ಮೈಸೂರು(ಅ.01): ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಗೋಲ್ಡ್‌ ಕಾರ್ಡ್‌ ಹೊರತರಲಾಗುತ್ತಿದ್ದು, ಪ್ರತಿ ಕಾರ್ಡ್‌ಗೆ 4 ಸಾವಿರ ರು. ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಹೇಳಿಸಿದ್ದಾರೆ.

ಎರಡು ಸಾವಿರ ಗೋಲ್ಡ್‌ ಕಾರ್ಡ್‌ಗಳನ್ನು ಪ್ರಿಂಟ್‌ ಮಾಡಲಾಗಿದ್ದು, ಬುಕ್‌ ಮೈ ಶೋ ಆನ್‌ ಲೈನ್‌ನಲ್ಲಿ ಕೂಡಾ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗೋಲ್ಡನ್ ಕಾರ್ಡ್‌ ಜತೆಗೆ 250, 500 ಹಾಗೂ 1000 ರು. ಮುಖಬೆಲೆಯ ಟಿಕೆಟ್‌ಗಳನ್ನು ಮುದ್ರಣ ಮಾಡಲಾಗಿದೆ.

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯ:

ಮೈಸೂರು ದಸರಾ ನೋಡಲು ದೇಶ, ವಿದೇಶದಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯಲು ಆನ್‌ಲೈನ್‌ನಲ್ಲೂ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ದೂರದಲ್ಲಿದ್ದು, ತಮ್ಮ ಟಿಕೆಟ್ ಕಾಯ್ದಿರಿಸುವವರಿಗೆ ಅನುಕೂಲವಾಗಲಿದೆ. ಬುಕ್ ಮೈ ಶೋ ಸೈಟ್‌ಗೆ ಹೋಗಿ ಮೈಸೂರು ದಸರಾ ನೋಡಲು ಟಿಕೆಟ್ ಪಡೆದುಕೊಳ್ಳಬಹುದು.

ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ

ಅರಮನೆ, ಬನ್ನಿಮಂಟಪದ ಆಸನದ ವ್ಯವಸ್ಥೆಗೆ ಅನುಗುಣವಾಗಿ ಪಾಸ್‌ ಮುದ್ರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಚಾಮುಂಡಿ ಬೆಟ್ಟದಲ್ಲಿ 100 ರು. ಟಿಕೆಟ್‌ ಖರೀದಿಸುವವರಿಗೆ ವಿಶೇಷ ಸಾಲಿನಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ. ಅರಮನೆ ಮತ್ತು ಯುವದಸರಾ ಮುಂತಾದ ಕಾರ್ಯಮಗಳಲ್ಲಿ ಗೋಲ್ಡ್‌ ಕಾರ್ಡ್‌ನವರಿಗೆ ವಿಶೇಷ ಪ್ರವೇಶವಿರುತ್ತದೆ ಎಂದು ಅವರು ಹೇಳಿದ್ದಾರೆ.

ದಸರಾದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