Chamarajanagar: ವೀರಪ್ಪನ್‌ ಹುಟ್ಟೂರಲ್ಲಿ ಡಿಸಿಎಫ್‌ ಶ್ರೀನಿವಾಸನ್‌ ಪುತ್ಥಳಿ ಅನಾವರಣ

ಪಿ ಶ್ರೀನಿವಾಸ್‌ ಹುತಾತ್ಮರಾಗಿ ಈಗ 20 ವರ್ಷ ಕಳೆದಿವೆ. ಆದರೂ ಗೋಪಿನಾಥಂ ಗ್ರಾಮದ ಜನರು ದೇವರಂತೆ ಕಾಣುತ್ತಾರೆ ಎಂದರೆ ಸುಳ್ಳಲ್ಲ. ಕಾಡುಗಳ್ಳ ವೀರಪ್ಪನ್‌ನಿಂದ ಹತ್ಯೆಯಾದ ಡಿಸಿಎಫ್‌ ಪಿ. ಶ್ರೀನಿವಾಸನ್‌ ಅವರ ಸ್ಮರಣೆ ಪ್ರಯುಕ್ತ ಭಾನುವಾರ ಪುತ್ಥಳಿ ಅನಾವರಣ ನಡೆಯಲಿದೆ. 

Forest Officer DCF Srinivasan Statue Revealed In Chamarajanagar District gvd

ಜಿ. ದೇವರಾಜನಾಯ್ದು

ಹನೂರು (ಸೆ.11): ಪಿ.ಶ್ರೀನಿವಾಸ್‌ ಹುತಾತ್ಮರಾಗಿ ಈಗ 20 ವರ್ಷ ಕಳೆದಿವೆ. ಆದರೂ ಗೋಪಿನಾಥಂ ಗ್ರಾಮದ ಜನರು ದೇವರಂತೆ ಕಾಣುತ್ತಾರೆ ಎಂದರೆ ಸುಳ್ಳಲ್ಲ. ಕಾಡುಗಳ್ಳ ವೀರಪ್ಪನ್‌ನಿಂದ ಹತ್ಯೆಯಾದ ಡಿಸಿಎಫ್‌ ಪಿ. ಶ್ರೀನಿವಾಸನ್‌ ಅವರ ಸ್ಮರಣೆ ಪ್ರಯುಕ್ತ ಭಾನುವಾರ ಪುತ್ಥಳಿ ಅನಾವರಣ ನಡೆಯಲಿದೆ. ಗೋಪಿನಾಥಂ ಗ್ರಾಮದ ಜನರು ವೀರಪ್ಪನ್‌ ವಂಚನೆಗೆ ಬಲಿಯಾದ ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀನಿವಾಸ್‌ ಅವರ ಪುತ್ಥಳಿ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ. 

ಈ ಹಿಂದೆ ಚಾಮರಾಜನಗರ ಸಿಸಿಎಫ್‌ ಆಗಿದ್ದ ಮನೋಜ್‌ ಕುಮಾರ್‌ ಗೋಪಿನಾಥಂಗೆ ಭೇಟಿ ನೀಡಿದ ವೇಳೆ ಗ್ರಾಮದ ಅಭಿವೃದ್ಧಿ ಮತ್ತು ದೇವಾಲಯ ಅಭಿವೃದ್ಧಿಗೆಂದು 2 ಲಕ್ಷ ರು. ನೀಡುವುದಾಗಿ ಘೋಷಿಸಿದ್ದರು. ಆಗ ಗ್ರಾಮಸ್ಥರು ನಮಗೆ ಹಣ ಬೇಡ, ಡಿಎಫ್‌ಒ ಪಿ.ಶ್ರೀನಿವಾಸ್‌ ಅವರ ಪುತ್ಥಳಿ ನಿರ್ಮಿಸಿ ಎಂದು ಮನವಿ ಮಾಡಿದ್ದರು.

ವರುಣಘಾತಕ್ಕೆ 1,348.48 ಹೆಕ್ಟೇರ್‌ ಬೆಳೆ ನಾಶ: ರೈತರಿಗೆ ಸಂಕಷ್ಟ

ಗ್ರಾಮಸ್ಥರ ಒತ್ತಾಸೆಯಂತೆ ಗೋಪಿನಾಥಂನ ಮಾರಿಯಮ್ಮ ದೇವಾಲಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ಪಿ.ಶ್ರೀನಿವಾಸ್‌ ಅವರ ಎರಡು ಅಡಿಯ ಕಂಚಿನ ಪುತ್ಥಳಿ ಗ್ರಾಮಕ್ಕೆ ಆಗಮಿಸಿದೆ. ಈಗಾಗಲೇ ಗ್ರಾಮಸ್ಥರು ಶ್ರೀನಿವಾಸನ್‌ ಅವರ ಕಂಚಿನ ಪುತ್ತಳಿಯನ್ನು ದೇವಾಲಯದ ಒಳಗಡೆ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಇದನ್ನು ಪ್ರತಿಷ್ಠಾಪಿಸಲು ದೇಗುಲ ಮುಂಭಾಗದಲ್ಲಿ ಮಂಟಪದಲ್ಲಿ ಭಾನುವಾರ ಅರಣ್ಯ ಹುತಾತ್ಮರ ದಿನ ಪುತ್ಥಳಿ ಅನಾವರಣಗೊಳಿಸಲಾಗುವುದು ಎಂದು ಕಾವೇರಿ ವನ್ಯಜೀವಿಧಾಮದ ಎಸಿಎಫ್‌ ಅಂಕರಾಜು ತಿಳಿಸಿದರು.

ದೇವ ಮಾನವ: ವೀರಪ್ಪನ್‌ ಊರಿನಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸ್‌ ಅವರನ್ನು ದೇವರಂತೆ ಪೂಜಿಸುತ್ತಿದ್ದು, ಪ್ರತಿ ಮನೆಯಲ್ಲೂ ಅವರ ಫೋಟೋ ಇರಿಸಲಾಗಿದೆ. ಅವರು ಕಟ್ಟಿಸಿದ ಮಾರಿಯಮ್ಮ ದೇವಾಲಯದಲ್ಲಿ ಅವರಿಗೇ ಮೊದಲ ಪೂಜೆ ಸಲ್ಲಿಕೆಯಾಗಲಿದೆ. ವ್ಯಕ್ತಿ ಅಳಿದು 2 ದಶಕಗಳಾದರೂ ಇಂದಿನ ಯುವ ಪೀಳಿಗೆಗೂ ಶ್ರೀನಿವಾಸ್‌ ಮಾದರಿಯಾಗಿದ್ದು, ಅವರ ನೆನಪಿನಲ್ಲಿ ಗ್ರೀನ್‌ ವಾರಿಯರ್‌ ಎಂಬ ಅಭಿಮಾನಿ ಯುವಕರ ತಂಡ ರೂಪುಗೊಂಡಿದೆ. ಶ್ರೀನಿವಾಸ್‌ ಅವರ ಸಹೋದರಿಯೂ ಕೂಡ ಇತ್ತೀಚೆಗೆ ಗೋಪಿನಾಥಂಗೆ ಭೇಟಿಕೊಟ್ಟು ಅಣ್ಣನ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

ಅರಣ್ಯ ಇಲಾಖೆಯಲ್ಲೂ ಪುತ್ಧಳಿ: ಅರಣ್ಯ ಇಲಾಖೆ ವತಿಯಿಂದ ಗೋಪಿನಾಥನ ಐಬಿ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಆಡಿಟೋರಿಯಂ ನಲ್ಲಿ ಹುತಾತ್ಮ ಶ್ರೀನಿವಾಸನ್‌ ಅವರ ಪುತ್ಥಳಿಯನ್ನು ಸಹ ಅರಣ್ಯ ಅಧಿಕಾರಿಗಳು ಲೋಕರ್ಪಣೆ ಮಾಡಲಿದ್ದಾರೆ.

ಎರಡು ದಶಕ: 1992 ರಲ್ಲಿ ಸೆಪ್ಟೆಂಬರ್‌ 11ರಂದು ಕಾಡುಗಳ್ಳ ವೀರಪ್ಪನ್‌ ತಾನು ಶರಣಾಗುವುದಾಗಿ ಹೇಳಿ ದಿ. ಹುತಾತ್ಮ ಅರಣ್ಯ ಅಧಿಕಾರಿ ಶ್ರೀನಿವಾಸನ್‌ ಅವರನ್ನು ಕರೆಸಿಕೊಂಡು ಕೊಂದುಹಾಕಿರುವ ಸ್ಥಳದಲ್ಲಿ ಪ್ರತಿವರ್ಷ ಸೆಪ್ಟೆಂಬರ್‌ 11ರಂದು ಹುತಾತ್ಮ ದಿನಾಚರಣೆಯನ್ನು ಅರಣ್ಯ ಅಧಿಕಾರಿಗಳು, ಗ್ರಾಮಸ್ಥರು ಶ್ರೀನಿವಾಸನ್‌ ಅವರ ಅಭಿಮಾನಿಗಳು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಯೋಗಾಭ್ಯಾಸ ದಿನನಿತ್ಯ ಬದುಕಿನ ಭಾಗವಾಗಲಿ: ಸಂಸದ ಮುನಿಸ್ವಾಮಿ

ಪ್ರಧಾನ ಮುಖ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ್‌ ಗೋಗಿ ಶ್ರೀನಿವಾಸನ್‌ ಅವರ ಪುತ್ಧಳಿ ಲೋಕಾರ್ಪಣೆ ಮಾಡಲಿದ್ದಾರೆ. ಮಲೆ ಮಹದೇಶ್ವರ ವನ್ಯ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಜಿ ಸಂತೋಷ್‌ ಕುಮಾರ್‌, ಕಾವೇರಿ ವನ್ಯ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂಎನ್‌ ಅಂಕರಾಜು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Latest Videos
Follow Us:
Download App:
  • android
  • ios