಇಎಸ್ಐ ಹಾಗೂ ಬೋನಸ್ ಹಣವನ್ನು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಲಪಟಾಯಿಸಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಹಾಲು ಒಕ್ಕೂಟದ ಪಶು ಆಹಾರ ಘಟಕದ ಕಾರ್ಮಿಕರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಕೆಎಂಎಫ್ ಪಶು ಆಹಾರ ಘಟಕ ಮುಂದೆ ಡಾ.ಬಿ.ಆರ್. ಅಂಬೇಡ್ಕರ್ (Ambedkar) ಭಾವಚಿತ್ರವನ್ನಿಟ್ಟು ಧರಣಿ ಕುಳಿತ ನೂರಾರು ಹೊರ ಗುತ್ತಿಗೆ ಕಾರ್ಮಿಕರು ನಮ್ಮ ದುಡಿದ ಹಣವನ್ನು ನುಂಗಿ ಹಾಕಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರನ್ನು ಹೀನಾಯವಾಗಿ (Horribly) ನಡೆಸಿಕೊಂಡಿದ್ದಾರೆ. ಈ ಮಧ್ಯೆ ಹೊರ ರಾಜ್ಯದ ವಲಸೆ (Migrant) ಕೂಲಿ ಕಾರ್ಮಿಕರನ್ನು ಕರೆ ತಂದು ಅತೀ ಕಡಿಮೆ ಕೂಲಿ (Low Wages) ನೀಡಿ ಅನಧಿಕೃತವಾಗಿ ಇಟ್ಟುಕೊಂಡು ದುಡಿಸಿಕೊಳ್ಳಲಾಗುತ್ತಿದೆ. ಸ್ಥಳೀಯ ಕಾರ್ಮಿಕರ ಬೋನಸ್ ಹಣವನ್ನು (Bonus Amount) ಲಪಟಾಯಿಸಿದ್ದಾರೆ. ಈ ಹಗರಣ ಹೊರಗೆ ಗೊತ್ತಾಗದಂತೆ ಮಾಡಲು 400 ಕ್ಕೂ ಅಧಿಕ ಕಾರ್ಮಿಕರ ಪಟ್ಟಿ ತಯಾರಿಸಿ ಸುಳ್ಳು ಲೆಕ್ಕ ಪತ್ರವನ್ನು ಮಹಾಮಂಡಳಕ್ಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಾನು ಜೆಡಿಎಸ್‌ಗೆ ವಾಪಸ್ ಹೋಗಲ್ಲ: ಗುಬ್ಬಿ ಶ್ರೀನಿವಾಸ್
ಪ್ರತಿ ಕಾರ್ಮಿಕರಿಗೆ 1.30 ಲಕ್ಷ ರೂ. ಬರಬೇಕು: ಗುತ್ತಿಗೆ ಪಡೆದ ಮೈಸೂರು ಮೂಲದ ರಂಗನಾಥ ಎಂಟರ್ ಪ್ರೈಸಸ್ ಮೂಲಕ ಇಲ್ಲಿ ಸುಮಾರು 230 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಲೆಕ್ಕಪತ್ರದಲ್ಲಿ (Accounting) 400 ಕ್ಕೂ ಅಧಿಕ ಮಂದಿ ಪಟ್ಟಿಯಲ್ಲಿ (List) ಸೇರಿಸಿದ್ದಾರೆ. ಇಲ್ಲಿ ಬೋನಸ್ ಹಣ, ಪಿಎಫ್ (PF) ಹಾಗೂ ಇಎಸ್ಐ (ESI) ಹಣ ಕಾರ್ಮಿಕರ ವೇತನದಲ್ಲಿ ಕಟಾವು ಮಾಡಲಾಗಿದೆ. ಅಂದಾಜು ಲೆಕ್ಕ ಒಬ್ಬರ ಖಾತೆಗೆ 1.30 ಲಕ್ಷ ರೂ. ಜಮಾ ಆಗಬೇಕು. ಆದರೆ ನಮ್ಮ ಲೆಕ್ಕದಲ್ಲಿ ಒಬ್ಬರಿಗೆ 400 ರೂ.ಗಳಿಂದ 600 ರೂ.ವರೆಗೆ ಮಾತ್ರ ಜಮಾ (Deposit) ಆಗಿದೆ. ಆದರೆ ಲೆಕ್ಕಪತ್ರದಲ್ಲಿ ಮಾತ್ರ ಕಾರ್ಮಿಕರೇ ಅಲ್ಲದ ವ್ಯಕ್ತಿಗಳ ಹೆಸರು ನಮೂದಿಸಿ ಬೋಗಸ್ ಲೆಕ್ಕ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ (Labour Department) ತನಿಖೆ ನಡೆಸಬೇಕು. ಕೂಡಲೇ ಎಲ್ಲಾ ಕಾರ್ಮಿಕರಿಗೆ ಬರಬೇಕಾದ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಘಟಕಕ್ಕೆ ಬಾರದ ಗುತ್ತಿಗೆದಾರ (Contractor) ಸುರೇಶ್ ಗೌಡ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಹಾಲಿನ ದರ ಏರಿಕೆಗೆ ಬ್ರೇಕ್, ಸಿಎಂ ಸೂಚನೆ ಬಳಿಕ ಆದೇಶ ವಾಪಸ್!
