ಕೊಡಗು [ಸೆ.23]:  ಅನರ್ಹರ ಶಾಸಕರಿಗೆ ನಮಗೆ ಸಂಬಂಧವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಪುಂಗಿ ಊದುತ್ತಿದ್ದರು. ಆದ್ರೆ ಇದೀಗ ಇದೇ ಬಿಜೆಪಿ ನಾಯಕರು ಅನರ್ಹರನ್ನು ತಲೆಮೇಲಿಟ್ಟುಕೊಂಡು ಸುತ್ತಾಡುತ್ತಾಡುತ್ತಿದ್ದಾರೆ.

 ಅನರ್ಹ ಶಾಸಕರು ಸಾಕಷ್ಟು ತ್ಯಾಗ ಮಾಡಿ ಬಂದಿದ್ದು, ಅವರ ತ್ಯಾಗವನ್ನು ಎಲ್ಲೋ ರಸ್ತೆಯಲ್ಲಿ ಬಿಸಾಡುವ ಜಾಯಮಾನದವರು ನಾವಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. 

ಮಡಿಕೇರಿ ಸಮೀಪದ ಕರ್ಣಂಗೇರಿಲಿಯಲ್ಲಿ ಕಳೆದ ಬಾರಿಯ ಪ್ರವಾಹ ಪೀಡಿತರಿಗೆ ಸರ್ಕಾರದ ವತಿಯಿಂದ ‌ನಿರ್ಮಿಸುತ್ತಿರುವ  ಆಶ್ರಯ ಮನೆಗಳನ್ನು‌ ಪರಿಶೀಲಿಸಿ‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೋಮವಣ್ಣ.  ಅನರ್ಹ ಶಾಸಕರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ.  ಎಲ್ಲವನ್ನೂ ಚಿಂತನೆ ಮಾಡಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳುವರು ಎಂದು ಹೇಳಿದರು.

ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಲಾಗಿದೆ. ಅಕ್ಟೋಬರ್ 21 ಕ್ಕೆ ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ಸಿಗಬಹುದೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ ಎಂದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.