ನಾನು ಜೆಡಿಎಸ್‌ಗೆ ವಾಪಸ್ ಹೋಗಲ್ಲ: ಗುಬ್ಬಿ ಶ್ರೀನಿವಾಸ್
ತಾವು ಜೆಡಿಎಸ್‌ಗೆ ವಾಪಸ್ ಹೋಗುವುದಿಲ್ಲ ಎನ್ನುವ ಮೂಲಕ ತಮ್ಮ ಮನೆಗೆ ಬಂದಿದ್ದ ಸಾ.ರಾ ಮಹೇಶ್ ಭೇಟಿ ನೀಡಿದ ಸಂಬಂಧ ಉಂಟಾಗಿದ್ದ ವಿವಾದಕ್ಕೆ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್. ಶ್ರೀನಿವಾಸ್ ತೆರೆ ಎಳೆದಿದ್ದಾರೆ.
ತುಮಕೂರು (ನ.11): ತಾವು ಜೆಡಿಎಸ್‌ಗೆ ವಾಪಸ್ ಹೋಗುವುದಿಲ್ಲ ಎನ್ನುವ ಮೂಲಕ ತಮ್ಮ ಮನೆಗೆ ಬಂದಿದ್ದ ಸಾ.ರಾ ಮಹೇಶ್ ಭೇಟಿ ನೀಡಿದ ಸಂಬಂಧ ಉಂಟಾಗಿದ್ದ ವಿವಾದಕ್ಕೆ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್. ಶ್ರೀನಿವಾಸ್ ತೆರೆ ಎಳೆದಿದ್ದಾರೆ. ಗುಬ್ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಫೇಸ್ ಮಾಡುವ ಧೈರ್ಯ ಕುಮಾರಸ್ವಾಮಿಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಾ.ರಾ ಮಹೇಶ್ ತಮ್ಮ ಮನೆಗೆ ಭೇಟಿ ನೀಡಿದ್ದು ಸ್ನೇಹ ಪೂರ್ವಕವಾಗಿ ಎಂದ ಅವರು ನನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅದು ಮುಗಿದು ಹೋದ ಕತೆ, ಪಕ್ಷಕ್ಕೆ ವಾಪಸ್ ಬರಲು ನಾನು ಜಿಟಿ ದೇವೇಗೌಡ, ಶಿವರಾಮೇಗೌಡ ಅಲ್ಲ, ನಾನು ವಾಸಣ್ಣ ಎಂದರು.
ನನಗೇನು ತೋಚುತ್ತೋ ಅದನ್ನೇ ಮಾಡುವುದಾಗಿ ತಿಳಿಸಿದ ಶ್ರೀನಿವಾಸ್ ಅವರು ಹೇಳಿದಂಗೇ ಇವರು ಹೇಳಿದಂಗೆ ಕೇಳುವುದಿಲ್ಲ. ಅನ್ನದಾನಿ, ಸಾ.ರಾ ಮಹೇಶ್ ಸೇರಿದಂತೆ ಅಲ್ಲಿ ಇರುವ ಎಲ್ಲಾ ಶಾಸಕರಿಗೂ ನಾನು ಜೆಡಿಎಸ್‌ನಲ್ಲಿ ಉಳಿಯಬೇಕು ಅಂತ ಆಸೆಯಿದೆ. ಆದರೆ ನಮ್ಮ ಲೀಡರ್‌ಗೆ ಅದಿಲ್ಲ, ಅವರು ನಮ್ಮ ಮನೆ ಬಳಿ ಬರುವುದಿಲ್ಲ, ನನ್ನ ಫೇಸ್ ಮಾಡುವ ಧೈರ್ಯ ಕುಮಾರಸ್ವಾಮಿಗಿಲ್ಲ ಎಂದರು. ನಾನು ಇವತ್ತೊಂದು, ನಾಳೆಯೊಂದು ಮಾತನಾಡುವ ವ್ಯಕ್ತಿಯಲ್ಲ. ನನ್ನದೇ ವ್ಯಕ್ತಿತ್ವ ಇಟ್ಟುಕೊಂಡಿರುವ ರಾಜಕಾರಣಿ ಎಂದರು.
ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ 10 ಸ್ಥಾನ ಗೆಲ್ಲಲಿದೆ: ಎಚ್.ಡಿ.ಕುಮಾರಸ್ವಾಮಿ
ಗುಬ್ಬಿ ಶ್ರೀನಿವಾಸ್ ಜೊತೆ ಸಾರಾ ಭೇಟಿ ವೈಯಕ್ತಿಕ: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ನಮ್ಮ ಪಕ್ಷದ ಶಾಸಕರು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಸ್ನೇಹಪೂರ್ವಕವಾಗಿ ಭೇಟಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶಾಸಕರಾದ ಸಾ.ರಾ.ಮಹೇಶ್ ಮತ್ತು ಅನ್ನದಾನಿ ಅವರು ಶ್ರೀನಿವಾಸ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಅಪಾರ್ಥ ಕಲ್ಪಿಸುವುದು ಬೇಡ. ಇದು ಅವರ ವೈಯುಕ್ತಿಕವಾದ ಭೇಟಿ. ಈ ಮಾತನ್ನು ಅವರೇ ಹೇಳಿದ್ದಾರೆ. ನಾನೇನು ಮಧ್ಯಸ್ಥಿಕೆ ವಹಿಸಿ ಯಾವುದೇ ಸಂದೇಶ ಕಳುಹಿಸಿಲ್ಲ ಎಂದರು.
ಮತಗಳಾಗಿ ಪರಿವರ್ತನೆಯಾಗಲ್ಲ: ತಾಲೂಕಿಗೆ ನಿಖಿಲ್ ಕುಮಾರಸ್ವಾಮಿ ಬಂದಾಗ ಸೇರುವ ಜನರಿಂದ ಮತಗಳಾಗಿ ಪರಿವರ್ತನೆಯಾಗಲ್ಲ. ಕ್ಷೇತ್ರದ ಶಾಸಕರು ತಮ್ಮ ಸ್ವಂತ ವರ್ಚಸ್ಸಿನಲ್ಲಿ ಜನಶಕ್ತಿ ತೋರಿಸಲಿ ಎಂದು ಶಾಸಕ ಸುರೇಶ್‌ಗೌಡರಿಗೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸವಾಲು ಹಾಕಿದರು. ತಾಲೂಕಿನ ಚಿಣ್ಯ ಮತ್ತು ಹೊಣಕೆರೆ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಪ್ರವಾಸ ಕೈಗೊಂಡು ಮೂಲ ಸೌಕರ್ಯಗಳ ಸಮಸ್ಯೆ ಕುರಿತು ಸ್ಥಳೀಯ ಜನರಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಅಲ್ಪಹಳ್ಳಿಯಲ್ಲಿ ಮಾತನಾಡಿ, ನಿಖಿಲ್ ಬರುತ್ತಾರೆ ಎಂದರೆ ಅವರನ್ನು ನೋಡಲು ಅಪಾರ ಸಂಖ್ಯೆಯ ಜನ ಸೇರುತ್ತಾರೆ. ಬರುವವರೆಲ್ಲರಿಂದ ಮತಗಳು ಬರುವುದಿಲ್ಲ ಎಂದು ಟೀಕಿಸಿದರು.
ಶಿಶು, ಬಾಣಂತಿ ಸಾವು: ಸಚಿವ ಸುಧಾಕರ್ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯದ ಮತ್ತು ನಮ್ಮೆಲ್ಲರ ನಾಯಕರು, ನಿಖಿಲ್ ಕುಮಾರಸ್ವಾಮಿ ಬಗ್ಗೆ ಅಪಾರ ಗೌರವವಿದೆ. ಒಂದು ಪಕ್ಷದ ರಾಜ್ಯ ನಾಯಕರು ತಾಲೂಕಿಗೆ ಬರುತ್ತಾರೆಂದರೆ ಇದ್ದಕ್ಕಿದ್ದಂತೆ ಅಪಾರ ಸಂಖ್ಯೆಯ ಜನ ಬಂದೇ ಬರುತ್ತಾರೆ ಎಂದರು. ತಾಲೂಕಿನಲ್ಲಿ ನಡೆಯುವ ದೇವಸ್ಥಾನ ಉದ್ಘಾಟನೆ, ಮದುವೆ, ಗೃಹಪ್ರವೇಶ ಸೇರಿದಂತೆ ಹೋಬಳಿ ಕೇಂದ್ರದಲ್ಲಿ ಪಕ್ಷದ ಕಚೇರಿ ತೆರೆಯುವಂತಹ ಸಣ್ಣ ಪುಟ್ಟಕಾರ್ಯಕ್ರಮಗಳಿಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆತರುವುದಾದರೆ ನಿಮ್ಮ ಸ್ವಂತ ಬಂಡವಾಳ ಏನಾಗಿದೆ. ನಿಮಗೆ ಜನ ಸೇರುವುದಿಲ್ಲ ಎಂಬುದು ಸಾಬೀತಾಯಿತಲ್ಲವೇ ಎಂದು ಶಾಸಕ ಸುರೇಶ್‌ಗೌಡರ ಕಾಲೆಳೆದರು.