ಮೈಸೂರು(ಅ.01): ಹಳೆಯ ಬ್ಯಾನರ್ ಅಳವಡಿಸಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಳೆಯ ಬ್ಯಾನರ್‌ಗೆ ಹೊಸ ಬಿಲ್ ತೋರಿಸ್ತಬೇಡಿ ಎಂದು ವಾನ್‌ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಹಳೆಯ ಬ್ಯಾನರ್‌ ಅಳವಡಿಸಿದ್ದರಿಂದ ಕೋಪಗೊಂಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಹಿಳಾ ದಸರಾದಲ್ಲಿ ಈ ಬಾರಿಯೂ ಖಾಲಿ ಮಳಿಗೆ

ಮಹಿಳಾ ದಸರಾದ ಸ್ಟಾಲ್‌ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಉಸ್ತುವಾರಿ ಸಚಿವ ವಿ. ಸೋಮಣ್ಣ ಒಟ್ಟಾಗಿ ಉದ್ಘಾಟಿಸಿದರು. ಬಳಿಕ ವಿವಿಧ ಸ್ಟಾಲ್‌ಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಲವರು ಮಹಿಳಾ ದಸರಾದ ದ್ವಾರದಲ್ಲಿ ಅಳವಡಿಸಿರುವ ಫ್ಲೆಕ್ಸ್‌ ಹಳೆಯದು ಎಂಬುದನ್ನು ಸಚಿವರ ಗಮನಕ್ಕೆ ತಂದರು.

ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ, ಬುಕ್ ಮೈ ಶೋನಲ್ಲೂ ಬುಕ್ಕಿಂಗ್

ಫ್ಲೆಕ್ಸ್‌ನಲ್ಲಿ ಎರಡು ವರ್ಷದ ಹಿಂದಿನ ಭಾವಚಿತ್ರಕ್ಕೆ ಈಗಿನ ಸಚಿವರ ಫೋಟೋ ಅಂಟಿಸಲಾಗಿತ್ತು. ಅದರ ಹಿಂಬದಿಯಲ್ಲಿ ಉಮಾಶ್ರೀ ಅವರ ಫೋಟೋ ಇತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಇದು ಬಿಜೆಪಿ ಸರ್ಕಾರ, ಕಾಂಗ್ರೆಸ್‌ ಸರ್ಕಾರವಲ್ಲ. ಹಳೆಯ ಬೋರ್ಡ್‌ ಹೊಸ ಬಿಲ್‌ ವ್ಯವಹಾರ ಬೇಡ. ಮಧ್ಯಾಹ್ನದೊಳಗೆ ಎಲ್ಲವನ್ನೂ ತೆರವುಗೊಳಿಸಿ ಎಂದು ಸ್ಥಳದಲ್ಲಿಯೇ ಇದ್ದ ಇಲಾಖೆ ಉಪ ನಿರ್ದೇಶಕಿ ಪದ್ಮಾ ಅವರಿಗೆ ತಾಕೀತು ಮಾಡಿದರು.

ದಸರಾದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