ಮೋದಿ 48 ಕಡೆ ಹೋದಲ್ಲೆಲ್ಲಾ ಬಿಜೆಪಿ ಸೋತಿದ್ದರಿಂದ ರಾಜಕೀಯ ಆರೋಪ ಮಾಡ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹೋದ 48 ಕಡೆಗಳಲ್ಲಿ ಬಿಜೆಪಿ ಸೋತಿದ್ದರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ಭಾಷಣ ಮಾಡಿದ್ದಾರೆ.
ಬೆಂಗಳೂರು (ನ.06): ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 48 ಕಡೆಗೆ ಬಂದು ಹೋದಲ್ಲೆಲ್ಲಾ ಬಿಜೆಪಿ ಸೋತಿದೆ. ಹೀಗಾಗಿ, ಅವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹಾಳು ಮಾಡಿದೆ ಎಂದು ಊಹಾಪೋಹಗಳ ಮೂಲಕ ಹೇಳಿಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
'ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯವರು ರಾಜಕೀಯ ಭಾಷಣ ಮಾಡಿದ್ದಾರೆ. ಈ ಮೂಲಕ ರಾಜಕೀಯ ಅರೋಪ ಮಾಡಿದ್ದಾರೆ. ಅವರು ಊಹಾಪೋಹಗಳ ಹೇಳಿಕೆ ಕೊಟ್ಟಿದ್ದಾರೆ. ಮದ್ಯಪ್ರದೇಶದ ಚುನಾವಣೆಯಲ್ಲಿ ಕರ್ನಾಟಕವನ್ನ ಟಾರ್ಗೇಟ್ ಮಾಡ್ತಿದ್ದಾರೆ. ಮೋದಿಯವರು ಪಾಪ ನಿರಾಶೆರಾಗಿದ್ದಾರೆ. ಮೋದಿಯವರು ರಾಜ್ಯಕ್ಕೆ 48 ಬಾರಿ ಬಂದ್ರಲ್ಲಾ ಅವರು ಹೋದ ಕಡೆಯಲ್ಲಾ ಸೋತಿದ್ದಾರೆ. ಎಲ್ಲೆಲ್ಲಿ ರೊಡ್ ಶೋ ಮಾಡಿದ್ರು, ಎಲ್ಲೆಲ್ಲಿ ಸಾರ್ವಜನಿಕ ಸಭೆ ಮಾಡಿದ್ರು, ಎಲ್ಲಾ ಕಡೆ ಸೋತು ಬಿಟ್ಟಿದ್ದಾರೆ. ಹಾಗಾಗಿ ಇಲ್ಲಿಯವರೆಗೆ ವಿರೋದ ಪಕ್ಷದ ನಾಯಕನನ್ನ ಮಾಡಲು ಹೋಗ್ಲಿಲ್ಲಾ. ವಿಪಕ್ಷ ನಾಯಕರನ್ನ ಆಯ್ಕೆ ಮಾಡಿದ್ದಾರೇನ್ರಿ, ಅಂದ್ರೆ ಅಷ್ಟರಮಟ್ಟಿಗೆ ಬಿಜೆಪಿ ದಿವಾಳಿಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೂಟಿ ಮಾಡ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಆದರೆ, ಶೇ.40 ಪರ್ಸೆಂಟ್ ಲೂಟಿ ಮಾಡ್ತಿದ್ದಾರೆ ಅಂತ ಹೇಳಿದ್ದು ಯಾರು.? ಆಗ ಯಾವ ಸರ್ಕಾರ ಇತ್ತು. ಆಗ ನರೇಂದ್ರ ಮೋದಿ ಪಕ್ಷ ತಾನೆ ಇದ್ದಿದ್ದು. ನಮ್ಮ ಮೇಲೆ ಆ ತರ ಹೇಳಿದ್ರಾ.? ಅದಕ್ಕೆ ನಾವೆಲ್ಲಾ ತನಿಖೆ ಮಾಡುಸ್ತಿದ್ದೀವಿ. ಶೇ.40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತ ಹೇಳಿದ್ದು ಯಾರಪ್ಪ..? ಯಾರ ಕಾಲದಲ್ಲಿ.? ಆಗ ಯಾವ ಸರ್ಕಾರ ಇತ್ತು. ಈ ದೇಶದ ಪ್ರದಾನಿಯಾಗಿ ಅದನ್ನ ಹೇಳಬೇಕಲ್ವಾ..? ಅವರಿಗೆ ಏನಾದ್ರು ದಾಖಲಾತಿ ಇದ್ರೆ ಹೇಳಲಿ ಎಂದು ತಿರುಗೇಟು ನೀಡಿದರು.
ದೇಶದ ಒಬ್ಬ ಪ್ರಧಾನಿಯಾಗಿದ್ದುಕೊಂಡು ಸುಳ್ಳುಗಳನ್ನ ಹೇಳಬಾರದು, ಲಘವಾಗಿ ಮಾತಾನಾಡಬಾರದು. ಅವರಿಗೆ ದಾಖಲಾತಿ ಏನಾದ್ರು ಇದ್ದರೆ ಅವರಿಗೆ ಇಂಟೆಲಿಜೆನ್ಸ್ ಬ್ಯೂರೋ (ಐಬಿ), ರಾ (ಆರ್‌ಎಡಬ್ಲ್ಯೂ), ಕೇಂದ್ರ ತನಿಖಾ ದಳ (ಸಿಬಿಐ) ಇಂಟೆಲಿಜೆನ್ಸಿ ಇದೆ ಅದಕ್ಕೆ ಕೊಡಲಿ. ಇವತ್ತು ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ನಮ್ಮ ರಾಜ್ಯಕ್ಕೆ ಕೊಡಬೇಕಾಗಿರುವುದನ್ನೆ ಕೊಡೊಕ್ಕೆ ಆಗ್ತಿಲ್ಲ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನೂ ಕೂಡ ಅವರಿಗೆ ಬರಗಾಲದ ಪರಿಹಾರ ಕೊಡೋಕೆ ಆಗಿಲ್ಲ ಎಂದು ಕಿಡಿಕಾರಿದರು.
ರೈಲು ಪ್ರಯಾಣಿಕರೇ ಎಚ್ಚರ: ನಿಮ್ಮನ್ನು ರಕ್ಷಣೆ ಮಾಡೋ ಪೊಲೀಸಪ್ಪನೇ ರಾತ್ರಿ ದರೋಡೆ ಮಾಡೋಕೆ ಬರ್ತಾನೆ!
ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನ ಜಾರಿ ಮಾಡಲು ಸಾದ್ಯವಿಲ್ಲ ಅಂತಾ ಪ್ರದಾನಿ ಮೋದಿ ಹೇಳಿದ್ದರು. ಆದರೆ, ಈಗ ನಾನು ಅಧಿಕಾರಕ್ಕೆ ಬಂದು ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿಲ್ವಾ ನಾವು? ನಾನು ಈ ರೀತಿ ಹೇಳಿಕೆ (ಸ್ಟೆಟ್ಮೆಂಟ್) ಕೊಡ್ತಾರೆ ಅಂತಾ ಎಕ್ಸೆಪ್ಟ್ ಮಾಡಿರಲಿಲ್ಲ. ಅವರಿಗೆ ಶೋಭೆ ತರುವಂತದಲ್ಲಾ ಇದು. ಇದು ಮದ್ಯಪ್ರವೇಶದಲ್ಲಿ ಮಾಡಿರುವ ಎಲೆಕ್ಷನ್ ಭಾಷಣವಾಗಿದೆ ಎಂದು ಹೇಳಿದರು.