ಬೀದರ್(ಫೆ.27): ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಸೇರಿದ ಕಾರು ಪಲ್ಟಿಯಾದ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಬಳಿ ಇಂದು(ಗುರುವಾರ) ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಸಂಭವಿಸಿಲ್ಲ. 

ಸಚಿವ ಪ್ರಭು ಚೌಹಾಣ್ ಅವರನ್ನ ಬೀದರ್‌ನಿಂದ ಹೈದ್ರಾಬಾದ್ ಏರ್ಪೋರ್ಟ್‌ಗೆ ಬಿಡಲು ಹೋಗಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಫಾರ್ಚೂನರ್ ಕಾರ್‌ನಲ್ಲಿ ಗನ್ ಮ್ಯಾನ್ ಮತ್ತು ಕಾರ್ಯಕರ್ತರು ಇದ್ದರು ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್‌ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸಚಿವ ಪ್ರಭು ಚೌಹಾಣ್ ಅವರು ಸರ್ಕಾರಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್