ನೆಹರು ಒಪ್ಪಿದ್ದ ಆರ್‌ಎಸ್‌ಎಸ್‌ನ್ನು ಕಾಂಗ್ರೆಸ್ಸಿಗರೂ ಒಪ್ಪಿಕೊಳ್ಳಲಿ: ಸಚಿವ ಪೂಜಾರಿ
* ಮತಾಂತರ ತಡೆ ಬಗ್ಗೆ ಏನು ಮಾಡಬೇಕೆಂದು ಸರ್ಕಾರ ಯೋಚಿಸುತ್ತೆ
* ಪರೋಕ್ಷ, ಪ್ರತ್ಯಕ್ಷ ವಂಚನೆಯಂತಿರುವ ಮತಾಂತರವನ್ನು ಸರ್ಕಾರ ಒಪ್ಪಲ್ಲ
* ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಸಿದ್ದರಾಮಯ್ಯ ಆರ್‌ಎಸ್‌ಎಸ್ ಒಪ್ಪಿಕೊಳ್ಳಲಿ
ಬೀದರ್(ಸೆ.30): ಗಣರಾಜೋತ್ಸವಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಪಥ ಸಂಚಲನಕ್ಕೆ ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು(Jawaharlal Nehru) ಅವರೇ ಅವಕಾಶ ಕೊಟ್ಟಿದ್ದರು. ಹೀಗಾಗಿ ನೆಹರು ಗೌರವಿಸಿದ್ದ ಆರ್‌ಎಸ್‌ಎಸ್ ಅನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ(Kota Shrinivas Poojari) ಹೇಳಿದರು.
ಸಂಘ ಪರಿವಾರ, ಬಿಜೆಪಿಯವರು(BJP) ತಾಲಿಬಾನಿಗಳು(Taliban) ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ನಗರದಲ್ಲಿ ಭೇಟಿಯಾದ ಮಾಧ್ಯಮದವರಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್(Congress) ಸಿದ್ಧಾಂತವನ್ನು ಒಪ್ಪಿಕೊಂಡಿರುವ ಸಿದ್ದರಾಮಯ್ಯ ಅವರು ನೆಹರೂ ಅವರನ್ನು ಗೌರವಿಸುತ್ತಾರೆ ಅಂದ್ರೆ ಆರ್‌ಎಸ್‌ಎಸ್ ಒಪ್ಪಿಕೊಳ್ಳಲಿ. ಇನ್ನು ಚೀನಾ-ಭಾರತದ ಯುದ್ಧದ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಟ್ಟಿರುವ ಶ್ರಮವನ್ನು ಒಂದೊಮ್ಮೆ ನೆನಪಿಸಿಕೊಳ್ಳಲಿ. ರಾಷ್ಟ್ರ ಭಕ್ತ ಸಂಘಟನೆಯನ್ನು ತಾಲಿಬಾನಿಗಳಿಗೆ ಹೋಲಿಸುವರ ಮಾನಸಿಕತೆ ಬಗ್ಗೆ ನೋವಿದೆ ಎಂದು ವ್ಯಂಗ್ಯವಾಡಿದರು.
ಅಕ್ರಮ ಇದ್ದರೆ ಐಟಿ ಬಿಜೆಪಿ ಮೇಲೂ ದಾಳಿ ಮಾಡುತ್ತೆ: ಸಚಿವ ಕೋಟ
ಆರ್ಥಿಕ ಸಂಕಷ್ಟದಲ್ಲಿ ಇರುವವರನ್ನು ಮತಾಂತರ ಮಾಡುತ್ತಿದ್ದು, ಇದು ಕಳವಳಕಾರಿ ವಿಷಯ. ಈ ಕುರಿತಂತೆ ಸರ್ಕಾರ ಏನಾದರೂ ಮಾಡಬೇಕು ಎಂದು ಅನೇಕ ಹಿರಿಯರು ಹೇಳಿದ್ದಾರೆ. ಮತಾಂತರ ತಡೆ ಬಗ್ಗೆ ಏನು ಮಾಡಬೇಕೆಂದು ಸರ್ಕಾರ ಯೋಚಿಸುತ್ತೆ. ಪರೋಕ್ಷ, ಪ್ರತ್ಯಕ್ಷ ವಂಚನೆಯಂತಿರುವ ಮತಾಂತರವನ್ನು ಸರ್ಕಾರ ಒಪ್ಪಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.