ರೈತರು ಇದ್ದರೆ ಮಾತ್ರ ನಾವು, ನೀವು: ಅಧಿಕಾರಿಗಳಿಗೆ ಸಚಿವ ಬೋಸರಾಜು ಕ್ಲಾಸ್..!
ಅಳ್ನಾವರ ತಾಲೂಕಿನ ಇಂದಿರಮ್ಮನ ಕೆರೆಯ ಕಾಲುವೆ ಕಾಮಗಾರಿ ವೀಕ್ಷಣೆಗೆ ಹೋಗಿದ್ದ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಭೋಸರಾಜು ಅವರು ಸ್ಥಳದಲ್ಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ(ಸೆ.03): ಜಿಲ್ಲೆಯ ಅಳ್ನಾವರ ತಾಲೂಕಿನ ಇಂದಿರಮ್ಮನ ಕೆರೆಯ ಕಾಮಗಾರಿ ಕಳೆದ ಐದು ವರ್ಷದಿಂದ ಕೆರೆಯ ಎಡದಂಡೆ ಕಾಲುವೆ 2019 ರಲ್ಲಿ ಮಹಾಮಳೆಗೆ ಕೊಚ್ಚಿಹೋಗಿತ್ತು ಆದರೆ ಅಧಿಕಾರಿಗಳು ಕೇಳೆದ ನಾಲ್ಕು ವರ್ಷದಿಂದ ಮೂರು ಟೆಂಡರ್ ಕರೆದು ಕ್ಯಾನ್ಸಲ್ ಮಾಡಿದ್ದರು. ಈ ಕುರಿತು ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಕಳೆದ ಜುಲೈ ಮತ್ತು ಅಗಷ್ಟನಲ್ಲಿ ವರದಿ ಮಾಡಿ ಸಣ್ಣ ನೀರಾವರಿ ಇಲಾಖೆ ಮತ್ತು ಸಚಿವರ ಕಣ್ತೆರೆಸಿತ್ತು. ಆದರೆ ವರದಿ ಮಾಡಿದ ಬೆನ್ನಲ್ಲೇ ಆ. 5 ರಂದು ಟೆಂಡರ್ ಕರೆಯಲಾಗಿತ್ತು. ಇವತ್ತು ಕೂಡಾ ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್. ಎಸ್. ಬೋಸರಾಜು ಅವರು ಕೆರೆ ವಿಕ್ಷಣೆ ಮಾಡಿ ಅಧಿಕಾರಿಗಳಿಗೆ ಆದಷ್ಟು ಬೇಗ ಕಾಮಗಾರಿಯನ್ನ ಮಾಡುವಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ..
ಅಳ್ನಾವರ ತಾಲೂಕಿನ ಇಂದಿರಮ್ಮನ ಕೆರೆಯ ಕಾಲುವೆ ಕಾಮಗಾರಿ ವೀಕ್ಷಣೆಗೆ ಹೋಗಿದ್ದ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಭೋಸರಾಜು ಅವರು ಸ್ಥಳದಲ್ಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಇಂದಿರಮ್ಮನ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರಿಗೆ ಎಡದಂಡೆ ಕಾಲುವೆ ಕಾಮಗಾರಿ ವಿಳಂಬ ಆಗಿದ್ದು ಗೊತ್ತಾಯಿತು ಇದರಿಂದ ಸಿಟ್ಟಿಗೆದ್ದ ಸಚಿವರು ಸಣ್ಣ ನೀರಾವರಿ ಇಲಾಖೆಯ ಎಇಇ ಸಾಳುಂಕೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ಪದೇ ಪದೇ ಹೋಗುವುದು ತಪ್ಪಾ?: ಸಚಿವ ಜಮೀರ್ ಪ್ರಶ್ನೆ!
ನಿಮ್ಮ ಇಲಾಖೆಯಲ್ಲೇ ಸಾಕಷ್ಟು ಸಮಸ್ಯೆಗಳಿವೆ ಮೊದಲು ಅವುಗಳನ್ನು ಸರಿಪಡಿಸಿಕೊಳ್ಳಿ ಗುತ್ತಿಗೆದಾರರು ಕೆಲಸ ಮಾಡಲು ಓಡೋಡಿ ಬರುತ್ತಾರೆ ಕೇವಲ ಗುತ್ತಿಗೆದಾರನ ನೆಪ ಹೇಳಿ ತಪ್ಪಿಸಿಕೊಳ್ಳಬೇಡಿ ಎಂದು ಫುಲ್ ಕ್ಲಾಸ್ ತೆಗೆದುಕೊಂಡರು ಕಳೆದ ನಾಲ್ಕು ವರ್ಷಗಳಿಂದ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ ಜನರ ಸಮಸ್ಯೆಗಳಿಗೆ ನೀವು ಸ್ಪಂದಿಸುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ ರೈತರು ಇದ್ದರೆ ಮಾತ್ರ ನಾವು ನೀವು ಇರಲು ಸಾಧ್ಯ ನಿಮ್ಮ ತಂದೆ, ತಾಯಿ ನಿಮಗಾರಿ ಭೂಮಿ ಮಾಡಿಟ್ಟಿದ್ದಾರೆ ಇಲ್ಲಿನ ರೈತರಿಗೂ ಪೂರ್ವಜರು ಮಾಡಿಟ್ಟ ಭೂಮಿ ಇಲ್ಲಿದೆ ರೈತರ ಸಮಸ್ಯೆಗಳಿಗೆ ನೀವು ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ವಾರ್ನ್ ಮಾಡಿದ ಸಚಿವರು ರಾತ್ರಿ 12 ಗಂಟೆಗಾದರೂ ನೀವು ನನಗೆ ಫೋನ್ ಮಾಡಿ ಎಂದು ಸಚಿವರು ಅಲ್ಲಿನ ರೈತರಿಗೆ ಅಭಯ ನೀಡಿದರು.
ಇನ್ನು ಸಚಿವರ ಕೆರೆ ವೀಕ್ಷಣೆ ಮಾಡಿ ಕೆರಡಗೆ ಸಚಿವರು ಬಾಗಿ ಅರ್ಪಿಸಿದರು. ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್. ಎಸ್. ಬೋಸರಾಜು ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಣ್ಣ ನೀರಾವರಿ ಇಲಾಖೆಯ ಎಇಇ ಸಾಳುಂಕೆ, ಸಣ್ಣ ನೀರಾವರಿ ಇಲಾಖೆಯ ಇಇ ಅವರು ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.