ಸಚಿವರಿಂದಲೇ ಬಿಜೆಪಿ ಮತಗಳು ಕಾಂಗ್ರೆಸ್‌ಗೆ ಮಾರಾಟ : ಸ್ಫೋಟಕ ಆರೋಪ

  • ಸಚಿವರಿಂದಲೇ ಬಿಜೆಪಿ ಮತಗಳು ಕಾಂಗ್ರೆಸ್‌ಗೆ ಮಾರಾಟ :  ಸ್ಫೋಟಕ ಆರೋಪ
  • ಬೆಂಬಲಿಗರ ಮತಗಳನ್ನು ಎಷ್ಟುಹಣಕ್ಕೆ ಮಾರಿದ್ದೀರಿ?
  • ಕೆ.ಆರ್‌.ಪೇಟೆಯನ್ನು ಭಿಕಾರಿಪುರ ಮಾಡಿದ್ದೀರಿ: ಆರೋಪ
Minister Narayana Gowda Sold BJP Votes  Manmul Director HT Manju  Allegation snr

 ಕೆ.ಆರ್‌.ಪೇಟೆ (ಡಿ.11): ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಸಚಿವ ಕೆ.ಸಿ.ನಾರಾಯಣ ಗೌಡರು (Narayana Gowda) ಬಿಜೆಪಿ (BJP) ಮತಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಮನ್‌ಮುಲ್‌ ನಿರ್ದೇಶಕ ಎಚ್‌.ಟಿ. ಮಂಜು ಗಂಭೀರವಾಗಿ ಆರೋಪಿಸಿದರು.  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್‌ (JDS) ತಾಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ (Election) ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಆಗ ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರಿರಲಿಲ್ಲ. ಆಗ ಕಾಂಗ್ರೆಸ್‌ (Congress) ಸರ್ಕಾರವಿದ್ದರೂ ಬಿಜೆಪಿಗೆ 169 ಮತಗಳು ಬಂದಿದ್ದವು. ಈಗ ರಾಜ್ಯದಲ್ಲಿ ಬಿಜೆಪಿ (BJP) ಸರ್ಕಾರವಿದೆ, ಕೆ.ಸಿ.ನಾರಾಯಣ ಗೌಡರೇ (Narayanagowda) ಉಸ್ತುವಾರಿ ಮಂತ್ರಿ ಹಾಗೂ ಕ್ಷೇತ್ರದ ಶಾಸಕರಾಗಿದ್ದಾರೆ. ಪಕ್ಷದ 600 ಮತಗಳಿವೆ ಎಂದು ಅವರೇ ಹೇಳಿದ್ದಾರೆ. ಹಾಗಾದರೆ ನಿಮ್ಮ ಬೆಂಬಲಿಗರ ಮತಗಳನ್ನು ಯಾರಿಗೆ, ಎಷ್ಟು ಹಣಕ್ಕೆ ಮಾರಾಟ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಸುಮಲತಾ ಗೆಲುವಿಗೆ ಸಹಕಾರ: ಜಿಲ್ಲೆಯಾದ್ಯಂತ ಜೆಡಿಎಸ್‌ ಬೆಂಬಲಿತ ಮತ 1900 ಇದ್ದವು. ನಮಗೆ 1800 ಮತಗಳು ಬಂದಿವೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ನಿರೀಕ್ಷಿತ ಮತಗಳು ಬಂದಿವೆ. ಹಿಂದೆ ಲೋಕಸಭೆ  ಚುನಾವಣೆಯಲ್ಲಿ (Loksabha Election) ಜೆಡಿಎಸ್‌ನಲ್ಲಿದ್ದುಕೊಂಡು ಸುಮಲತಾ ಪರ ಕೆಲಸ ಮಾಡಿದ್ದೀರಿ. ಈಗ ಬಿಜೆಪಿಯಲ್ಲಿದ್ದುಕೊಂಡು (BJP) ಕಾಂಗ್ರೆಸ್‌ ಗೆಲುವಿಗೆ ನೆರವಾಗಿದ್ದೀರಿ. ನಿಮ್ಮನ್ನು ನಂಬಿದವರ ಕತ್ತು ಕೊಯ್ಯುವುದೇ ನಿಮ್ಮ ಕೆಲಸನಾ ಎಂದು ಖಾರವಾಗಿ ಹೇಳಿದರು.

