ಕರ್ನಾಟಕದಲ್ಲಿ ವಿದ್ಯುತ್ ದರ ಇಳಿಕೆಯಾಗುತ್ತಾ?: ಸಚಿವ ಸುನಿಲ್‌ ಕುಮಾರ್‌ ಪ್ರತಿಕ್ರಿಯೆ

ಭಗವದ್ಗೀತೆಯನ್ನು ಜಿಹಾದ್ ಎಂದು ಬಣ್ಣಿಸಿದ ಶಿವರಾಜ್ ಪಾಟೀಲ್: ಇದು ಕಾಂಗ್ರೆಸ್ ಅಭಿಪ್ರಾಯವೇ ?ಸಚಿವ ಸುನಿಲ್ ಪ್ರಶ್ನೆ 

Minister Sunil Kumar React to Electricity Price Decrease in Karnataka grg

ಉಡುಪಿ(ಅ.22):  ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ತಡವಾಗಿ ಎಚ್ಚೆತ್ತುಕೊಂಡಿದ್ದು, ಗಾಂಧಿ ಕುಟುಂಬದ ಕಪಿಮುಷ್ಠಿಯಿಂದ ಹೊರಗೆ ಬರುವುದಕ್ಕಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ‌ ಅಧ್ಯಕ್ಷರಾಗಿದ್ದರೂ, ಪಕ್ಷದ ಆಡಳಿತ ಮತ್ತು ನಿರ್ವಹಣೆ ಗಾಂಧಿ ಕುಟುಂಬದಿಂದಲೇ ನಡೆಯುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ವ್ಯಂಗ್ಯವಾಡಿದರು. ಇಂದು(ಶನಿವಾರ) ನಗರದಲ್ಲಿ ಸುದ್ದಿಗಾರರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಶಶಿ ತರೂರ್ ಎಐಸಿಸಿ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. 75 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಲ್ಲಿ ಮತದಾರರ ಪಟ್ಟಿ ಸಿದ್ದವಾಗಿದೆ ಎಂದರು.

ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಬೂತ್ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರವರೆಗೂ ಬದಲಾವಣೆ ಮಾಡಲಾಗುತ್ತದೆ. ಬಿಜೆಪಿಯಲ್ಲಿಯೂ ನಾಮಪತ್ರ ಸಲ್ಲಿಸಿಯೇ ಅಧ್ಯಕ್ಷರ ಆಯ್ಕೆಯಾಗುತ್ತದೆ. ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿಯೂ 33% ಮಹಿಳೆಯರಿಗೆ ಮೀಸಲಾತಿ ಇದೆ ಎಂದವರು ಹೇಳಿದರು.

ಭಗ್ನಗೊಂಡ ದೇವರ ಫೋಟೋ ಮರದ ಬುಡದಲ್ಲಿಡೋದು ಸರೀನಾ?

ಬಿಜೆಪಿಯು ಎಂದೂ ಸಮೀಕ್ಷೆ ಆಧಾರದಲ್ಲಿ ಚುನಾವಣೆ ನಡೆಸುವುದಿಲ್ಲ. ಕಾರ್ಯಕರ್ತ ಮತ್ತು ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ. ಮಿಷನ್ 150 ನಮ್ಮ ಗುರಿಯಾಗಿದೆ. ಉಳಿದ ಸ್ಥಾನಗಳನ್ನು ಉಳಿದ ಪಕ್ಷಗಳು ಹಂಚಿಕೊಳ್ಳಲಿ ಎಂದರು.

ಕಾಂಗ್ರೆಸ್ ಸ್ಪಷ್ಟ ಪಡಿಸಬೇಕು

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಭಗವದ್ಗೀತೆಯಲ್ಲಿ ಜಿಹಾದ್ ಭೋದಿಸಲಾಗಿದೆ ಎಂದು ಹೇಳಿರುವುದಕ್ಕೆ ಸಚಿವ ಸುನೀಲ್ ಕುಮಾರ್ ಉಗ್ರ ಶಬ್ದಗಳಲ್ಲಿ ಖಂಡಿಸುತ್ತೇನೆ ಎಂದರು. ಈ ಹೇಳಿಯನ್ನು ಕಾಂಗ್ರೆಸ್ ಪಕ್ಷ ಒಪ್ಪುತ್ತದೆಯೇ..? ತನ್ನ ಅಭಿಪ್ರಾಯವನ್ನು ಕಾಂಗ್ರೆಸ್ ಶಿವರಾಜ್ ಪಾಟೀಲ್ ಮೂಲಕ ಹೇಳಿಸಿದೆಯೇ..?  ಎಂಬುದನ್ನು ಸ್ಪಷ್ಟಪಡಿಸ ಬೇಕು ಎಂದು ಆಗ್ರಹಿಸಿದರು ನಮಗೆ ದೈವಾರಾಧನೆ ಮೇಲೆ ನಂಬಿಕೆ ಇದೆ. ಕಾಂತಾರ ಸಿನೆಮಾದಿಂದ ತುಳು ಸಂಸ್ಕೃತಿ ಮೇಲಿನ ಗೌರವ ದೇಶದಾದ್ಯಂತ ಹೆಚ್ಚಿದೆ. ಆದರೆ ನಂಬಿಕೆ, ಶ್ರದ್ದೆ, ಸಂಸ್ಕೃತಿ ಇಲ್ಲದವರಿಂದ ಆಕ್ಷೇಪ ಬಂದಿದೆ ಎಂದವರು ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ರಾಜ್ಯದ 3.50 ಲಕ್ಷ ರೈತರಿಗೆ ಉಚಿತವಾಗಿ ಸೌರ ವಿದ್ಯುತ್ ಪೂರೈಕೆ ಮಾಡುವ ಕುಸುಮ್ ಸೀ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಘೋಷಿಸಿದರು.
ಈ ಯೋಜನೆಯಡಿ ರಾಜ್ಯದಲ್ಲಿ 1,000 ಮೆಗವ್ಯಾಟ್ ಸಾಮರ್ಥ್ಯದ 1,000 ಪ್ರತ್ಯೇಕ ಸೋಲರ್ ಫೀಡರ್ ಗಳನ್ನು ಸ್ಥಾಪನೆ ಮಾಡಲಾಗುವುದು. ಅವುಗಳಿಂದ  ನೇರವಾಗಿ ರೈತರ ಪಂಪ್ ಸೆಟ್ಟುಗಳಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು. ರೈತರ ಏಳು ಗಂಟೆಯ ವಿದ್ಯುತ್ ಪೂರೈಕೆ ಬೇಡಿಕೆ ಈ ಮೂಲಕ ಈಡೇರಲಿದೆ ಎಂದು ಸಚಿವರು ಹೇಳಿದರು.