ಗುತ್ತಿಗೆದಾರರನ್ನೇ ನೋಡಿಲ್ಲ: ಮೈಸೂರಿನ ರಂಗನಾಥ ಎಂಟರ್ ಪ್ರೈಸಸ್ ಹೆಸರಿನಲ್ಲಿ ಗುತ್ತಿಗೆ ನಿರ್ಹವಣೆ ಮಾಡುವ ಮಧ್ಯವರ್ತಿಗಳು (Mediator) ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಕಾರ್ಮಿಕರ ಹಣ ಲಪಟಾಯಿಸಿದ್ದಲ್ಲದೆ ಪ್ರಶ್ನೆ ಮಾಡುವವರ ಧ್ವನಿ ಹತ್ತಿಕ್ಕುವ (Suppress) ಕೆಲಸ ಮಾಡುತ್ತಾರೆ. ಮೂಲ ಗುತ್ತಿಗೆದಾರರನ್ನು ಈವರೆಗೂ ನಾವು ನೋಡೇ ಇಲ್ಲ. ಅವರ ಸಂಸ್ಥೆ ಹೆಸರಿನಲ್ಲಿ ಈ ಮಧ್ಯವರ್ತಿಗಳು ನಡೆಸಿರುವ ಅವ್ಯವಹಾರಕ್ಕೆ ಕಾರ್ಮಿಕರು ಬಲಿಯಾಗಿದ್ದಾರೆ. ಆರೋಗ್ಯ ಹದಗೆಟ್ಟರೆ ಅವರಿಗೆ ಯಾವುದೇ ಸೌಲಭ್ಯ ಸಿಗೋದಿಲ್ಲ. ಈ ಹಿಂದೆ ಒಬ್ಬರು ಮಹಿಳಾ ಕಾರ್ಮಿಕರು ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದರು. ಈವರೆಗೂ ಅವರ ಕುಟುಂಬಕ್ಕೆ ಬಿಡಿಗಾಸು ಸಹಾಯಧನ ನೀಡಿಲ್ಲ. ಮುಂದುವರೆದು ಹೊರ ರಾಜ್ಯದ (Out of state)ವಲಸೆ ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಂಡಿದ್ದಾರೆ. ಅವರಿಗೂ ಯಾವುದೇ ಸೌಲಭ್ಯ ನೀಡದೆ ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ವಹಿಸಬೇಕು ಎಂದು ಕಾರ್ಮಿಕ ಮುಖಂಡ ಮಧು ಆಗ್ರಹಿಸಿದರು.
ಮನವೊಲಿಸುವ ಯತ್ನ ವಿಫಲ: ಘಟಕದ ವ್ಯವಸ್ಥಾಪಕ ನಿರ್ದೇಶಕ ಮಧುಸೂದನ್ (MD Madhusudan)ಹಾಗೂ ಕಾರ್ಮಿಕ ನಿರೀಕ್ಷಕಿ ಸುಶೀಲಾ ಅವರು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಧರಣಿ ಮುಂದುವರಿಸಿದರು. ನಂತರದಲ್ಲಿ ಸ್ಥಳಕ್ಕೆ ಆಗಮಿಸಿದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ (Mahalingayya), ಸದಸ್ಯ ಚಂದ್ರಶೇಖರ್ ಹಾಗೂ ನಿರ್ದೇಶಕ ಪ್ರಕಾಶ್ ಮಾತುಕತೆಗೆ (Negotiation) ಮುಂದಾದರು. ಲೆಕ್ಕಪತ್ರದ ಬೋಗಸ್ ಬಗ್ಗೆ ಕ್ರಮ ವಹಿಸಲು ಆಗ್ರಹಿಸಿದ ಕಾರ್ಮಿಕರು ಗುತ್ತಿಗೆದಾರ ಸ್ಥಳಕ್ಕೆ ಬರಬೇಕು ಎಂದು ಅಲ್ಲಿಯೇ ಅಡುಗೆ ಮಾಡಿ ಪ್ರತಿಭಟನೆ ಮುಂದುವರೆಸಿದರು.