ಸದನದಲ್ಲಿ ಕಾಂಗ್ರೆಸ್‌ನವರಿಗೆ (Congress) ನಮ್ಮ ಮನೆಯಲ್ಲಿ ಎತ್ತಿನ ಗಾಡಿ ಇದೆ ಎಂದು ಹೇಳಿದ್ದೀರಿ. ನಿಮ್ಮ ಬೆಂಗಳೂರಿನ (Bengaluru) ಅಥವಾ ಮುಂಬೈನ ಯಾವ ಅಪಾರ್ಟ್‌ಮೆಂಟ್‌ನಲ್ಲಿ ಎತ್ತಿನಗಾಡಿ, ದನಗಳನ್ನು ಸಾಕಿದ್ದೀರಿ. 224 ಶಾಸಕರಲ್ಲಿ ಅತಿ ಹೆಚ್ಚು ಸುಳ್ಳು ಮತ್ತು ಮೋಸ ಮಾಡುವವರಿದ್ದರೆ ಅದು ನಾರಾಯಣ ಗೌಡ ಮಾತ್ರ. ಪ್ರತಿ ಚುನಾವಣೆಯಲ್ಲೂ ಒಂದೊಂದು ಸಮುದಾಯವನ್ನು ಬಳಿಸಿಕೊಂಡು ಮೋಸ ಮಾಡುತ್ತಿದ್ದೀರಿ. ಉಳಿದಿರುವುದು ಹಾಲು ಮತ ಸಮುದಾಯ. ಅದನ್ನು ಬಳಸಿಕೊಳ್ಳುವ ಹುನ್ನಾರ ಮಾಡುತ್ತಿದ್ದೀರಿ. ತಾಲೂಕಿನ ಎಲ್ಲಾ ಸಮುದಾಯಗಳಿಗೂ ಮೋಸ ಮಾಡಿದ್ದೀರಿ. ನಿಮ್ಮ ನಾಟಕೀಯ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದರು.

ಭಿಕಾರಿಪುರ ಮಾಡಿದ್ದೀರಿ..!:  ಉಪ ಚುನಾವಣೆ (By Election) ಸಮಯದಲ್ಲಿ ಕ್ಷೇತ್ರವನ್ನು ಎರಡನೇ ಶಿಕಾರಿಪುರ ಮಾಡುವುದಾಗಿ ಭರವಸೆ ನೀಡಿದ್ದೀರಿ. ಆದರೀಗ ಭಿಕಾರಿಪುರ ಮಾಡಿದ್ದೀರಿ. ನಿಮ್ಮ ಅಭಿವೃದ್ಧಿ ಸುಳ್ಳು ಮತ್ತು ಮೋಸ ಎಂದು ತಾಲೂಕಿನ ಜನರಿಗೆ ಗೊತ್ತಿದೆ. ಅವರನ್ನು ದಿಕ್ಕು ತಪ್ಪಿಸಬೇಡಿ. ಅವಕಾಶ ಸಿಕ್ಕಿದೆ ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು ಆಗ್ರಹಿಸಿದರು.

ಅವಲೋಕನ ಮಾಡಿಕೊಳ್ಳಲಿ:  ತಾಲೂಕು ಅಧ್ಯಕ್ಷ ಜಾನಕೀರಾಂ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡಿದ ಮತದಾರರಿಗೆ ಅಭಿನಂದನೆಗಳು. ಜಿಲ್ಲೆಯ ಜೆಡಿಎಸ್‌ ನಾಯಕರಲ್ಲಿ ಒಗ್ಗಟ್ಟಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಮೊದಲು ಬಿಜೆಪಿ (BJP) ನಡೆದುಕೊಂಡ ರೀತಿ ಬಗ್ಗೆ ಅವಲೋಕನ ಮಾಡಿಕೊಳ್ಳಲಿ. ನಿಮ್ಮ ಅಭ್ಯರ್ಥಿ ಏನಾದರೂ ಎಂಬುದರ ಬಗ್ಗೆ ಮಾತನಾಡಿ, ತಾಲೂಕಿನಲ್ಲಿ ನಿಮಗೆ ಸಿಕ್ಕಿದ ಒಳ್ಳೆಯ ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ತಾಲೂಕಿನಾದ್ಯಂತ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಆ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಟಿಎಪಿಸಿಎಂಎಸ್‌  (TAPCMS) ನಿದೇಶಕರಾದ ಬಲದೇವ್‌, ಮಂಜುನಾಥ್‌, ನವೀನ್‌ಕುಮಾರ್‌, ಶೀಳನೆರೆಮೋಹನ್‌, ಎಂಡಿಸಿಸಿ ಉಪಾಧ್ಯಕ್ಷ ಅಶೋಕ್‌, ಸಿಂಧಘಟ್ಟಪಂಚಾಯಿತಿ ಅಧ್ಯಕ್ಷ ನವೀನ್‌, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜೇಗೌಡ, ಜೆಡಿಎಸ್‌ ಮುಖಂಡರಾದ ಸಂತೇಬಾಚಹಳ್ಳಿ ರವಿ, ಕೆ.ಟಿ.ಶ್ರೀನಿವಾಸ್‌ ಭೈರಾಪುರ ಹರೀಶ್‌, ಬೇಲದಕೆರೆ ಪಾಪೇಗೌಡ, ಕೃಷ್ಣ ಹಲವರಿದ್ದರು.
 
ಕೆ.ಆರ್‌.ಪೇಟೆ ಪ್ರವಾಸಿಮಂದಿರದಲ್ಲಿ ಮನ್‌ಮುಲ್‌ ನಿರ್ದೇಶಕ ಹೆಚ್‌.ಟಿ.ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Latest Videos
Follow Us:
Download App:
  • android
  • ios