ವಿದ್ಯುತ್ ದರ ಇಳಿಕೆ..?

ಬಹಳ ವರ್ಷಗಳಿಂದಲೂ ಕಲ್ಲಿದ್ದಲು ಮತ್ತು ತೈಲ ಬೆಲೆ ಏರಿಕೆಯಾದಾಗಿನಿಂದ ವಿದ್ಯುತ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿತ್ತು. ಈಗ ಮೂರು ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆ ನಿರ್ಧರಿಸಲಾಗಿದ್ದು, ಕಲ್ಲಿದ್ದಲು ಮತ್ತು ತೈಲ ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ಬೆಲೆ ಕೂಡ ಇಳಿಕೆಯಾಗುತ್ತದೆ. 

'ಕಾಂತಾರ' ಒಳಗಣ್ಣಿಗೊಂದಿಷ್ಟು ಬೆಳಕು ಕೊಡುವ ಚಿತ್ರ, ಅದಕ್ಯಾಕೆ ಜಾತಿ, ಧರ್ಮದ ಬಣ್ಣ?

ರಾಜ್ಯದಲ್ಲಿ ಪ್ರತಿ ವರ್ಷ ಶೇ 9 ರಿಂದ 10 ರಷ್ಟು ವಿದ್ಯುತಿನ ಪೋಲಾಗುತ್ತಿತ್ತು. ಟ್ರಾನ್ಸ್ ಫಾರ್ಮರ್ ನಿರ್ವಹಣೆ ಅಭಿಯಾನದ ಮೂಲಕ ಶೇ 7 ಕ್ಕೆ ಇಳಿಸಲಾಗಿದ್ದು, ಮತ್ತೇ ಅಭಿಯಾನ ನಡೆಸಿ ಶೇ 5 ಕ್ಕೆ ಇಳಿಸಲಾಗುವುದು ಎಂದರು
ಕಳೆದ ವರ್ಷ ಬೇಸಿಗೆಯಲ್ಲಿ ಅತೀ ಹೆಚ್ಚು 14,800 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಕೆ ಮಾಡಲಾಗಿತ್ತು. ಅದರ ಅನುಭವದ ಆಧಾರದಲ್ಲಿ ಒಇ ವರ್ಷ ಎಷ್ಟು ಬೇಡಿಕೆ ಬಂದರು ಪೂರೈಕೆಗೆ ಸಿದ್ಧತೆಗಳನ್ನು ಮಾಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ 28 ಸಾವಿರ ಅರ್ಜಿಗಳು

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾರ್ವಜನಿಕರಿಂದ 28 ಸಾವಿರ ಶಿಫಾರಸು ಅರ್ಜಿಗಳು ಬಂದಿದೆ. ಅದರಲ್ಲಿ 35 ಕಲಾ ಪ್ರಕಾರಗಳಲ್ಲಿ ಎಲ್ಲಾ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯುವಂತೆ ತೆರೆಮರೆಯ ಸಾಧಕರನ್ನು ಗುರುತಿಸುವಂತೆ ಆಯ್ಕೆ ಸಮಿತಿಗೆ ಸೂಚಿಸಲಾಗಿದೆ. ಯಾವುದೇ ಒತ್ತಡ ಮತ್ತು ಲಾಭಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಈ ತಿಂಗಳ 29 ಅಥವಾ 30 ರಂದು ಪಟ್ಟಿ ಬಿಡುಗಡೆ ಮಾಡಲಾಗುವುದು. 
ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ ಈಗಾಗಲೇ 20 ಕೋಟಿ ರೂ ಯನ್ನು ಬಿಡುಗಡೆ ಮಾಡಿದೆ. ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರೀತಿಯ ಅನುದಾನ ಕೊರತೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
 

Latest Videos
Follow Us:
Download App:
  • android
  • ios