Asianet Suvarna News Asianet Suvarna News

ರಾಜಕೀಯ ಪಕ್ಷಗಳಿಂದ ಕಾರ್ಮಿಕರ ಹಣ ದುರುಪಯೋಗ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ರಚನೆಗೆ ರಾಜಕೀಯ ಪಕ್ಷಗಳು ಹೋರಾಟ ನಡೆಸಿಲ್ಲ. ಮಂಡಳಿ ರಚನೆಗೆ ಎಐಟಿಯುಸಿ ಸಂಘಟನೆ ಹೋರಾಟ ನಡೆಸಿಕೊಂಡು ಬಂದಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಹೇಳಿದರು.

Misappropriation of labor funds by political parties snr
Author
First Published Nov 10, 2023, 8:51 AM IST

 ತುಮಕೂರು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ರಚನೆಗೆ ರಾಜಕೀಯ ಪಕ್ಷಗಳು ಹೋರಾಟ ನಡೆಸಿಲ್ಲ. ಮಂಡಳಿ ರಚನೆಗೆ ಎಐಟಿಯುಸಿ ಸಂಘಟನೆ ಹೋರಾಟ ನಡೆಸಿಕೊಂಡು ಬಂದಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಟ್ಟಡ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ, ಮಂಡಳಿ ರಚನೆಗಾಗಿ ನಿರಂತರ ಹೋರಾಟ ನಡೆಸಿ ಎಐಟಿಯುಸಿ ಸಂಘಟನೆ ಕಾರ್ಮಿಕರಿಗೆ ಸವಲತ್ತು ಕೊಡಿಸಲು ಹೋರಾಟ ಮುಂದುವರೆಸಿದೆ. ಆದರೆ, ಮಂಡಳಿ ರಚನೆಗೆ ಯಾವುದೇ ಕೊಡುಗೆ ನೀಡದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮಂಡಳಿಯಿಂದ ಕಾರ್ಮಿಕರು ಉಳಿಸಿದ ಸೆಸ್ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಹಲವು ರೀತಿಯ ಕಿಟ್‌ಗಳು, ಲ್ಯಾಪ್‌ಟಾಪ್‌, ಟ್ಯಾಬ್‌ಗಳು, ಶಾಲಾ ಕಿಟ್‌ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಸೇರಿದಂತೆ ಇನ್ನು ಮುಂತಾದ ರೀತಿಯಲ್ಲಿ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್‌ ಹಣವನ್ನು ಮನಸೋ ಇಚ್ಚೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ ೧೯೯೬ರ ವಿರುದ್ಧ ಮಂಡಳಿಯು ದುಂದು ವೆಚ್ಚ ಮಾಡಿದೆ. ಇದರಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಮಿತಿ ಸದಸ್ಯ ಗೋವಿಂದರಾಜು, ಖಜಾಂಚಿ ಅಶ್ವತ್ಥನಾರಾಯಣ, ಗೋವಿಂದರಾಜು ಬಾಬು, ವಸಂತ್‌ರಾಜ್, ಶಂಕರಪ್ಪ, ಶಿವಾನಂದ್, ದೊಡ್ಡತಿಮ್ಮಯ್ಯ, ವಿಜಯ್‌ಕುಮಾರ್, ರವಿಕುಮಾರ್, ವೆಂಕಟೇಶ್, ಪಾಪಣ್ಣಿ ಇದ್ದರು.

ಕಾಂಗ್ರೆಸ್‌ನವರು ನಮ್ಮ ಶಾಸಕರ ಮನೆ ಕಾಯೋದು ಬೇಡ

ರಾಮನಗರ (ನ.06): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಪ್ರತಿನಿತ್ಯ ನೀವು ಬನ್ನಿ ನೀವು ಬನ್ನಿ.. ಅಂತ ಎಲ್ಲರನ್ನೂ ಕರಿತಿದಾರೆ. ನಿನ್ನೆ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಕನಿಷ್ಠ 50 ಜನರನ್ನಾದರೂ ಪಕ್ಷಕ್ಕೆ ಕರೆತರಬೇಕು ಎಂದು ಮುಖ್ಯಮಂತ್ರಿಗಳೇ ಶಾಸಕರಿಗೆ ಟಾರ್ಗೆಟ್‌ ನೀಡಿದ್ದರು. ಹೀಗಾಗಿ ಪ್ರತಿನಿತ್ಯ ಕಾಂಗ್ರೆಸ್‌ನವರು ನಮ್ಮ ಶಾಸಕರ ಮನೆ ಬಾಗಿಲು ಕಾಯೋದು ಬೇಡ. ಅವರು ಒಳ್ಳೆಯ ಕೆಲಸ ಮಾಡಿದ್ರೆ, ನಾನೇ ಎಲ್ಲರನ್ನೂ ಕಳಿಸಿಕೊಡ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾದರೆ ನಮ್ಮ ಬೆಂಬಲವಿದೆ ಎಂದು ನಾನು ವ್ಯಂಗ್ಯವನ್ನು ಮಾಡಿದ್ದೇನೆ. ಅವರು ದಿನ ನೀವು ಬನ್ನಿ.. ನೀವು ಬನ್ನಿ ಅಂತ ಎಲ್ಲರನ್ನೂ ಕರಿತಾ ಇದಾರೆ. ನಿನ್ನೆ ಮುಖ್ಯಮಂತ್ರಿಗಳೆ ಹೇಳಿದ್ದಾರಲ್ವಾ.? ಕನಿಷ್ಠ 50 ಜನನನ್ನಾದ್ರು ಪಕ್ಷ ಕರೆ ತರಬೇಕು ಅಂತ ಅವರ ಪಕ್ಷದ ಶಾಸಕರಿಗೆ ಹೇಳಿದ್ದಾರೆ. ಹೀಗಾಗಿ, ಪ್ರತಿ ನಿತ್ಯ ನಮ್ಮ ಶಾಸಕರ ಮನೆ ಮುಂದೆ ಯಾಕೆ ಹೋಗ್ತೀರಾ. ಒಳ್ಳೆ ಕೆಲಸ ಮಾಡ್ತೀರಾ ಅಂದ್ರೆ ಎಲ್ಲರನ್ನು ಕಳುಹಿಸುತ್ತೇನೆ ಕರೆದುಕೊಂಡು ಹೋಗಿ ಅಂತ ಹೇಳಿದ್ದೀನಿ ಎಂದರು.

ಮೋದಿ 48 ಕಡೆ ಹೋದಲ್ಲೆಲ್ಲಾ ಬಿಜೆಪಿ ಸೋತಿದ್ದರಿಂದ ರಾಜಕೀಯ ಆರೋಪ ಮಾಡ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ರಾಜಕೀಯ ಲೆಕ್ಕಾಚಾರಕ್ಕೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮಾಡಿದ ಸಿಎಂ: ಮುಖ್ಯಮಂತ್ರಿಯ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಏನ್ಮಾಡಿದ್ರು? ಆ ಮೀಟಿಂಗ್ ನಲ್ಲಿ ಏನು ಚರ್ಚೆ ಆಗಿದೆ ಗೊತ್ತಾ.. ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್, ಬಿಜೆಪಿಯವರನ್ನ ಕಾಂಗ್ರೆಸ್ ಗೆ ಕರೆತರುವ ಬಗ್ಗೆ ಚರ್ಚೆ ಆಗಿದೆ. ಅವರಿಗೆ ನಾಡಿನ ಜನತೆ ಬಗ್ಗೆ ಚರ್ಚೆ ಮಾಡೋದಕ್ಕೆ ಮೀಟಿಂಗ್ ಮಾಡಿಲ್ಲ. ಕೇವಲ ರಾಜಕೀಯಕ್ಕೆ ಮೀಟಿಂಗ್ ಮಾಡಿದ್ದಾರೆ. ಲೋಕಸಭಾ ಚುನಾವಣೆ ಗೆಲ್ಲಲು ಮೀಟಿಂಗ್ ಮಾಡಿದ್ದಾರೆ. ಅವರಿಗೆ ರೈತರ ಸಮಸ್ಯೆ ಗಳು ಬೇಕಿಲ್ಲ. ತಮ್ಮ ಖುರ್ಚಿ ಉಳಿಸಿಕೊಳ್ಳುವ ಹಾಗೂ ರಾಜಕೀಯ ಮಾಡುವುದೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.

Follow Us:
Download App:
  • android
  • ios