ರಾಮನಗರ ಜಿಲ್ಲೆ ಹೆಸರು ಬದಲಾವಣೆ: ಬೆಂಗ್ಳೂರು ಹೆಸರು ಇಟ್ಟರೆ ಅಭಿವೃದ್ಧಿ ಆಗುತ್ತೆ, ಸಚಿವ ಕೃಷ್ಣಭೈರಗೌಡ

ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತಾಲೇ ಇದ್ದಿದ್ದು. 2007 ಕ್ಕೂ ಮೊದಲು ಅದೇ ಹೆಸರು ಇತ್ತು. ಅವರು ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿದ್ದವರು. ಕೆಂಪೇಗೌಡರ ಆಳ್ವಿಕೆ ಮಾಗಡಿಯಲ್ಲೂ ಇತ್ತು. ಬೆಂಗಳೂರು ಅಂತ ಹೆಸರು ಇಟ್ಟರೇ ಅಭಿವೃದ್ಧಿ ಆಗುತ್ತೆ, ಅಂತಾರಾಷ್ಟ್ರೀಯ ‌ಕಂಪನಿಗಳು ಬರುತ್ತವೆ. ಮತ್ತೊಂದು ಏರ್‌ಪೋರ್ಟ್ ಮಾಡಲು ಸಾಧ್ಯವಾಗುತ್ತದೆ: ಸಚಿವ ಕೃಷ್ಣಭೈರಗೌಡ  

minister krishna byre gowda react to ramnagara district name change grg

ಮಂಡ್ಯ(ಜು.27):  ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಮನಗರ ‌ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕರು, ಸಾರ್ವಜನಿಕರು ಸರ್ಕಾರಕ್ಕೆ ಮನವಿ ಮಾಡಿದ್ರು. ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತಾಲೇ ಇದ್ದಿದ್ದು. 2007 ಕ್ಕೂ ಮೊದಲು ಅದೇ ಹೆಸರು ಇತ್ತು. ಅವರು ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿದ್ದವರು. ಕೆಂಪೇಗೌಡರ ಆಳ್ವಿಕೆ ಮಾಗಡಿಯಲ್ಲೂ ಇತ್ತು. ಬೆಂಗಳೂರು ಅಂತ ಹೆಸರು ಇಟ್ಟರೇ ಅಭಿವೃದ್ಧಿ ಆಗುತ್ತೆ, ಅಂತಾರಾಷ್ಟ್ರೀಯ ‌ಕಂಪನಿಗಳು ಬರುತ್ತವೆ. ಮತ್ತೊಂದು ಏರ್‌ಪೋರ್ಟ್ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಮನವಿ ಮಾಡಿದ್ದಾರೆ. ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ ಎಂದು ಕಂದಾಯ ಸಚಿವ ಕೃಷ್ಣಭೈರಗೌಡ ತಿಳಿಸಿದ್ದಾರೆ. 

ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರಗೌಡ ಅವರು, ಕೇಂದ್ರದಿಂದಲೂ ಎನ್‌ಒಸಿ ಪಡೆಯಬೇಕು, ಅದನ್ನು ‌ಮಾಡುತ್ತೇವೆ ಎಂದು ಹೇಳಿದ್ದಾರೆ. 

'ಭೂಮಿ ಇರೋತನಕ ರಾಮನಗರ ಹೆಸರು ತೆಗೆಯಲು ಸಾಧ್ಯವಿಲ್ಲ; ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಗುಡುಗು

ಈ ಹಿಂದೆ ರಾಮನಗರ ಅಂತಾ ನಾಮಕರಣ ‌ಮಾಡಿದಾಗ ವಿರೋಧ ಮಾಡುವುದು ಬಿಡುವುದು ಆಯ್ತು. ಕೆಂಪೇಗೌಡರು ಆಳ್ವಿಕೆ ಮಾಡಿದ್ದರಿಂದ ಅಲ್ಲಿಯೂ ಬೆಂಗಳೂರು ಇರಬೇಕು ಎಂಬುದು ಒಂದು ಕಡೆ. ಬೆಂಗಳೂರು ದಕ್ಷಿಣ ಅಂತಾ ಹೆಸರು ಇಟ್ಟರೇ ಸಾಕಷ್ಟು ಅಭಿವೃದ್ಧಿ ಆಗುತ್ತದೆ. ಮತ್ತೊಂದು ಕಡೆ ಜನರಿಗೆ ಅನುಕೂಲ ಆಗುತ್ತೆ ಅಂತಾ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios