Chamarajanagar: ಅಂತರಗಂಗೆಯಲ್ಲಿ ಕಲ್ಯಾಣಿ ನಿರ್ಮಿಸಿರುವುದೇ ಪಾಪದ ಕೆಲಸ: ಸಚಿವ ಸೋಮಣ್ಣ
ಮಲೆಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಕಲ್ಯಾಣಿ ನಿರ್ಮಿಸಿರುವುದೇ ಪಾಪದ ಕೆಲಸ, ಮಾಡಿರುವ ಕೆಲಸವೂ ಗುಣಮಟ್ಟದಿಂದ ಕೂಡಿಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಕಿಡಿಕಾರಿದರು.
ಚಾಮರಾಜನಗರ (ಸೆ.13): ಮಲೆಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಕಲ್ಯಾಣಿ ನಿರ್ಮಿಸಿರುವುದೇ ಪಾಪದ ಕೆಲಸ, ಮಾಡಿರುವ ಕೆಲಸವೂ ಗುಣಮಟ್ಟದಿಂದ ಕೂಡಿಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಕಿಡಿಕಾರಿದರು. ಬೆಳಿಗ್ಗೆ ದೇವರ ದರ್ಶನದ ಬಳಿಕ ಉಪಾಹಾರ ಸೇವಿಸಿ, ನೇರ ಅಂತರಗಂಗೆಗೆ ತೆರಳಿದರು. ಕಲ್ಯಾಣಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇಲ್ಲಿ ಕಲ್ಯನಿ ಅಗತ್ಯವಿರಲಿಲ್ಲ. ಶುದ್ಧ ನೀರು ಹರಿಯುವಂತೆ ನೋಡಿಕೊಳ್ಳಿ. ಅಂತರಗಂಗೆಯ ಎರಡೂ ಬದಿಯಲ್ಲಿ ಶವರ್‌ಗಳನ್ನು ನಿರ್ಮಿಸಿ, ಭಕ್ತಿಯಿಂದ ನೀರು ಪ್ರೋಕ್ಷಣೆ ಮಾಡಿಕೊಂಡವರು ಸ್ನಾನಘಟ್ಟದಲ್ಲಿ ಸ್ನಾನ ಮಾಡುವ ವ್ಯವಸ್ಥೆ ಕಲ್ಪಿಸಿ ಎಂದು ಸೂಚಿಸಿದರು.
ಅಲ್ಲಿಂದ ಸ್ನಾನಘಟ್ಟಕ್ಕೆ ತೆರಳಿ, ಅಲ್ಲಿನ ಅನೈರ್ಮಲ್ಯ ನೋಡಿ ಹೌಹಾರಿದ ಸಚಿವರು, ಪ್ರತಿ ಗಂಟೆಗೊಮ್ಮೆ ಸ್ವಚ್ಚಗೊಳಿಸದ ನಂತರ ಭಕ್ತರಿಗೆ ಸ್ನಾನಕ್ಕೆ ಅವಕಾಶ ನೀಡಬೇಕು ಎಂದು ಸೂಚಿಸಿದರು. ಅಲ್ಲಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ, 20 ವರ್ಷಗಳಿಂದಲೂ ನಡೆಯುತ್ತಲೇ ಇದೆ. ಶೀಘ್ರ ಕಾಮಗಾರಿ ಮುಗಿಯದಿದ್ದರೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ 470 ಕೊಠಡಿಗಳ ಭವನದ ಕಾಮಗಾರಿ ವೀಕ್ಷಿಸಿ, ಗುತ್ತಿಗೆದಾರನಿಗೆ ಫೋನ್‌ನಲ್ಲೇ ತರಾಟೆ ತೆಗೆದುಕೊಂಡು, ಕೆಲವು ಕಡೆ ಕೆಲಸ ತೃಪ್ತಿಕರವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Chamarajanagar: ವೀರಪ್ಪನ್ ಹುಟ್ಟೂರಲ್ಲಿ ಡಿಸಿಎಫ್ ಶ್ರೀನಿವಾಸನ್ ಪುತ್ಥಳಿ ಅನಾವರಣ
