Chikkaballapur Utsav: ಡಾ.ಸುಧಾಕರ್ ದೂರದೃಷ್ಟಿ ನಾಯಕ: ಸಚಿವ ಮುನಿರತ್ನ
ಜಿಲ್ಲೆಗೆ ಏನಾದರೂ ಕೊಡುಗೆ ಕೊಡಬೇಕು, ನಾನು ಶಾಶ್ವತವಲ್ಲ, ಜಿಲ್ಲೆಗೆ ಶಾಶ್ವತವಾದ ಹೆಜ್ಜೆ ಗುರುತು ಇರಬೇಕೆಂದು ಹೇಳುವ ಸಚಿವ ಡಾ.ಸುಧಾಕರ್ ಒಬ್ಬ ದೂರದೃಷ್ಟಿಇರುವ ನಾಯಕ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.
ಚಿಕ್ಕಬಳ್ಳಾಪುರ (ಜ.09): ಜಿಲ್ಲೆಗೆ ಏನಾದರೂ ಕೊಡುಗೆ ಕೊಡಬೇಕು, ನಾನು ಶಾಶ್ವತವಲ್ಲ, ಜಿಲ್ಲೆಗೆ ಶಾಶ್ವತವಾದ ಹೆಜ್ಜೆ ಗುರುತು ಇರಬೇಕೆಂದು ಹೇಳುವ ಸಚಿವ ಡಾ.ಸುಧಾಕರ್ ಒಬ್ಬ ದೂರದೃಷ್ಟಿಇರುವ ನಾಯಕ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು. ಚಿಕ್ಕಬಳ್ಳಾಪುರ ಉತ್ಸವದ ಭಾಗವಾಗಿ ಎರಡನೇ ದಿನವಾದ ಭಾನುವಾರ ಸರ್ ಎಂವಿ ಜಿಲ್ಲಾ ಕ್ರೀಡಾಂಗಣದ ಉತ್ಸವದ ಮುಖ್ಯ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಷ್ಟೊಂದು ಅದ್ದೂರಿ ಉತ್ಸವ ನಾನು ಎಲ್ಲಿಯು ನೋಡಿರಲಿಲ್ಲ ಇದೇ ಮೊದಲು ಎಂದರು.
ದೂರದೃಷ್ಟಿ ನಾಯಕ: ಜಿಲ್ಲೆಯಯಾಗಿ ಚಿಕ್ಕಬಳ್ಳಾಪುರ 15 ವರ್ಷ ತುಂಬಿದೆ. ಜಿಲ್ಲೆಯಲ್ಲಿ ಎಷ್ಟುರಾಜಕಾರಣಿಗಳು ಬಂದಿದ್ದಾರೆ ಹೋಗಿದ್ದಾರೆ. ಆದರೆ ಸುಧಾಕರ್ ಅಂತ ರಾಜಕಾರಣಿ ಭಗವಂತನ ಕೊಡುಗೆ. ರಾಜಕಾರಣಿಗಳಿಗೆ ಕೆಲಸ ಮಾಡುವ ಇಚ್ಛೆ ಇರಬೇಕು, ಆ ರೀತಿಯ ವ್ಯಕ್ತಿತ್ವ ಸುಧಾಕರ್‌ದು. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಅತಿ ಹೆಚ್ಚು ಕೊಡುಗೆ ಕೊಡುವ ಶಕ್ತಿ ಅವರಿಗೆ ಸಿಗಲಿ. ನಾವು ಬಹಳಷ್ಟುರಾಜಕಾರಣಿಗಳನ್ನು ನೋಡಿದ್ದೇವೆ. ಸುಧಾಕರ್‌ಗೆ ಇರುವ ಉದ್ದೇಶ, ದೂರದೃಷ್ಠಿ ಮತ್ತೊಬ್ಬರಿಗಿಲ್ಲ ಎಂದು ಕೊಂಡಾಡಿದರು. ಸುಧಾಕರ್ ನಾವು ಇಬ್ಬರು ಒಟ್ಟಿಗೆ ಶಾಸಕರಾದೆವು. ಈ ರಾಜ್ಯಕ್ಕೆ ಏನಾದರೂ ಕೊಡುಗೆ, ಜಿಲ್ಲೆಗೆ ಸೇವೆ ಮಾಡಬೇಕು ಎಂಬ ಒತ್ತಾಸೆ ಅವರದು.
