ಮೈಸೂರು, (ಜುಲೈ.09): ಮಸಾಜ್ ಪಾರ್ಲರ್ ಎಂದು ಬೋರ್ಡ್​ ಹಾಕಿಕೊಂಡು  ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೈಸೂರಿನ ಸ್ಪಾ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಬೋಗಾದಿ ಮುಖ್ಯ ರಸ್ತೆಯಲ್ಲಿದ್ದ ಮಸಾಜ್‌ ಪಾರ್ಲರ್‌ವೊಂದರ ಮೇಲೆ ದಾಳಿ ನಡೆಸಿದ ಸರಸ್ವತಿಪುರಂ ಠಾಣೆ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದಾರೆ.

ಗಾಂಧಿ ಕುಟುಂಬದ ಟ್ರಸ್ಟ್‌ಗೆ ಚೀನಾ ಹಣ, ರಾಜ್ಯದಲ್ಲಿ ಅಬ್ಬರಿಸುತ್ತಿದ್ದಾನೆ ವರುಣ; ಜು.9ರ ಟಾಪ್ 10 ನ್ಯೂಸ್!

 ಗ್ರಾಹಕನಾಗಿ ಬಂದಿದ್ದ ಕೀರ್ತಿ (25) ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಕೆಳ ಮಹಡಿಯಲ್ಲಿ ಮಸಾಜ್‌ ಪಾರ್ಲರ್‌ ನಡೆಸುತ್ತಿದ್ದ ಈತ ಒಂದನೇ ಮಹಡಿಯಲ್ಲಿದ್ದ ಎರಡು ಕೋಣೆಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಪೊಲೀಸರು ದಾಳಿ ನಡೆಸಿದರು ಎಂದು ಡಿಸಿಪಿ ಪ್ರಕಾಶ್‌ಗೌಡ ತಿಳಿಸಿದರು.

ಸರಸ್ವತಿಪುರಂ ಠಾಣೆ ಇನ್‌ಸ್ಪೆಕ್ಟರ್ ವಿಜಯಕುಮಾರ್, ಸಬ್‌ಇನ್‌ಸ್ಪೆಕ್ಟರ್ ಭವ್ಯಾ, ಕಾನ್‌ಸ್ಟೆಬಲ್ ರಕ್ಷಿತಾ ಸೇರಿದಂತೆ ಹಲವು ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.