ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ: ಸಚಿವೆ ಜೊಲ್ಲೆ| ನನ್ನ ಸಚಿವ ಸ್ಥಾನ ಅಬಾಧಿತ| ಆರ್‌.ಶಂಕರ ಸೇಞರಿದಂತೆ ಇತರೆ ಶಾಸಕರು ತ್ಯಾಗ ಬಂದಿದೆ ಅದನ್ನು ನಾವು ಮರೆಯುದಿಲ್ಲ| 

ಬಾಗಲಕೋಟೆ(ಫೆ.03): ಪಕ್ಷದ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಭಾನುವಾರ ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಬಂದಾಗ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಅವರು ವರಿಷ್ಠರನ್ನು ಭೇಟಿಯಾಗಿ ಬಂದಿದ್ದಾರೆ. ರಾಜ್ಯದ ಪ್ರಮುಖರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಅವರ ನಿರ್ಣಯಕ್ಕೆ ನಾವು ಸದಾ ಕಾಲ ಬದ್ಧರಿದ್ದೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿ ಜಿಲ್ಲೆಯದೆ ಸಮಸ್ಯೆ ಎಂಬುವುದಕ್ಕೆ ಅದೇನು ದೊಡ್ಡ ಸಮಸ್ಯೆಯೇನಿಲ್ಲ, ಮುಖ್ಯಮಂತ್ರಿ ಅವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ನನ್ನ ಸಚಿವ ಸ್ಥಾನ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧಳಿರುವೆ, ನಾನು ಸಮಾಜಸೇವೆ ಮತ್ತು ಪಕ್ಷ ಸಂಘಟನೆಯಿಂದ ಗುರುತಿಸಿಕೊಂಡವಳು, ನನಗೆ ಅನ್ಯಾಯ ಮಾಡುತ್ತಾರೆ ಅನ್ನುವದಿಲ್ಲ. ನನ್ನ ಸ್ಥಾನ ಅಭಾದಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಲಕ್ಷಣ ಸವದಿಯವರಿಗೆ ಪರಿಷತ್‌ ಟಿಕೆಟ್‌ ನೀಡಿ ಆರ್‌.ಶಂಕರ ಅವರಿಗೆ ಹಿನ್ನಡೆ ಮಾಡಿರುವ ಕುರಿತು ಚರ್ಚೆ ನಡೆಯುತ್ತಿದೆ. ಆರ್‌.ಶಂಕರ ಸೇಞರಿದಂತೆ ಇತರೆ ಶಾಸಕರು ತ್ಯಾಗ ಬಂದಿದೆ. ಅದನ್ನು ನಾವು ಮರೆಯುದಿಲ್ಲ. ಆದರೆ ಅವುಗಳನ್ನೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚರ್ಚಿಸಿ ನಿರ್ಧರಿಸುತ್ತಾರೆ. ಹಿರಿಯ ಸಚಿವರು ತ್ಯಾಗ ಮಾಡಬೇಕು ಎನ್ನುವ ಶಾಸಕ ಯತ್ನಾಳ ಅವರ ಹೇಳಿಕೆ ಕುರಿತು ಪಕ್ಷದ ಹೈಕಮಾಂಡ್‌ ಈ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗುತ್ತದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.