ದೀಪದ ಒಡ್ಡುವಿನಲ್ಲಿ ನಡೆಯುತ್ತಿರುವ ಮಲೆಮಹದೇಶ್ವರ ಮೂರ್ತಿ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು, ಅಲ್ಲಿಯೂ ಸಹ ಗುತ್ತಿಗೆದಾರನಿಗೆ ಉಸ್ತುವಾರಿ ಮಂತ್ರಿಯಾಗಿ ನಾನು ಬಂದಿದೀನಿ, ನೀವೆಲ್ರಿ ಹೋಗಿದೀರಿ, ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸ್ತೀರಿ ಎಂದು ಗರಂ ಆದರು. ಇದಕ್ಕೂ ಮುನ್ನ ದೇವಸ್ಥಾನದ ಮುಂಭಾಗ ಇರುವ ರಂಗಮಂದಿರದ ಆವರಣದ ಅನೈರ್ಮಲ್ಯ, ಸುತ್ತಮುತ್ತಲಿನ ಅಶುಚಿತ್ವ ಕಂಡು ಅಸಮಾಧಾನಗೊಂಡ ಸಚಿವ ವಿ.ಸೋಮಣ್ಣ, ಸಂಬಂಧಿಸಿದ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡು, ಮುಂದಿನ ಬರುವ ವೇಳೆಗೆ ಬೆಟ್ಟದಲ್ಲಿ ಇದೇ ಪರಿಸ್ಥಿತಿ ಇದ್ದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಎಷ್ಟು ದುಡ್ಡು ತಿಂತೀರಾ, ನಿಮ್ಮ ಮನೆ ಹಾಳಾಗ: ‘ಪ್ರವಾಹ ಬಂದು ಜನರು ಕಣ್ಣೀರು ಹಾಕುತ್ತಿರುವ ಈ ಸಂದರ್ಭದಲ್ಲೂ ಎಷ್ಟುದುಡ್ಡು ತಿಂತೀರಾ? ನಿಮ್ಮ ಮನೆ ಹಾಳಾಗ’ ಎಂದು ಸಚಿವ ವಿ.ಸೋಮಣ್ಣ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನೆರೆ ಪರಿಹಾರ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ‘ತಾಲೂಕುವಾರು ಎಷ್ಟುಕೆರೆ ಇದೆ’ ಎಂದಾಗ ತಬ್ಬಿಬ್ಬಾದ ಅಧಿಕಾರಿಗಳು ಉತ್ತರಿಸಲಿಲ್ಲ.
ಕೆರೆ ಒತ್ತುವರಿ ನಿರ್ದಾಕ್ಷಿಣ್ಯ ತೆರವುಗೊಳಿಸಲು ಸೂಚನೆ: ಸಚಿವ ಸೋಮಣ್ಣ
ಇದರಿಂದ ಸಿಟ್ಟಿಗೆದ್ದ ಸಚಿವರು, ಕೆರೆಗಳೆಲ್ಲ ಒತ್ತುವರಿ ಆಗುತ್ತಿವೆ. ಅವುಗಳನ್ನು ತೆರವು ಮಾಡುವ ಕಡೆ ಗಮನ ಕೊಡಿ. ಹಾಗೆಯೇ ಮಳೆಯಿಂದ ಎಷ್ಟುಕೆರೆಗಳು ಹಾನಿಯಾಗಿವೆ. ಅವುಗಳ ಪುನಶ್ಚೇತನದ ಕಡೆ ಗಮನ ಕೊಡಿ ಎಂದಾಗ ಆ ಅಧಿಕಾರಿಯು ಅನುದಾನದ ಬಗ್ಗೆ ಮಾತನಾಡಿದರು. ಇದರಿಂದ ಸಿಟ್ಟಿಗೆದ್ದ ಸಚಿವ ಸೋಮಣ್ಣ, ‘ಎಷ್ಟು ದುಡ್ಡು ತಿಂತೀರಾ? ಎಷ್ಟುವರ್ಷ ಇದೆ ನಿನ್ನ ಸರ್ವಿಸ್? ನಿನ್ನ ಮನೆ ಕಾಯೋಗಾ. ಕೆಲಸ ಮಾಡಪ್ಪ. ನಿನಗೆ ದುಡ್ಡು ಬೇಕಾದರೆ ನನ್ನತ್ರ ಬಾ, ಈ ಸಂದರ್ಭದಲ್ಲಿ ಜನರ ಕೆಲಸ ಮಾಡಿ’ ಎಂದು ತರಾಟೆಗೆ ತೆಗೆದುಕೊಂಡರು.