ಮೈಸೂರು(ಜು.13): ಇತ್ತೀಚೆಗೆ ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸಹೋದರಿಯ ಮೊಮ್ಮಗ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾನೆ. 

ಕಾರ್ತಿಕ್‌ (21) ಮೃತ ಯುವಕ. ಮೈಸೂರಿನ ಶಾರದದೇವಿ ನಗರದ ನಿವಾಸಿ ಕಾರ್ತಿಕ್‌ ಕುವೆಂಪುನಗರದ ಎ ಟೂ ಜೆಡ್‌ ಸೂಪರ್‌ ಮಾರ್ಕೆಟ್‌ ಬಳಿ ಜು.3 ರಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. 

ಫಾರ್ಮ್ ಹೌಸ್‌ನಲ್ಲಿ ಹೋಮ್ ಕ್ವಾರಂಟೈನ್ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ...!

ಕೂಡಲೇ ಆತನನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾನೆ. ಕುವೆಂಪುನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.