ಕಲಬುರಗಿ: ಮಕ್ಕಳ ನೀರಿನ ಸಮಸ್ಯೆಗೆ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಇತ್ತೀಚೆಗೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆಗೆ ಆಗಮಿಸಿದ್ದ ಐಟಿಬಿಟಿ ಸಚಿವ ಪ್ರಿಯಂಕ್ ಖರ್ಗೆ ಅವರಿಗೆ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ ಹಿರೆಡ್ಡಿ ಅವರು ಎರಡು ಶಾಲೆಯ ಮಕ್ಕಳಿಗೆ ಕುಡಿಯಲು, ಮಧ್ಯಾಹ್ನದ ಬಿಸಿಊಟ, ಶೌಚಾಲಯಕ್ಕೆ ನೀರಿನ ಸಮಸ್ಯೆ ಇರುವದನ್ನು ಗಮನಕ್ಕೆ ತಂದಿದ್ದರು. ಸಮಸ್ಯೆಗೆ ಸ್ಪಂದಿಸಿದ್ದ ಸಚಿವರು ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಆದೇಶ ನೀಡಿದ್ದರು.
ಶಹಾಬಾದ(ಫೆ.20): ನಾಲವಾರ ಹೊಬಳಿಯ ಕೊಲ್ಲೂರ ಗ್ರಾಮದ ಬಳಿ ಭೀಮಾ ನದಿ ಹರಿಯುತ್ತಿದ್ದರು. ಇಲ್ಲಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಸರಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ನೀರಿನ ಸಮಸ್ಯೆ ಕಾಡುತ್ತಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಎರಡು ಶಾಲೆಗೆ ಪ್ರತ್ಯೇಕ ಕೊಳವೆ ಬಾವಿ ತೊಡಿಸಿ, ಪಂಪ್ ಹಾಕಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ.
ಇತ್ತೀಚೆಗೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆಗೆ ಆಗಮಿಸಿದ್ದ ಐಟಿಬಿಟಿ ಸಚಿವ ಪ್ರಿಯಂಕ್ ಖರ್ಗೆ ಅವರಿಗೆ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ ಹಿರೆಡ್ಡಿ ಅವರು ಎರಡು ಶಾಲೆಯ ಮಕ್ಕಳಿಗೆ ಕುಡಿಯಲು, ಮಧ್ಯಾಹ್ನದ ಬಿಸಿಊಟ, ಶೌಚಾಲಯಕ್ಕೆ ನೀರಿನ ಸಮಸ್ಯೆ ಇರುವದನ್ನು ಗಮನಕ್ಕೆ ತಂದಿದ್ದರು. ಸಮಸ್ಯೆಗೆ ಸ್ಪಂದಿಸಿದ್ದ ಸಚಿವರು ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಆದೇಶ ನೀಡಿದ್ದರು.
ಸಿಬಿಐ, ಇಡಿ ದಾಳಿ ಮಾಡಿಸೋದು ಬಿಜೆಪಿ ಹುಟ್ಟುಗುಣ; ಮೋದಿ, ಶಾಗೆ ಇದೊಂದು ಕಸುಬು: ವಿಜಯಾನಂದ ಕಾಶಪ್ಪನವರ್ ಕಿಡಿ
ಸಚಿವರ ಆದೇಶದಂತೆ ಅಧಿಕಾರಿಗಳಾದ ಎಇಇ ರಾಠೋಡ, ಭೀಮಾಶಂಕರ ಕುಲಕರ್ಣಿ ಅವರು ಎರಡು ಶಾಲೆಯಲ್ಲಿ ಕೊಳವೆ ಬಾವಿ ಹಾಕಿಸಿ, ಶುಕ್ರವಾರ ಪಂಪ ಅಳವಡಿಸಿದ್ದು, ಶುಕ್ರವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ.ಅದ್ಯಕ್ಷ ಭೀಮಾಶಂಕರ, ಮಾಜಿ ಅಧ್ಯಕ್ಷರಾದ ಕೃಷ್ಣಾರೆಡ್ಡಿ ಹಿರೆಡ್ಡಿ, ಮುಖ್ಯ ಗುರು ನಿರ್ಮಲಾದೇವಿ, ಎಸ್‍ಡಿಎಂಸಿ ಅಧ್ಯಕ್ಷ ಚಿದಾನಂದ ಗ್ರಾಪಂ.ಸದಸ್ಯರು, ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಕೊಲ್ಲೂರ ಗ್ರಾಮದಲ್ಲಿ ಭೀಮಾ ನದಿ ನೀರು ಸರಬರಾಜು ಇದ್ದರೂ ಬೆಳಗ್ಗೆ ನೀರು ಬರುವದರಿಂದ ಶಾಲೆ ಪ್ರಾರಂಭವಾಗುವ ಸಂದರ್ಭದಲ್ಲಿ ನಲ್ಲಿಯಲ್ಲಿ ನೀರು ಇರುತ್ತಿರಲಿಲ್ಲ, ಇದರಿಂದ ಮಕ್ಕಳಿಗೆ ಕುಡಿಯಲು, ಬಿಸಿಯೂಟದ ಅಡುಗೆ, ಶೌಚಾಲಯಕ್ಕೆ ಎರಡು ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಸಚಿವರಾದ ಪ್ರಿಯಂಕ್ ಖರ್ಗೆ ಅವರ ಗಮನಕ್ಕೆ ತಂದಾಗ ಎರಡು ಶಾಲೆಯಲ್ಲಿ ಕೊಳವೆ ಬಾವಿ ಕೊರೆಸಿ, ಪಂಪ್ ಅಳವಡಿಸಿ, ಶಾಲೆಗಳಿಗೆ ಶಾಶ್ವತ ನೀರಿನ ಸಮಸ್ಯೆ ಬಗೆಹರಿಸಿದ್ದಾರೆನ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ ಹಿರೆಡ್ಡಿ ತಿಳಿಸಿದ್ದಾರೆ.