ಹೊಸಕೋಟೆ (ಮೇ.28):ರಾಜ್ಯದ ಬಿಜೆಪಿ ಪಾಳಯದಲ್ಲಿ ಸಿಎಂ ಬದಲಾವಣೆ  ಬಗ್ಗೆ ಗುಸುಗುಸು  ಚರ್ಚೆ ನಡೆಯುತ್ತಿರುವಾಗಲೇ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂಬ ಹೇಳಿಕೆ ಕೊಡುವ ಮೂಲಕ ಸಚಿವ ಎಂಟಿಬಿ ನಾಗರಾಜ್ ಬಿಎಸ್‌ವೈ ಪರವಾಗಿ ಪರೋಕ್ಷ ಬ್ಯಾಟಿಂಗ್ ಮಾಡಿದ್ದಾರೆ. 

ನಗರದಲ್ಲಿ ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿದ ಎಂಟಿಬಿ ನಾಗರಾಜ್   ಸಿಎಂಗೆ ಎರಡು ಬಾರಿ ಕೊರೋನಾ ಪಾಸಿಟಿವ್ ಬಂದರೂ ಅವರು ವಿಶ್ರಮಿಸದೇ ಎದೆಗುಂದದೆ  ರಾಜ್ಯದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ತಕ್ಷಣ ರಾಜೀನಾಮೆ ಕೊಡಲಿ : ಸಚಿವರೋರ್ವರ ವಿರುದ್ಧ ರೇಣುಕಾಚಾರ್ಯ ಗರಂ

ಸದ್ಯದ ಪರಿಸ್ಥಿತಿಯಲ್ಲಿ  ಕೊರೋನಾ ಸೋಂಕಿನಿಂದ ಆತಂಕದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಎಲ್ಲಾ ಸಚಿವರು ಶಾಸಕರು ಇತ್ತ ಗಮನಹರಿಸಬೇಕು. ಅದನ್ನು ಬಿಟ್ಟು ನಾಯಕತ್ವ ಬದಲಾವಣೆ ಚರ್ಚೆ ಮಾಡಬಾರದು ಎಂದು ಕಿವಿಮಾತು ಹೇಳಿದರು. 

ಒಂದು ವೇಳೆ ನಾಯಕತ್ವ ಬದಲಾವಣೆ ಸಂದರ್ಭ ಬಂದರೆ ಬಿಜೆಪಿ ಹೈ ಕಮಾಂಡ್ ಅದರ ನಿರ್ಧಾರ ತೆಗೆದುಕೊಳ್ಳುತ್ತೆ. ಆದರೆ ಈಗ  ನಾಯಕತ್ವ ಬದಲಾವಣೆ ಪ್ರಶ್ನೆ ಇದ್ಬವಿಸಿಲ್ಲ ಎಂದರು.