8 ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ಧೂರಿ ಚಾಲನೆ: ದಸರಾ ಜಂಬೂ ಸವಾರಿ ಶೈಲಿಯಲ್ಲಿ ಮೆರವಣಿಗೆ
ಬಹುಶಃ ಇಡೀ ದೇಶ ನೋಡುವ ವ್ಯಕ್ತಿ ಮೋದಿ. ಆದರೆ ಇಡೀ ದೇಶ ಕರ್ನಾಟಕದಲ್ಲಿ ನೋಡಿದ ವ್ಯಕ್ತಿ ಸುಧಾಕರ್. ಕೋವಿಡ್ ಸಮಯದಲ್ಲಿ ಇಡೀ ದೇಶದಲ್ಲಿ ಯಾವ ಆರೋಗ್ಯ ಮಂತ್ರಿ ಕೂಡ ಅಷ್ಟೊಂದು ಕಾಳಜಿ ವಹಿಸಿರಲಿಲ್ಲ. ಪ್ರತಿಯೊಂದು ಜೀವದ ಬೆಲೆ ಗೊತ್ತಿದ್ದು ಕುಟುಂಬಸ್ಥರ ರೀತಿಯಲ್ಲಿ ಉನ್ನತ ಆರೋಗ್ಯ ಮಂತ್ರಿಯಾಗಿ ಕೆಲಸ ಸುಧಾಕರ್ ಕೋವಿಡ್ ನಿರ್ವಹಣೆ ಮಾಡಿದರು. ದಿನದ 24 ಗಂಟೆ ಕೆಲಸ ಮಾಡಿದರು. ಅವರಿಂದ ನಾವು ಕಲಿಯುವುದು ಜಾಸ್ತಿ, ಶಾಲೆಯೊಂದು ತೆರೆದರೆ ನಾವೆಲ್ಲಾ ವಿದ್ಯಾರ್ಥಿಗಳಾಗಿ ಕಲಿಯುತ್ತೇವೆ. ನಮಗೆ ಉತ್ಸವದಿಂದ ಪಾಠ ಕಲಿಸಿದ್ದೀರಿ ನಾವು ಕೂಡ ಮುಂದಿನಗಳಲ್ಲಿ ಉತ್ಸವ ಮಾಡುತ್ತೇವೆಂದರು.
ವೇದಿಕೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಟ ದುನಿಯಾ ವಿಜಯ್, ಖ್ಯಾತ ಸಿನಿಮಾ ನಿರ್ದೇಶಕರಾದ ಜಿಲ್ಲೆಯವರಾದ ಕೇಶವಾರ ಚಂದ್ರು, ಖ್ಯಾತ ನಟರಾದ ಸಿಹಿ, ಕಹಿ ಚಂದ್ರು, ಒಗ್ಗರಣೆ ದಬ್ಬಿ ಮುರಳಿ ಬಾಬು, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಡಿ.ಎಲ್.ನಾಗೇಶ್, ಉಪ ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.
ಹತ್ತು ಜನ ಸೇರಿ ಮಾಡುವ ಕೆಲಸವನ್ನು ಒಬ್ಬರೇ ಮಾಡಿ ಇಷ್ಟೊಂದು ಅದ್ದೂರಿಯಾಗಿ ಉತ್ಸವ ಮಾಡುತ್ತಿರುವುದು ನಾನು ಮೊದಲನೇ ಬಾರಿ ನೋಡುತ್ತಿರುವುದೆಂದು ತೋಟಗಾರಿಕಾ ಸಚಿವ ಮುನಿರತ್ನ ಚಿಕ್ಕಬಳ್ಳಾಪುರ ಉತ್ಸವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.8 ದಿನದ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಸುಧಾಕರ್ ಅಂತ ಸ್ನೇಹಿತರು ಸಿಕ್ಕಿರುವುದು ನಮ್ಮ ಭಾಗ್ಯ, ಯಾವುದೇ ಕೆಲವನ್ನು ಬಹಳ ಶ್ರದ್ದೆಯಿಮದ ಕೆಲಸ ಮಾಡುವ ವ್ಯಕ್ತಿ, ಅದಕ್ಕೆ ಚಿಕ್ಕಬಳ್ಳಾಪುರ ಉತ್ಸವವೇ ಸಾಕ್ಷಿ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.
ಇಂದಿನಿಂದ 8 ದಿನ ವೈಭವದ ಚಿಕ್ಕಬಳ್ಳಾಪುರ ಉತ್ಸವ: ಸುದೀಪ್, ಶಂಕರ್ ಮಹದೇವನ್ ಮತ್ತಿತರರು ಭಾಗಿ
ಫಲಪುಪ್ಪ ಪ್ರದರ್ಶನ ವೀಕ್ಷಿಸಿ: ಚಿಕ್ಕಬಳ್ಳಾಪುರ ಉತ್ಸವ ಹಿನ್ನಲೆಯಲ್ಲಿ ತೋಟಗಾರಿಕಾ ಇಲಾಕೆಯಿಂದ ಮಾಡಲಾಗಿರುವ ಫಲಪುಪ್ಪ ಪ್ರದರ್ಶನವನ್ನು ಸಚಿವ ಸುಧಾಕರ್ ಜೊತೆಗೂಡಿ ಸಚಿವ ಮುನಿರತ್ನ ವೀಕ್ಷಿಸಿದರು. ಬಳಿಕ ಮಾತನಾಡಿ, 500 ವರ್ಷಗಳ ಭವ್ಯ ಇತಿಹಾಸ ಇರುವ ನಂದಿ ಬೋಗನಂದೀಶ್ವರ ದೇವಾಲಯ ಮಾದರಿಯಲ್ಲಿ ತೋಟಗಾರಿಕಾ ಇಲಾಖೆ ಆಕರ್ಷಕವಾದ ಫಲಪುಪ್ಪ ಅಲಂಕಾರ ಮಾಡಿದ್ದು ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಣೆ ಮಾಡಬೇಕೆಂದು ಮನವಿ ಮಾಡಬೇಕೆಂದು ಹೇಳಿ ಸುಧಾಕರ್ ಅವರ ಯೋಚನೆ, ದೂರದೃಷ್ಟಿಬೇರೆ ಯಾರು ಮಾಡಲು ಸಾಧ್ಯವಿಲ್ಲ. ಅವರೊಬ್ಬ ಒಳ್ಳೆಯ ನಾಯಕರೆಂದರು.